ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯ ಪ್ರವೇಶ ವಿಚಾರ: ಐತಿಹಾಸಿಕ ತೀರ್ಪು- ಸಚಿವೆ ಜಯಮಾಲಾ
ಬೆಂಗಳೂರು: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯ ಪ್ರವೇಶ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ ಎಂದು ಸಚಿವೆ ಜಯಮಾಲಾ ತಿಳಿಸಿದ್ದಾರೆ.
ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯ ಪ್ರವೇಶ ವಿಚಾರದಲ್ಲಿ ಸುಪ್ರೀಂನಿಂದ ಇಬ್ಬರೂ ಸಮಾನರೆಂಬ ತೀರ್ಪು ಹಿನ್ನೆಲೆಯಲ್ಲಿ ಸಚಿವೆ ಜಯಮಾಲಾ ಈ ಪ್ರತಿಕ್ರಿಯೆ ನೀಡಿದ್ದಾರೆ.
ಇದೊಂದು ಐತಿಹಾಸಿಕ ತೀರ್ಪು, ದೇಶದ ಹೆಣ್ಣು ಮಕ್ಕಳಿಗೊಂದು ನ್ಯಾಯ ಸಿಕ್ಕಂತಾಗಿದೆ. ಇದಕ್ಕಿಂತ ಸಂತೋಷ ಬೇರೊಂದಿಲ್ಲ. ಅಂಬೇಡ್ಕರ್ ಕೊಟ್ಟ ಸಂವಿಧಾನನಕ್ಕೆ ನಾವು ಚಿರಋಣಿ ಎಂದ ಅವರು ತೀರ್ಪು ನೀಡಿದ ನ್ಯಾಯಮೂರ್ತಿಗಳಿಗೂ ನಮ್ಮ ಕೃತಙತೆ ಇದೆ ಎಂದು ಹೇಳಿದರು.
ಹಿಂದೆ ಆದ ಘಟನೆಯಿಂದ ಇಡೀ ಹೆಣ್ಣುಕುಲಕ್ಕೇ ನೋವಾಗಿತ್ತು. ಈಗ ಸುಪ್ರೀಂ ತೀರ್ಪು ಎಲ್ಲ ನೋವನ್ನ ಮರೆಸಿದೆ. ಆಗಲು ನಮಗೆ ಜಯ ಸಿಗುವ ವಿಶ್ವಾಸವಿತ್ತು. ಅದು ಈಗ ನಿಜವಾಗಿದೆ ಎಂದು ಸುಪ್ರೀಂ ತೀರ್ಪಿನ ಬಗ್ಗೆ ಸಚಿವೆ ಜಯಮಾಲಾ ಪ್ರತಿಕ್ರಿಯೆ ನೀಡಿದರು.