Home Mangalorean News Kannada News ಶಮೀನಾ ಆಳ್ವರಿಗೆ ಗೋಲ್ಡನ್ ಇಮೇಜ್ ಆಫ್ ಏಷ್ಯಾ ಇಂಟರ್‍ನ್ಯಾಶನಲ್ ಅವಾರ್ಡ್

ಶಮೀನಾ ಆಳ್ವರಿಗೆ ಗೋಲ್ಡನ್ ಇಮೇಜ್ ಆಫ್ ಏಷ್ಯಾ ಇಂಟರ್‍ನ್ಯಾಶನಲ್ ಅವಾರ್ಡ್

Spread the love

ಶಮೀನಾ ಆಳ್ವರಿಗೆ ಗೋಲ್ಡನ್ ಇಮೇಜ್ ಆಫ್ ಏಷ್ಯಾ ಇಂಟರ್‍ನ್ಯಾಶನಲ್ ಅವಾರ್ಡ್

ಮಂಗಳೂರು: ಸಮಾಜ ಸೇವಕಿ, ಪ್ರತಿಷ್ಠಿತ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕøತೆ, ಮೂಲ್ಕಿ ವಿಜಯಾ ಕಾಲೇಜು ಮಾಜಿ ಅಧ್ಯಕ್ಷೆ, ತುಳುನಾಡೋಚ್ಚಯ-2017 ರ ಪ್ರಧಾನ ಕಾರ್ಯದರ್ಶಿ ಶಮೀನಾ ಆಳ್ವ ಮೂಲ್ಕಿ ಇವರಿಗೆ ಗೋಲ್ಡನ್ ಇಮೇಜ್ ಆಫ್ ಏಷ್ಯಾ ಇಂಟರ್‍ನ್ಯಾಶನಲ್ ಅವಾರ್ಡ್ ಲಭಿಸಿದೆ.

ಎಕಾನೋಮಿಕ್ ಗ್ರೋತ್ ಸೊಸೈಟಿ ಆಫ್ ಇಂಡಿಯ ನವದೆಹಲಿ ಮತ್ತು ಇಂಡಿಯನ್ ಪೀಸ್ ಯುನಿವರ್ಸಿಟಿ ಇದರ ನೇತೃತ್ವದಲ್ಲಿ ನ.12ರಂದು ದುಬೈಯ ಅಲ್ ಮಹಾಬಲ್ ಹೊಲಿಡೇ ಇನ್ ಬುರ್ ದುಬೈನಲ್ಲಿ ನಡೆದ‘ಇಂಡೋ-ಯು.ಎ.ಇ. ಫ್ರೆಂಡ್‍ಶಿಪ್ ಬ್ಯಾಂಕೆಟ್ ಅಂತಾರಾಷ್ಟ್ರೀಯ ಸೆಮಿನಾರ್‍ನಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಸೆಮಿನಾರ್‍ನಲ್ಲಿ ಶಾರ್ಜಾ ಇಲೆಕ್ಟ್ರಿಸಿಟಿ ಮತ್ತು ವಾಟರ್ ಅಥೋರಿಟಿ ಅಧ್ಯಕ್ಷ, ಡಾ.ರಶೀದ್ ಅಲೀಮ್ ಕ್ರಿಶ್ಚಿಯನ್ ಬಿಲ್ಲಿಂಗೆಲ್ ಗ್ಲೋಬಲ್ ಅಕ್ರಡಿಯೇಷನ್ ಕೌನ್ಸಿಲ್ ಜರ್ಮನಿ ಐ.ಪಿ.ಯು. ಫೌಂಡರ್ ಡಾ. ಕಿಮ್ ಗೋಪಿಸುಂದರ್ ರಾಜನ್, ಐ.ಪಿ.ಯು. ಕನ್ವೀನರ್ ಡಾ.ಜಿ.ಎಸ್.ಸಚಿದೇವ್ ಮೊದಲಾದವರ ಉಪಸ್ಥಿತರಿದ್ದರು.

ಇವರು ನಿಸ್ವಾರ್ಥವಾಗಿ ಗೈಯ್ಯುತ್ತಿರುವ ಸಮಾಜಸೇವೆಯನ್ನು ಗುರುತಿಸಿ ಈ ಅಂತಾರಾಷ್ಟ್ರೀಯ ಪ್ರಶಸ್ತಿ ಒಲಿದುಬಂದಿದೆ.


Spread the love

Exit mobile version