Home Mangalorean News Kannada News ವ್ಯಕ್ತಿಯ ಕೊಲೆಗೆ ಯತ್ನ ; ಇಬ್ಬರ ಬಂಧನ

ವ್ಯಕ್ತಿಯ ಕೊಲೆಗೆ ಯತ್ನ ; ಇಬ್ಬರ ಬಂಧನ

Spread the love

ವ್ಯಕ್ತಿಯ ಕೊಲೆಗೆ ಯತ್ನ ; ಇಬ್ಬರ ಬಂಧನ

ಮಂಗಳೂರು: ಮಂಗಳೂರು ನಗರದ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರ ಕೊಲೆಗೆ ಯತ್ನಿಸಿದ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಬಂಧಿತರನ್ನು ಜೆಪ್ಪಿನಮೊಗರು ನಿವಾಸಿಗಳಾದ ಶಿವರಾಮ ರೈ (45), ಸುಶಾನ್ ರೈ (29) ಎಂದು ಗುರುತಿಸಲಾಗಿದೆ.

ಘಟನೆಯ ವಿವರ: ಮಾರ್ಚ್ 7 ರಂದು ಸಂಜೆ 6-00 ಗಂಟೆ ಸುಮಾರಿಗೆ ಮಂಗಳೂರು ನಗರದ ಜೆಪ್ಪಿನಮೊಗರು ಕಾಡಬರೆಗದ್ದೆ ಎಂಬಲ್ಲಿನ ನಿವಾಸಿ ನೌಫಲ್ ಇಬ್ರಾಹೀಂ ಎಂಬವರಿಗೆ ಶಿವರಾಮ ರೈ ಮತ್ತು ಪಾಪು @ ಸುಶಾನ್ ರೈ ಎಂಬವರು ಕ್ಷುಲಕ ಕಾರಣಕ್ಕೆ ಚೂರಿಯಿಂದ ಇರಿದು,ವಿಕೆಟ್ ನಿಂದ ಹಲ್ಲೆ ನಡೆಸಿದ್ದು, ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಯಲ್ಲಿರುತ್ತದೆ. ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಮಂಗಳೂರು ನಗರದ ಪಂಪ್ ವೆಲ್ ಬಳಿಯಿಂದ ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಕಂಕನಾಡಿ ನಗರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ. ಆರೋಪಿಗಳು ಹಾಗೂ ಗಾಯಗೊಂಡ ನೌಫಲ್ ಇಬ್ರಾಹೀಂ ಎಂಬವರು ಹಳೆಯ ಸ್ನೇಹಿತರಾಗಿದ್ದು, ನೌಫಲ್ ಇಬ್ರಾಹೀಂ ಹಾಗೂ ಇತರರಲ್ಲಿ ಗಾಂಜಾ ಸೇವನೆ ಮಾಡದಂತೆ ಈ ಹಿಂದೆ ಹಲವಾರು ತಿಳಿಸಿದ್ದರೂ ಕೂಡಾ ಪುನಃ ಗಾಂಜಾ ಸೇವನೆಯನ್ನು ಮುಂದುವರಿಸಿದ್ದರಿಂದ ಆತನಲ್ಲಿ ವೈಯಕ್ತಿಕ ದ್ವೇಷದಿಂದ  ಈ ಕೃತ್ಯವನ್ನು ವೆಸಗಿರುವುದಾಗಿದೆ.

ಆರೋಪಿಗಳ ಪೈಕಿ ಶಿವರಾಮ ರೈ ಎಂಬಾತನು ಈ ಹಿಂದೆ ಸುಮಾರು 20 ವರ್ಷಗಳ ಹಿಂದೆ ಕೊಲೆ, ಕೊಲೆ ಯತ್ನ, ಬೆದರಿಕೆ ಹಾಗೂ ಇತರ ಒಟ್ಟು 7 ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಈತನ ವಿರುದ್ಧ ಹಿಂದೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ಕೂಡಾ ತೆರೆಯಲಾಗಿತ್ತು.

ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಸುನೀಲ್ ವೈ ನಾಯ್ಕ್ ಮತ್ತು ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು  ಭಾಗವಹಿಸಿದ್ದರು.

 


Spread the love

Exit mobile version