Spread the love
ವೆಲಾಂಕಣಿ ಗ್ರೊಟ್ಟೊ ಧ್ವಂಸ; ಸೆ.30 ರಂದು ಚರ್ಚುಗಳಿಂದ ಪ್ರತಿಭಟನೆ ಇಲ್ಲ- ವಂ ವಿಜಯ್ ವಿಕ್ಟರ್ ಸ್ಪಷ್ಟನೆ
ಮಂಗಳೂರು: ವಿಟ್ಲ-ಕೊಳ್ನಾಡು ಗ್ರಾಮದ ಕುಲಾಳು ಎಂಬಲ್ಲಿ ವೆಲಂಕನಿ ಮಾತೆಯ ಗುಡಿಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ ಕುರಿತು ಸಪ್ಟೆಂಬರ್ 30ರಂದು ಯಾವುದೇ ಚರ್ಚುಗಳ ವತಿಯಿಂದ ಪ್ರತಿಭಟನೆ ಇಲ್ಲ ಎಂದು ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ. ವಿಜಯ್ ವಿಕ್ಟರ್ ಲೋಬೊ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು ಕೆಲವೊಂದು ಮಾಧ್ಯಮಗಳಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ತಪ್ಪು ಮಾಹಿತಿ ಪ್ರಕಟವಾಗಿದೆ. ಆದರೆ ಅಂತಹ ಯಾವುದೇ ರೀತಿಯ ಪ್ರತಿಭಟನೆ ಯಾವುದೇ ಚರ್ಚುಗಳ ವತಿಯಿಂದ ಆಯೋಜಿಸಲಾಗಿಲ್ಲ ಎಂದು ಹೇಳಿರುವ ಅವರು ಕಾನೂನಿನಲ್ಲಿ ತಮಗೆ ಸಂಪೂರ್ಣ ನಂಬಿಕೆಯಿದ್ದು ಈ ವರೆಗೆ ಕಾನೂನು ಇಲಾಖೆ ಕೈಗೊಂಡಿರುವ ಕ್ರಮಗಳ ಬಗ್ಗೆ ತೃಪ್ತಿ ಹೊಂದಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Spread the love