Home Mangalorean News Kannada News ವೇದ ಕಾಲದಿಂದಲೇ ಶ್ರೀ ಗಣೇಶನ ಆರಾಧನೆ : ಡಾ|ಎ.ವಿ.ಶೆಟ್ಟಿ

ವೇದ ಕಾಲದಿಂದಲೇ ಶ್ರೀ ಗಣೇಶನ ಆರಾಧನೆ : ಡಾ|ಎ.ವಿ.ಶೆಟ್ಟಿ

Spread the love

ವೇದ ಕಾಲದಿಂದಲೇ ಶ್ರೀ ಗಣೇಶನ ಆರಾಧನೆ : ಡಾ|ಎ.ವಿ.ಶೆಟ್ಟಿ

ಮಂಗಳೂರು: ವೇದ ಕಾಲದಿಂದಲೇ ಶ್ರೀ ಗಣೇಶನ ಆರಾಧನೆ ನಡೆಯುತ್ತಿದ್ದು, ಸಾರ್ವಜನಿಕವಾಗಿ ಶ್ರೀ ಗಣೇಶನನ್ನು ಪೂಜಿಸುವುದರಿಂದ ಸಮಾಜದ ಐಕ್ಯತೆ ಸಾಧ್ಯ ಎಂದು ಎಂದು ಮಂಗಳೂರಿನ ಹಿರಿಯ ಹೃದ್ರೋಗ ತಜ್ಞ ಡಾ|ಎ.ವಿ.ಶೆಟ್ಟಿ ಅವರು ಅಭಿಪ್ರಾಯಪಟ್ಟರು.

ಶ್ರೀ ಸಿದ್ಧಿವಿನಾಯಕ ಪ್ರತಿಷ್ಟಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಮಂಗಳೂರಿನ ಬಂಟ್ಸ್ ಹಾಸ್ಟೆಲ್‍ನ ಓಂಕಾರನಗರದಲ್ಲಿ 3 ದಿನಗಳ ಕಾಲ ನಡೆಯುವ 13ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ನಡೆದ ತೆನೆಹಬ್ಬದಲ್ಲಿ ಸಾಂಕೇತಿಕವಾಗಿ ತೆನೆ ವಿತರಿಸಿ ಅವರು ಮಾತನಾಡಿದರು.

ಸನಾತನವಾದ ಹಿಂದೂ ಧರ್ಮ ಅತ್ಯಂತ ಶ್ರೇಷ್ಟ ಧರ್ಮವಾಗಿದ್ದು, ಹಿಂದೂಗಳು ಕ್ಷಮಾಗುಣ ಸಂಪನ್ನರು ಎಂದು ಅವರು ಹೇಳಿದರು. ಉದ್ಯಮಿ, ಸುರತ್ಕಲ್ ಬಂಟರ ಸಂಘದ ಮಾಜಿ ಅಧ್ಯಕ್ಷ ಎಮ್. ದೇವಾನಂದ ಶೆಟ್ಟಿ ಅವರು ಗಣೇಶೋತ್ಸವ ಉದ್ಘಾಟಿಸಿ, ಶುಭ ಹಾರೈಸಿದರು.

image023tene-habba-ganeshotsava-20160905-023

ಧ್ವಜಾರೋಹಣ ನೆರವೇರಿಸಿದ ಕರ್ನಲ್ ರಮೇಶ್ ಶೆಟ್ಟಿ ಅವರು ಮಾತನಾಡಿ, ದೇಶಸೇವೆ ಸರ್ವ ಶ್ರೇಷ್ಟ ಸೇವೆಯಾಗಿದೆ. ಅಪೂರ್ವ ನಾಯಕತ್ವದ ಗುಣ ಹೊಂದಿರುವ ಬಂಟರು ಶೃದ್ಧಾಭಕ್ತಿಯಿಂದ ಹಾಗೂ ವ್ಯವಸ್ಥಿತ ರೀತಿಯಲ್ಲಿ ಗಣೇಶೋತ್ಸವವನ್ನು ಆಯೋಜಿಸುತ್ತಿರುವುದು ಅಭಿನಂದನೀಯ ಎಂದರು.

ವತ್ಸಲಾ ಆರ್.ಶೆಟ್ಟಿ, ಚಂದ್ರಲೇಖ ಎ.ಶೆಟ್ಟಿ, ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸಿಎ ಶಾಂತಾರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದಿವಾಕರ ಸಾಮಾನಿ ಚೇಳ್ಯಾರುಗುತ್ತು, ಕೋಶಾಧಿಕಾರಿ ಕೃಷ್ಣರಾಜ ಸುಲಾಯ, ಟ್ರಸ್ಟಿಗಳಾದ ಶೆಡ್ಡೆ ಮಂಜುನಾಥ ಭಂಡಾರಿ, ಕೃಷ್ಣ ಪ್ರಸಾದ್ ರೈ, ಡಾ|ಆಶಾಜ್ಯೋತಿ ರೈ, ಬಾಲಕೃಷ್ಣ ಶೆಟ್ಟಿ ಬೆಳ್ಳಿ ಬೆಟ್ಟು ಗುತ್ತು, ರವಿರಾಜ ಶೆಟ್ಟಿ ನಿಟ್ಟೆ ಗುತ್ತು, ಬಂಟರ ಮಾತೃ ಸಂಘದ ಉಪಾಧ್ಯಕ್ಷ ಕೆಂಚನೂರು ಸೋಮಶೇಖರ್ ಶೆಟ್ಟಿ, ಕೋಶಾಧಿಕಾರಿ ಸಿಎ ಮನಮೋಹನ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಶ್ರೀ ಸಿದ್ಧಿವಿನಾಯಕ ಪ್ರತಿಷ್ಟಾನದ ಆಡಳಿತ ಟ್ರಸ್ಟಿ ಕೆ.ಅಜಿತ್ ಕುಮಾರ್ ರೈ ಮಾಲಾಡಿ ಅವರು ಸ್ವಾಗತಿಸಿ, ಪ್ರಸ್ತಾವನೆಗೈದರು. ಸತೀಶ್ ಶೆಟ್ಟಿ ಕೊಡಿಯಾಲ್‍ಬೈಲ್ ಕಾರ್ಯಕ್ರಮ ನಿರ್ವಹಿಸಿದರು. ಸಮಿತಿಯ ಜೊತೆ ಕಾರ್ಯದರ್ಶಿ ಶಶಿರಾಜ್ ಶೆಟ್ಟಿ ಕೊಳಂಬೆ ವಂದಿಸಿದರು.


Spread the love

Exit mobile version