ಶಾಂತಿಯುತ ಚುನಾವಣೆ ನಮ್ಮೆಲ್ಲರ ಜವಾಬ್ದಾರಿ – ಡಿವೈಎಸ್ಪಿ ದಿನೇಶ್ ಕುಮಾರ್
ಕುಂದಾಪುರ: ಲೋಕಸಭಾ ಚುನಾವಣೆಯನ್ನು ಯಶಸ್ವಿಯಾಗಿ ಯಾವುದೇ ರೀತಿಯ ಸಮಸ್ಯೆಗಳಿಗೆ ಎಡೆ ಮಾಡಿಕೊಡದಂತೆ ಯಶಸ್ವಿಯಾಗಿ ನಡೆಸಬೇಕಾಗಿರುವುದ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಕುಂದಾಪುರ ಡಿವೈಎಸ್ಪಿ ಬಿ.ಪಿ.ದಿನೇಶ್ ಕುಮಾರ್ ಹೇಳಿದರು.
ಅವರು ಗುರುವಾರ ಬೈಂದೂರು ರೋಟರಿ ಭವನದಲ್ಲಿ ಉಡುಪಿ ಜಿಲ್ಲಾ ಪೋಲಿಸ್,ಕುಂದಾಪುರ ಉಪ ವಿಭಾಗ,ಬೈಂದೂರು ವೃತ್ತ,ಬೈಂದೂರು ಪೋಲಿಸ್ ಠಾಣೆ ಇದರ ವತಿಯಿಂದ ಆಯೋಜಿಸಿದ್ದ ಜನಸಂಪರ್ಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕಾನೂನು ಪಾಲನೆ ಪ್ರತಿಯೊಬ್ಬರ ಜವಬ್ದಾರಿ.ಜನಸ್ನೇಹಿ ಪೋಲಿಸ್ ವ್ಯವಸ್ಥೆ ಇದೆ.ಚುನಾವಣೆಗೆ ಸಂಬಂಧಿಸಿದ ದೂರುಗಳಿದ್ದರೆ ತಕ್ಷಣ ತಿಳಿಸಬಹುವುದಾಗಿದೆ.ಬೂತ್ನ 200 ಮೀಟರ್ ಒಳಗೆ ಯಾವುದೇ ವ್ಯಕ್ತಿ ಪ್ರಚಾರ ಮಾಡುವಂತಿಲ್ಲ.ಸಾಮಾಜಿಕ ಜಾಲತಾಣಗಳ ಪ್ರಚಾರದ ಬಗ್ಗೆ ವಿಶೇಷ ನಿಗಾ ವಹಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಬೈಂದೂರು ವೃತ್ತ ನಿರೀಕ್ಷಕ ಪರಮೇಶ್ವರ ಗುನಗ,ಠಾಣಾಧಿಕಾರಿ ತಿಮ್ಮೇಶ್ ಬಿ.ಎನ್ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.