ವೇಶ್ಯಾವಾಟಿಕೆ ಆರೋಪದಡಿ ನಾಲ್ವರ ಬಂಧನ

Spread the love

ವೇಶ್ಯಾವಾಟಿಕೆ ಆರೋಪದಡಿ ನಾಲ್ವರ ಬಂಧನ

ಮಂಗಳೂರು: ನಗರದ ಕರಂಗಲ್ಪಾಡಿ ಬಳಿಯಿರುವ ಅಪಾರ್ಟ್ ಮೆಂಟ್ ಒಂದರಲ್ಲಿ ವೇಶ್ಯಾವಾಟಿಕ ನಡೆಸುತ್ತಿದ್ದರು ಎಂಬ ಆರೋಪದ ಮೇಲೆ ನಾಲ್ವರನ್ನು ಸಿಸಿಬಿ ಪೋಲಿಸರು ಬಂಧಿಸಿದ್ದಾರೆ.

ಬಂಧಿತರನ್ನು ಕಾವಳಪಡೂರು ಗ್ರಾಮದ ವಗ್ಗ ನಿವಾಸಿ ಸಂತೋಷ್ ಕುಮಾರು (32), ಬಿಜೆಯ್ ಕಾಪಿಕಾಡ್ ಬಾಳೆಬೈಲು ನಿವಸಿ ದೀಪಕ್ (26), ತೊಕ್ಕೊಟ್ಟು ಪೆರ್ಮನ್ನೂರು ನಿವಾಸಿ ನವೀನ್ (40), ಪಿಂಪ್ ದಾವಣಗೆರೆ ನಿವಾಸಿ ಆಶಾ ಜಿ (23) ಎಂದು ಗುರುತಿಸಲಾಗಿದ್ದು ಧಾಳಿಯ ವೇಳೆ ಇಬ್ಬರು ಮಹಿಳೆಯನ್ನುರ ರಕ್ಷಿಸಲಾಗಿದೆ.

ಬಂಧಿತರಿಂದ 31,500 ರೂ ನಗದು, 7 ಮೊಬೈಲ್, 2 ಬೈಕ್ ಸೇರಿದಂತೆ ಒಟ್ಟು 2,06,100 ರೂ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿ ಆಶಾ ಎಂಬಾಕೆ ಅಪಾರ್ಟ್ ಮೆಂಟವೊಂದನ್ನು ಬಾಡಿಗೆ ಪಡೆದು ಯುವತಿಯರನ್ನು ಇಟ್ಟುಕೊಂಡು ಸಂತೋಷ್ ಎಂಬಾತನ ಸಹಾಯದೊಂದಿಗೆ ವೇಶ್ಯಾವಾಟಿಕೆ ಧಂಧೆ ನಡೆಸುತ್ತಿದ್ದಳು ಎಂದು ಆರೋಪಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾದ ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತುಗಳನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಪೂರ್ವ ಪೋಲಿಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಪೋಲಿಸ್ ಆಯುಕ್ತ ಟಿ.ಆರ್.ಸುರೇಶ್ ಅವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಹನುಮಂತರಾಯ ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಅಧಿಕಾರಿಗ ಹಾಗೂ ಸಿಬಂದಿಗಳು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.


Spread the love