ವೈದ್ಯರ ಕೊರತೆಯ ಕಾರಣ ಚಿಕಿತ್ಸೆ ನಿರಾಕರಿಸಬೇಡಿ : ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ

Spread the love

ವೈದ್ಯರ ಕೊರತೆಯ ಕಾರಣ ಚಿಕಿತ್ಸೆ ನಿರಾಕರಿಸಬೇಡಿ : ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ

ಉಡುಪಿ: ಉಡುಪಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಆಗಮಿಸುವ ಒಳರೋಗಿ/ಹೊರ ರೋಗಿಗಳ ಸಂಖ್ಯೆ ಹೆಚ್ಚಾದಾಗ, ವೈದ್ಯರ ಹಾಗೂ ಸಿಬ್ಬಂದಿಯವರ ಕೊರತೆಯ ಕಾರಣದಿಂದ ಚಿಕಿತ್ಸೆಯನ್ನು ನಿರಾಕರಿಸಿ ವಾಪಸ್ಸು ಕಳುಹಿಸದಂತೆ ಹಾಗ ಆಸ್ಪತ್ರೆಗೆ ಅಗತ್ಯವಿರುವ ವೈದ್ಯರ ನೇಮಕಾತಿ ಮಾಡಿಕೊಳ್ಳುವುದರ ಜೊತೆಗೆ, ತಿಂಗಳಿಗೆ ಕನಿಷ್ಟ 400 ಹೆರಿಗೆಗಳ ಗುರಿಯನ್ನು ಹೊಂದುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚಿಸಿದರು.

ಅವರು ಜುಲೈ 20 ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ , ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನಿರ್ವಹಣೆಯ ಕುರಿತು ನಡೆದ ಉಸ್ತುವಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದಿನದ 24 ಗಂಟೆಯೂ ಗರ್ಭಿಣಿ ಮಹಿಳೆಯರಿಗೆ ಸ್ಕ್ಯಾನಿಂಗ್ ಸೌಲಭ್ಯವನ್ನು ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಒದಗಿಸುವಂತೆ ಆಸ್ಪತ್ರೆಯ ವ್ಯವಸ್ಥಾಪಕರಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಇದಕ್ಕೆ ಸಂಬಂದಿಸಿದಂತೆ ಜುಲೈ ಮಾಹೆಯಲ್ಲಿ ರೇಡಿಯಾಲಿಜಿಸ್ಟ್ರವನ್ನು ಪೂರ್ಣ ನೇಮಕಾತಿ ಮಾಡಿಕೊಳ್ಳುವುದರ ಮೂಲಕ ಈ ಸೌಲಭ್ಯ ಒದಗಿಸುವುದಾಗಿ ಬಿ.ಆರ್.ಎಸ್ ಸಂಸ್ಥೆ ಪರವಾಗಿ ವ್ಯವಸ್ಥಾಪಕರು ತಿಳಿಸಿದರು.

ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಅವಧಿ ಪೂರ್ಣ ಹೆರಿಗೆ ಪ್ರಕರಣ ಬಂದಾಗ ಯಾವುದೇ ದಾಖಲೆಗಳು ಇಲ್ಲದಿದ್ದರು ಸಹ ಒಳರೋಗಿಯಾಗಿ ದಾಖಲು ಮಾಡಿಕೊಂಡು ಚಿಕಿತ್ಸೆಯನ್ನು ನೀಡಬೇಕು, ಚಿಕಿತ್ಸೆಯ ನಂತರದಲ್ಲಿ ದಾಖಲಾತಿಗಳನ್ನು ಪಡೆದುಕೊಳ್ಳುವಂತೆ ಹಾಗೂ ಎ.ಬಿ.ಆರ್.ಕೆ ಯ ಅಡಿಯಲ್ಲಿ ರೆಫ್ರ್ನ್ನು ಜಿಲ್ಲಾ ಸರ್ಜನ್ ಮುಖಾಂತರ ಮಾಡುವಂತೆ ಜಿಲಾಧಿಕಾರಿಗಳು ವ್ಯವಸ್ಥಾಪಕರಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಎನ್.ಐ.ಸಿ.ಯು ವಿಭಾಗದ ಕಾರ್ಯನಿರ್ವಹಣೆಯ ಕುರಿತು ಚರ್ಚಿಸಿದಾಗ, ಪ್ರಸ್ತುತ ಈ ವಿಭಾಗದಲ್ಲಿ 11 ಹಾಸಿಗೆಗಳು 3 ವೆಂಟಿಲೇಟರ್ಗಳು ಸಿದ್ಧವಿದ್ದು, ಈ ವಿಭಾಗದ ಕಾರ್ಯನಿರ್ವಹಣೆಗೆ ಯಾವುದೇ ಸಮಸ್ಯೆಯಿಲ್ಲ ಎಂದು ಮಕ್ಕಳ ತಜ್ಞ ಡಾ.ಗುರುಪ್ರಸಾದ್ ಮಾಹಿತಿ ನೀಡಿದರು.

ಗರ್ಭ ಕೋಶ, ಲ್ಯಾಪೆÇ್ರೀಸ್ಕೋಪಿಕ್, ಪಿ.ಪಿ.ಐ.ಯು.ಸಿ.ಡಿ ಚಿಕಿತ್ಸೆಗೆ ಸಂಬಂದಿಸಿದಂತೆ ಚರ್ಚಿಸಿದಾಗ ಆಸ್ಪತೆಯವರು ಉದರದರ್ಶಕ ಚಿಕಿತ್ಸೆಗೆ ಅನುಕೂಲವಾಗುವಂತೆ ಲ್ಯಾಪೆÇ್ರೀಸ್ಕೋಪಿಕ್ ಯಂತ್ರವನ್ನು ಖರೀದಿಸಿದ್ದು, ತಜ್ಞ ವೈದ್ಯಾಧಿಕಾರಿಗಳ ಮುಖಾಂತರ ಈಗಾಗಲೇ ಉದರ ದರ್ಶಕ ಶಿಬಿರವನ್ನು ನಡೆಸುತ್ತಿರುವುದಾಗಿ ವ್ಯವಸ್ಥಾಪಕರು ಸಭೆಗೆ ತಿಳಿಸಿದರು.

ಪಿ.ಪಿ.ಐ.ಸಿ.ಡಿ ಕಾರ್ಯಕ್ರಮದಡಿಯಲ್ಲಿ ಹೆರಿಗೆ ನಂತರ ವೆಂಕಿ ಅಳವಡಿಸುವ ಕಾರ್ಯಕ್ರಮದ ಪ್ರಗತಿ ಕುಂಠಿತವಾಗಿದ್ದು, ಈ ಬಗ್ಗೆ ಕ್ರಮವಹಿಸುವಂತೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವ್ಯವಸ್ಥಾಪಕರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಸಾರ್ವಜನಿಕ ಆಸ್ಪತ್ರೆ ಕುಂದಾಪುರ ಮತ್ತು ಕಾರ್ಕಳ ಆಸ್ಪತ್ರೆಯಲ್ಲಿ ಈಗಾಗಲೇ ಎನ್.ಆರ್.ಸಿ ವಿಭಾಗ ಪ್ರಾರಂಭವಾಗಿದ್ದು, ಉಡುಪಿ ತಾಲೂಕಿನ ಮಹಿಳಾ ಮತ್ತು ಮಕ್ಕಳ ಆಸ್ಪತೆಯಲ್ಲಿ ಈ ಸೇವೆಯನ್ನು ಪ್ರಾರಂಭಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಸ್ಥಾಪಿಸಿದಾಗ, ಆಸ್ಪತ್ರೆಯ ವ್ಯವಸ್ಥಾಪಕರು ಸೆಪ್ಟಂಬರ್ ಮಾಹೆಯಿಂದ ಈ ಸೇವೆಯನ್ನು ಪ್ರಾರಂಭಿಸುವುದಾಗಿ ಸಭೆಗೆ ಮಾಹಿತಿ ನೀಡಿದರು.

ಉಡುಪಿ ಜಿಲ್ಲೆಯ ಇತರೆ ಆಸ್ಪತ್ರೆಗಳಿಂದ ಗರ್ಭಿಣಿಯರನ್ನು ಮಾಹಿತಿ ನೀಡದೆ ನಮ್ಮ ಆಸ್ಪತ್ರೆಗೆ ಶಿಫಾರಸು ಮಾಡುತ್ತಿದ್ದು, ಇದರಿಂದ ಸಕಾಲದಲ್ಲಿ ಸೇವೆ ನೀಡಲು ಕಷ್ಟವಾಗುತ್ತಿದೆ ಎಂದು ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವ್ಯವಸ್ಥಾಪಕರು ಸಭೆಗೆ ತಿಳಿಸಿದಾಗ, ಈ ಬಗ್ಗೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ಉಡುಪಿ ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತೆಯ ವೈದ್ಯಾಧಿಕಾರಿಗಳು ಮತ್ತು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಕರ್ತವ್ಯ ನಿರತ ವೈದ್ಯರನ್ನು ಒಳಗೊಂಡಂತೆ ಒಂದು ವಾಟ್ಸ್ಆಪ್ ಗ್ರೂಪ್ನ್ನು ರಚಿಸುವಂತೆ ಸಮಿತಿಯ ಸದಸ್ಯರಿಗೆ ಸೂಚಿಸಿದರು.

ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ದಾಖಲಾತಿಗೆ ಬಂದಂತಹ ಕೆಲವರಲ್ಲಿ 18 ವರ್ಷದ ಒಳಗಿನ ಕೆಲವರು ಗುರುತಿನ ಚೀಟಿಯಿಲ್ಲದೆ ದಾಖಲಾಗಿ ನಂತರದಲ್ಲಿ ತಲೆಮರೆಸಿಕೊಳ್ಳುತ್ತಿದ್ದು, ಇದರಿಂದ ಪ್ರಕರಣ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ವ್ಯವಸ್ಥಾಪಕರು ತಿಳಿಸಿದಾಗ, ಇಂತಹ ಪ್ರಕರಣ ದಾಖಲಾದಲ್ಲಿ ಆಸ್ಪತ್ರೆಯ ಸಿ.ಸಿಟಿ.ವಿ ಪ್ರತಿಯೊಂದಿಗೆ ಪೆÇೀಲಿಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಸಭೆಯಲ್ಲಿ ಬೆಂಗಳೂರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಜಂಟಿ ನಿರ್ದೇಶಕರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಓಂ ಪ್ರಕಾಶ್ ಕಟ್ಟಿಮನಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಮಧುಸೂದನ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.


Spread the love