Spread the love
ಶರತ್ ಮಡಿವಾಳ ಕೊಲೆ ಆರೋಪಿಯ ಕೊಲೆ ಯತ್ನ ಪ್ರಕರಣ : ಮೂವರು ಸೆರೆ
ಬಂಟ್ವಾಳ: ಶರತ್ ಮಡಿವಾಳ ಹತ್ಯೆ ಪ್ರಕರಣದ ಆರೋಪಿಯ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಿರುವ ಬಂಟ್ವಾಳ ನಗರ ಠಾಣೆ ಪೊಲೀಸರು ಕಾರು, ಬೈಕ್, ಮಾರಕ ಆಯುಧಗಳನ್ನು ವಶಕ್ಕೆ ಪಡೆದಿದ್ದಾರೆ.
ಯತಿನ್ ಕಲ್ಲಡ್ಕ, ರಾಜು ಕುಂಪನಮಜಲು ಮತ್ತು ಮನೀಶ್ ಕೋಡಿಕೆರೆ ಬಂಧಿತ ಆರೋಪಿಗಳು. ಉಳಿದಂತೆ ಕಲ್ಲಡ್ಕ, ಸಜೀಪ ಮತ್ತು ಕೋಡಿಕೆರೆಯ ಆರು ಮಂದಿ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಆರೋಪಿಗಳು ಬಿ.ಸಿ.ರೋಡ್ ಶರತ್ ಮಡಿವಾಳ ಕೊಲೆ ಪ್ರಕರಣದ ಆರೋಪಿ ಸಜೀಪ ಮುನ್ನೂರು ಗ್ರಾಮದ ಆಲಾಡಿ ನಿವಾಸಿ ಶರೀಫ್ ಎಂಬಾತನನ್ನು ಆ. 7ರಂದು ಅಪಘಾತ ನಡೆಸಿ ಕೊಲೆಗೆ ಯತ್ನಿಸಿದ್ದರು ಎಂದು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಮೂವರನ್ನು ಬಂಧಿಸಿದ್ದಾರೆ.
Spread the love