Home Mangalorean News Kannada News ಶಬರಿಮಲೆ ಯಾತ್ರಾದಿನದಂದೆ ಗುರುಸ್ವಾಮಿಗೆ ಹೃದಯಾಘಾತ

ಶಬರಿಮಲೆ ಯಾತ್ರಾದಿನದಂದೆ ಗುರುಸ್ವಾಮಿಗೆ ಹೃದಯಾಘಾತ

Spread the love
RedditLinkedinYoutubeEmailFacebook MessengerTelegramWhatsapp

ಶಬರಿಮಲೆ ಯಾತ್ರಾದಿನದಂದೆ ಗುರುಸ್ವಾಮಿಗೆ ಹೃದಯಾಘಾತ

ಉಳ್ಳಾಲ: ಶಬರಿಮಲೆ ಯಾತ್ರೆಗೆ ತೆರಳಲು ಮುಂದಾಗಿದ್ದ ಗುರುಸ್ವಾಮಿಯೊಬ್ಬರು ತೀವ್ರ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಮುಡಿಪು ಮೂಳೂರಿನಲ್ಲಿ ನಡೆದಿದೆ.

ಸುರೇಶ್ ನಾಯಕ್ (48) ಹೃದಯಾಘಾತಕ್ಕೊಳಗಾದ ಅಯ್ಯಪ್ಪ ಮಾಲಾಧಾರಿ ಗುರುಸ್ವಾಮಿ.

ವೃತ್ತಿಯಲ್ಲಿ ಕಾರ್ಪೆಂಟರ್ ಆಗಿರುವ ಸುರೇಶ್ ಅವರು ಕಳೆದ ಅನೇಕ ವರುಷಗಳಿಂದ ಶಬರಿಮಲೆ ಯಾತ್ರೆ ಮಾಡುತ್ತಾ ಬಂದಿದ್ದು,ಮೂಳೂರಿನ ತಮ್ಮ ಮನೆಯ ಹತ್ತಿರದ ದೇವಸ್ಥಾನದಲ್ಲಿ ಅಯ್ಯಪ್ಪ ಮಾಲಾಧಾರಿಗಳ ಜೊತೆ ತಂಗಿ ವ್ರತಾಚಾರಣೆ ಮಾಡುತ್ತಿದ್ದರು.ಸೋಮವಾರದಂದು ಶಬರಿಮಲೆ ಯಾತ್ರೆ ಕೈಗೊಂಡಿದ್ದ ಸುರೇಶ್ ಗುರುಸ್ವಾಮಿ ಸ್ನಾನ ಮಾಡಿ ಇರುಮುಡಿ ಕಟ್ಟಲು ದೇವಸ್ಥಾನದ ಗರ್ಭಗುಡಿ ಪ್ರವೇಶಿಸುತ್ತಿದ್ದಂತೆಯೇ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದಿದ್ದಾರೆ.ತಕ್ಷಣ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದು ದಾರಿ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ.

ಸುರೇಶ್ ಅವರು ಸ್ಥಳೀಯರು ಯಾರೇ ಮೃತಪಟ್ಟರು ಅವರ ಅಂತ್ಯ ಕ್ರಿಯೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಸ್ಥಳೀಯರ ಪ್ರೀತಿಗೆ ಪಾತ್ರರಾಗಿದ್ದರು.

ಮೃತರ ತಾಯಿ ದೃಷ್ಟಿ ಹೀನತೆ, ಪತ್ನಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಮೂವರು ಸುಪತ್ರರು ವಿದ್ಯಾಭ್ಯಾಸದಲ್ಲಿ ತೊಡಗಿದ್ದು ಇದೀಗ ಮನೆ ಯಜಮಾನನನ್ನು ಕಳಕೊಂಡ ಕುಟುಂಬ ದಿಕ್ಕು ಕಾಣದಂತಾಗಿದೆ.


Spread the love

Exit mobile version