Home Mangalorean News Kannada News ಶಾಂತಿ ಕದಡುವವರ ಮೇಲೆ ಗುಂಡಿಕ್ಕಲು ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ಆದೇಶ

ಶಾಂತಿ ಕದಡುವವರ ಮೇಲೆ ಗುಂಡಿಕ್ಕಲು ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ಆದೇಶ

Spread the love

ಶಾಂತಿ ಕದಡುವವರ ಮೇಲೆ ಗುಂಡಿಕ್ಕಲು ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ಆದೇಶ

ಮಂಗಳೂರು: ಪೊಲೀಸರು ಇಲ್ಲವೇ ನಾಗರಿಕರ ಮೇಲೆ ಯಾರಾದರೂ ಹಲ್ಲೆ ನಡೆಸಲು ಮುಂದಾದರೆ ಅಂತಹ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಾನೂನಿನ ವ್ಯಾಪ್ತಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಬೇಕೆಂದು ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ಖಡಕ್ ಸೂಚನೆ ಕೊಟ್ಟಿದ್ದಾರೆ.

ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹಿಂದೆಮುಂದೆ ನೋಡಬಾರದು. ಕಾನೂನು ಕೈಗೆತ್ತಿಕೊಂಡವರು ಯಾರೇ ಇರಲಿ. ಅಂತಹವರ ವಿರುದ್ಧ ಕಾನೂನುನಡಿಯಲ್ಲೇ ಕ್ರಮ ಜರುಗಿಸುವಂತೆ ಪೊಲೀಸರಿಗೆ ಆದೇಶ ನೀಡಿದ್ದಾರೆ. ನಿಮ್ಮ ವಿರುದ್ಧ ಯಾರಾದರೂ ಹಲ್ಲೆ ನಡೆಸಲು ಮುಂದಾದರೆ ಕಾನೂನು ವ್ಯಾಪ್ತಿಯಲ್ಲಿ ವೆಪನ್‍ಗಳನ್ನು ಬಳಸಲು ಮುಂದಾಗಬೇಕು. ಒಂದು ವೇಳೆ ತಪಾಸಣೆ ವೇಳೆ ತಪ್ಪಿಸಿಕೊಳ್ಳಲು ಮುಂದಾದರೆ ಅಂಥವರ ವಿರುದ್ಧ ಓಪನ್ ಫೈರ್ ಮಾಡಲು ಸೂಚನೆ ಕೊಟ್ಟಿದ್ದಾರೆ.

ನಮಗೆ ಜಿಲ್ಲೆಯಲ್ಲಿ ಶಾಂತಿ ನೆಲೆಸುವುದು ಮುಖ್ಯ. ಕಳೆದೆರಡು ದಿನಗಳಿಂದ ನಿರಂತರವಾಗಿ ಸಭೆಗಳನ್ನು ನಡೆಸಲಾಗಿದೆ. ಜಿಲ್ಲೆಯಲ್ಲಿ ಏಳು ಕಡೆ ಚೆಕ್‍ ಪೋಸ್ಟ್ ಗಳನ್ನು ನಿರ್ಮಿಸಲಾಗಿದೆ. ಪರಿಸ್ಥಿತಿ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು ಎಂದು ಹರಿಶೇಖರನ್ ಮನವಿ ಮಾಡಿದರು.

ಶನಿವಾರ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಅವರ ಮೃತದೇಹವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವ ವೇಳೆ ಬಿಸಿ ರೋಡಿನಲ್ಲಿ ಕಲ್ಲುತೂರಾಟದ ಘಟನೆಗಳು ನಡೆದಿದ್ದು, ಹಿಂದೂ ಸಂಘಟನೆಗಳು ಹಾಗೂ ಪೋಲಿಸರ ನಡುವೆ ಮಾತಿನ ಚಕಮಕಿಗೂ ಸಹ ಕಾರಣವಾಗಿತ್ತು. ಘಟನೆಗೆ ಸಂಬಂಧಿಸಿ ಈಗಾಗಲೇ 13 ಮಂದಿಯನ್ನು ಪೋಲಿಸರು ಬಂಧಿಸಿದ್ದಾರೆ. ಪೋಲಿಸರು ಬಂಟ್ವಾಳದ ಸಂಪೂರ್ಣ ವಿಡಿಯೋ ಚಿತ್ರಿಕರಣ ಮಾಡಿದ್ದು, ಕಲ್ಲು ತೂರಾಟದ ಘಟನೆ ಪೂರ್ವಯೋಜಿತವಾಗಿತ್ತು ಎನ್ನಲಾಗಿದೆ. ಪೋಲಿಸರು ವಾಹನಗಳನ್ನು ತಪಾಸಣೆ ಮಾಡುವ ವೇಳೆ ಕಾರುಗಳಲ್ಲಿ ಕಲ್ಲುಗಳು ಪತ್ತೆಯಾಗಿವೆ ಎಂದು ಹರಿಶೇಖರನ್ ಹೇಳೀದ್ದಾರೆ.


Spread the love

Exit mobile version