ಶಶಿಕಾಂತ್ ಸೆಂಥಿಲ್ ರಾಜಿನಾಮೆ ದ.ಕ ಜಿಲ್ಲೆಗೆ ಕಪ್ಪು ಚುಕ್ಕೆ – ಸುಶೀಲ್ ನೊರೊನ್ಹ
ದ.ಕ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರು ಭಾರತೀಯ ಅಡಳಿತ ಸೇವೆಗೆ ರಾಜಿನಾಮೆ ನೀಡಿರುವುದು ಇಡೀ ಜಿಲ್ಲೆಯನ್ನು ತಲ್ಲಣಗೊಳ್ಳಿಸಿದೆ. ಜಿಲ್ಲಾಧಿಕಾರಿಗಳು ಕಳೆದ ಎರಡು ವರುಷಗಳಲ್ಲಿ ಈ ಜಿಲ್ಲೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ ಮಹತ್ವದ ಬೆಳವಣಿಗೆಗೆ ಪಾತ್ರರಾಗಿದ್ದಾರೆ. ಮಾತ್ರವಲ್ಲ, ಜನ ಸಾಮಾನ್ಯರನ್ನು ಸ್ಪಂದಿಸುವ ವ್ಯಕ್ತಿತ್ವವನ್ನು ಹೊಂದಿದರು. ಅವರು ವೈಯಕ್ತಿಕ ಕಾರಣಗಳನ್ನು ನೀಡಿ ದಿಢೀರನೆ ರಾಜೀನಾಮೆ ನೀಡಿ ತಾವು ನಂಬಿದ ಸಿದ್ದಾಂತ ಮತ್ತು ಸೇವಾ ಕಾರ್ಯಕ್ಕೆ ಸಂಘರ್ಷ ಎಂಬ ಮಾತು ಅವರ ಮನಸ್ಸಿನ ಆಳದಲ್ಲಿ ಹುದುಗಿರುವ ನೋವು ಎದ್ದು ಕಾಣುತ್ತದೆ.
ಇಡೀ ರಾಷ್ಟ್ರ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಇಂತಹ ಅಪರೂಪದ ಘಟನೆಗಳನು ನಡೆದಿದ್ದರೂ ಈ ಪ್ರಜ್ಞಾವಂತ ಜಿಲ್ಲೆಯಲ್ಲಿ ಇಂತಹ ಘಟನೆ ನಡೆದಿದ್ದು, ರಾಷ್ಟ್ರ ಮಟ್ಟದಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದು, ನಮ್ಮ ದಕ್ಷಿಣ ಕನ್ನಡ ಜಿಲ್ಲೆಗೆ ಕಪ್ಪು ಚುಕ್ಕೆಯಾಗಿದೆ. ಈ ಜಿಲ್ಲೆಯ ಅಧಿಕಾರದ ಯಂತ್ರ ತಮ್ಮ ಕೈಯಲ್ಲಿದ್ದರೂ, ಅಸಹಾಯಕತೆ ಎದ್ದು ತೋರುತ್ತಿರುವುದು ದೊಡ್ಡ ವಿಪರ್ಯಾಸ. ಇಂತಹ ಘಟನೆಗಳು ನಡೆದಾಗ ಜನ ಸಾಮಾನ್ಯರು ಎಚ್ಚೆತ್ತುಗೊಳ್ಳುವುದು, ಅನಂತರ ನಿಧಾನವಾಗಿ ಇಂತಹ ಘಟನೆಗಳನ್ನು ಮರೆಯುತ್ತಿದ್ದಾರೆ. ಅದುದರಿಂದ ನಮ್ಮ ಭಾರತ ದೇಶದ ಪ್ರಜಾಪ್ರಭುತ್ವದ ಸೊಗಸ್ಸನ್ನು ನೀಡುತ್ತಿರುವ ರಾಜ್ಯಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಇಂತಹ ಸೂಕ್ಷ್ಮ ಘಟನೆಗಳನ್ನು ಅವಲೋಕಿಸುವುದು ಸೂಕ್ತ ಎಂದು ಜಿಲ್ಲಾ ಜೆಡಿಎಸ್ ವಕ್ತಾರ ಸುಶೀಲ್ ನೊರೊನ್ಹ ತಿಳಿಸಿದ್ದಾರೆ.
Kaarana gottidre heli Swamy.
Vaiyuktika iddaroo irabahudu.