ವೇಶ್ಯಾವಾಟಿಕೆ ನಡೆಸುತ್ತಿದ್ದ ವಸತಿಗ್ರಹಕ್ಕೆ ಧಾಳಿ ; ಮೂವರ ಬಂಧನ

Spread the love

ವೇಶ್ಯಾವಾಟಿಕೆ ನಡೆಸುತ್ತಿದ್ದ ವಸತಿಗ್ರಹಕ್ಕೆ ಧಾಳಿ ; ಮೂವರ ಬಂಧನ

ಮಂಗಳೂರು : ನಗರದ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಡೀಲ್ ನ ಫ್ಲಾಟ್ ವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಪಿಂಪ್  ಹಾಗೂ 2 ಮಂದಿ ಗಿರಾಕಿಗಳನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಬಂಧಿತರನ್ನು ಅಡ್ಯಾರು ನಿವಾಸಿ ಅಬ್ದುಲ್ ನಾಸೀರ್ @ ಶಾನ್, ಪ್ರಾಯ(36), ಬಂಟ್ವಾಳ ನಿವಾಸಿ ಇಸ್ಮಾಯಿಲ್ @ ಅಜ್ಮಲ್, ಪ್ರಾಯ(36), ಮತ್ತು ಬೆಂಗಳೂರು ತಣಿಸಾಂದ್ರ ನಿವಾಸಿ ಸಮೀರ್ ಬಾಷಾ @ ಬಾಷಾ, ಪ್ರಾಐ(28) ಎಂದು ಗುರುತಿಸಲಾಗಿದೆ,

ದಿನಾಂಕ: 11-11-2017 ರಂದು ಮಂಗಳೂರು ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಳಪೆ ಗ್ರಾಮದ ಪಡೀಲ್ ನ ತುಂಬೆ ಪ್ಲಾಝಾ ಆಪಾರ್ಟ್ ಮೆಂಟ್ ನ 10 ನೇ ಮಹಡಿಯ ಫ್ಲಾಟ್ ನಂಬ್ರ: 1005 ರಲ್ಲಿ ಯುವತಿಯರನ್ನು ಇಟ್ಟುಕೊಂಡು  ವೇಶ್ಯಾವಾಟಿಕೆ ನಡೆಸುತ್ತಿದ್ದಾರೆಂಬ ಖಚಿತ ಮಾಹಿತಿಯಂತೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ವೇಶ್ಯಾವಾಟಿಕೆಯಲ್ಲಿ ನಿರತರಾಗಿದ್ದ  ಆರೋಪಿಗಳನ್ನು  ಎಂಬವರನ್ನು ವಶಕ್ಕೆ ಪಡೆದುಕೊಂಡು, ಅವರ ವಶದಿಂದ ನಗದು ಹಣ ರೂ. 21,750/- 5 ಮೊಬೈಲ್ ಫೋನ್ ಗಳು, ಒಟ್ಟು ರೂ. 36,750/- ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ.  ಆರೋಪಿಗಳ ಪೈಕಿ ಅಬ್ದುಲ್ ನಾಸೀರ್ ಎಂಬಾತನು ತುಂಬೆ ಫ್ಲಾಝಾ ಆಪಾರ್ಟ್ ಮೆಂಟ್ ನ ಫ್ಲಾಟ್ ನಂಬ್ರ: 1005 ನ್ನು ಬಾಡಿಗೆಗೆ ಪಡೆದು ಯುವತಿಯರನ್ನು ಈ ಫ್ಲಾಟ್ ನಲ್ಲಿ ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆಗೆ ಬಳಸಿಕೊಂಡು ಹಣವನ್ನು ಗಳಿಸುತ್ತಿದ್ದನು.. ವೇಶ್ಯಾವಾಟಿಕೆ ವೃತ್ತಿ ನಡೆಸುತ್ತಿದ್ದ ಇಬ್ಬರು ನೊಂದ ಯುವತಿಯರನ್ನು ರಕ್ಷಣೆ ಮಾಡಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾದ 3 ಮಂದಿ ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಕಂಕನಾಡಿ ನಗರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಪೊಲೀಸ್ ಕಮೀಷನರ್ ಶ್ರೀ ಟಿ. ಆರ್ ಸುರೇಶ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ  ಶ್ರೀ. ಹನುಮಂತರಾಯ ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಯವರಾದ   ಶ್ರೀಮತಿ ಉಮಾ ಪ್ರಶಾಂತ್ ರವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿಗಳು  ಈ ದಾಳಿಯಲ್ಲಿ ಭಾಗವಹಿಸಿದ್ದರು.


Spread the love