Home Mangalorean News Kannada News ವೆನ್ ಲಾಕ್ ಆಸ್ಪತ್ರೆಯಲ್ಲಿ ಕೋವಿಡ್ 19 ಚಿಕಿತ್ಸೆಯ ಬಗ್ಗೆ ಅಪಪ್ರಚಾರ – ದೂರು ದಾಖಲು

ವೆನ್ ಲಾಕ್ ಆಸ್ಪತ್ರೆಯಲ್ಲಿ ಕೋವಿಡ್ 19 ಚಿಕಿತ್ಸೆಯ ಬಗ್ಗೆ ಅಪಪ್ರಚಾರ – ದೂರು ದಾಖಲು

Spread the love

ವೆನ್ ಲಾಕ್ ಆಸ್ಪತ್ರೆಯಲ್ಲಿ ಕೋವಿಡ್ 19 ಚಿಕಿತ್ಸೆಯ ಬಗ್ಗೆ ಅಪಪ್ರಚಾರ – ದೂರು ದಾಖಲು

ಮಂಗಳೂರು: ವೆನ್ಲಾಕ್ ಆಸ್ಪತ್ರೆಯಲ್ಲಿ ಕೋವಿಡ್-19 ಸಂಶಾಯಾಸ್ಪದ ಪ್ರಕರಣಗಳಿಗೆ 8 ವಿಶೇಷ ಪ್ರತ್ಯೇಕ ಕೊಠಡಿಗಳನ್ನು ಕಾದಿರಿಸಲಾಗಿದೆ. ಸಂಶಯಾಸ್ಪದ ಪ್ರಕರಣಗಳು ಬಂದರೆ, ಅಂತಹ ರೋಗಿಗಳನ್ನು ಈ ಕೊಠಡಿಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಬ್ಬೊಬ್ಬರನ್ನು ಒಂದೊಂದು ಕೊಠಡಿಗೆ ಕಾದಿರಿಸಿ ದಾಖಲಿಸಲಾಗುತ್ತಿದೆ. ಅವರ ಗಂಟಲುದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ.

ಪರೀಕ್ಷೆ ನೆಗೆಟಿವ್ ಬಂದರೆ ಅವರಿಗೆ 14 ದಿನಗಳ ನಿಗಾವಣೆಯಲ್ಲಿರಲು ಸೂಚನೆ ನೀಡಿ ಮನೆಗೆ ಕಳುಹಿಸಲಾಗುತ್ತಿದೆ.

ಪೊಸಿಟಿವ್ ಬಂದರೆ, ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶಿಯಂತೆ ಚಿಕಿತ್ಸೆ ಕೊಡಲಾಗುತ್ತದೆ. ಇದಕ್ಕಾಗಿ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ, ವೆನ್ ಲಾಕ್ ನಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ವಿಶೇಷವಾದ ಪ್ರತ್ಯೇಕ ಕೊಠಡಿಗಳಲ್ಲಿ ಈ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತೀ ರೋಗಿಗೂ ಎಲ್ಲ ರೀತಿಯ ಜೈವಿಕ ಮೆಡಿಕಲ್ ವ್ಯವಸ್ಥೆ ಕಲ್ಪಿಸಿ, ಇಲಾಖೆಯ ಮಾರ್ಗಸೂಚಿಗಳಂತೆ ತಜ್ಞವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

ವೆನ್ ಲಾಕ್ ಆಸ್ಪತ್ರೆಯಲ್ಲಿ ಕೋವಿಡ್ 19 ಬಗ್ಗೆ ಜಾಗೃತಿ, ಮಾಹಿತಿ ನೀಡಲು ಹೆಲ್ಪ್ ಡೆಸ್ಕ್ ಅಲ್ಲಲ್ಲಿ ಸ್ಥಾಪಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೆನ್ ಲಾಕ್ ಆಸ್ಪತ್ರೆಯಲ್ಲಿ ಕೋವಿಡ್ 19 ಚಿಕಿತ್ಸೆಯ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಬಗ್ಗೆ ಸೈಬರ್ ಪೊಲೀಸರಿಗೆ ಹಾಗೂ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಲಾಗುತ್ತಿದೆ.


Spread the love

Exit mobile version