Home Mangalorean News Kannada News ಶಾಂತಿ ಮತ್ತು ಮಾನವೀಯತೆ ; ಪ್ರಬಂಧ ಸ್ಪರ್ಧೆಗಳ ಫಲಿತಾಂಶ ಪ್ರಕಟ

ಶಾಂತಿ ಮತ್ತು ಮಾನವೀಯತೆ ; ಪ್ರಬಂಧ ಸ್ಪರ್ಧೆಗಳ ಫಲಿತಾಂಶ ಪ್ರಕಟ

Spread the love

ಶಾಂತಿ ಮತ್ತು ಮಾನವೀಯತೆ ; ಪ್ರಬಂಧ ಸ್ಪರ್ಧೆಗಳ ಫಲಿತಾಂಶ ಪ್ರಕಟ

ಮಂಗಳೂರು: ‘ಶಾಂತಿ ಮತ್ತು ಮಾನವೀಯತೆ’ ಅಭಿಯಾನದ ಅಂಗವಾಗಿ, ಅಭಿಯಾನದ ದ.ಕ. ಜಿಲ್ಲಾ ಸ್ವಾಗತ ಸಮಿತಿಯು ದ.ಕ. ಜಿಲ್ಲೆಯ ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಗಳ ಫಲಿತಾಂಶ ಪ್ರಕಟಗೊಂಡಿದೆ.

ಪದವಿ ಪೂರ್ವ ವಿದ್ಯಾರ್ಥಿಗಳಿಗೆ “ಶಾಂತಿ ಮತ್ತು ಮಾನವೀಯತೆ-ಸವಾಲುಗಳು ಮತ್ತು ಪರಿಹಾರ” ಎಂಬ ವಿಷಯದಲ್ಲಿ ನಡೆದ ಸ್ಪರ್ಧೆಯ ಮಂಗಳೂರು ತಾಲೂಕು ವಿಭಾಗದಲ್ಲಿ ಮೂಡಬಿದರೆಯ ಶ್ರೀ ಮಹಾವೀರ ಕಾಲೇಜಿನ ವಿದ್ಯಾರ್ಥಿ ಮುಹಮ್ಮದ್ ನಿಝಾಮುದ್ದೀನ್ ಪ್ರಥಮ, ಮೂಡಬಿದರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾದ ನಿತೀಶ ಎಂ. ಭಟ್ ದ್ವಿತೀಯ ಮತ್ತು ದೆಚ್ಚಮ್ಮ ಕೆ. ಸಿ. ತೃತೀಯ ಬಹುಮಾನ ಪಡೆದಿದ್ದಾರೆ. ಬಂಟ್ವಾಳ ತಾಲೂಕಿನಲ್ಲಿ ಬೆಂಜನಪದವು ಸರಕಾರಿ ಪ. ಪೂ. ಕಾಲೇಜಿನ ವಿದ್ಯಾರ್ಥಿ ಮೋಕ್ಷಾ ಪೂಜಾರಿ ಪಿ. ಪ್ರಥಮ, ಉಳಿಯ ಎಲ್.ಸಿ.ಆರ್. ಇಂಡಿಯನ್ ಕಾಲೇಜಿನ ವಿದ್ಯಾರ್ಥಿ ನಯನ ಕೆ. ದ್ವಿತೀಯ ಮತ್ತು ಕಾವಳಪಡೂರು ಸರಕಾರಿ ಕಾಲೇಜಿನ ನೌಶೀರಾ ಬಾನು ತೃತೀಯ, ಪುತ್ತೂರು ತಾಲೂಕಿನಲ್ಲಿ ದರ್ಬೆಯ ಸಂತ ಪಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳಾದ ಕೃತಿಕಾ ಕೆ. ಪ್ರಥಮ, ಆದಿಲ್ ನಿಝಾಮಿ ಕೆ. ದ್ವಿತೀಯ ಮತ್ತು ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಸಂಬ್ರೀನಾ ತೃತೀಯ, ಬೆಳ್ತಂಗಡಿ ತಾಲೂಕಿನಲ್ಲಿ ಪೂಂಜಾಲಕಟ್ಟೆಯ ಸರಕಾರಿ ಕಾಲೇಜಿನ ಸೃಜನ ಪ್ರಥಮ, ವೇಣೂರು ಸರಕಾರಿ ಕಾಲೇಜಿನ ಕವಿತಾ ಕುಮಾರಿ ಎಂ. ಎಲ್. ದ್ವಿತೀಯ ಮತ್ತು ಉಜಿರೆಯ ಎಸ್. ಡಿ. ಎಂ. ಕಾಲೇಜಿನ ನಿರೀಕ್ಷಾ ಎನ್. ತೃತೀಯ, ಸುಳ್ಯ ತಾಲೂಕಿನಲ್ಲಿ ನಿಂತಿಕಲ್ಲು ಕೆ. ಎಸ್. ಗೌಡ ಕಾಲೇಜಿನ ವಿದ್ಯಾರ್ಥಿಗಳಾದ ಪುಷ್ಪರಾಜ್ ಪ್ರಥಮ, ಲಿಖಿತ ಪಿ. ಜೆ. ದ್ವಿತೀಯ ಮತ್ತು ಸೌಜನ್ಯ ಕೆ. ತೃತೀಯ ಬಹುಮಾನ ಗಳಿಸಿರುತ್ತಾರೆ.

ಪದವಿ ಮತ್ತು ಸ್ನಾತ್ತಕೋತ್ತರ ಪದವಿ ವಿದ್ಯಾರ್ಥಿಗಳಿಗೆ “ಬಹುಸಂಸ್ಕøತಿಯ ಸಮಾಜದಲ್ಲಿ ಶಾಂತಿ ಮತ್ತು ಮಾನವೀಯತೆಯನ್ನು ಬಲ ಪಡಿಸುವುದು ಹೇಗೆ?” ಎಂಬ ವಿಷಯದಲ್ಲಿ ನಡೆದ ಸ್ಪರ್ಧೆಯ ಮಂಗಳೂರು ತಾಲೂಕು ವಿಭಾಗದಲ್ಲಿ ನಂತೂರು ಶ್ರೀ ಭಾರತಿ ಕಾಲೇಜಿನ ವೆಂಕಟೇಶ್ ಕೆ. ಎಂ. ಪ್ರಥಮ, ಮುಕ್ಕ ಶ್ರೀನಿವಾಸ್ ಸ್ಕೂಲ್ ಆಫ್ ಇಂಜಿನಿಯರಿಂಗ್‍ನ ಸುಶ್ಮಾ ದ್ವಿತೀಯ ಮತ್ತು ಮೂಡಬಿದರೆ ಶ್ರೀ ದವಳ ಕಾಲೇಜಿನ ರಶ್ಮಿತಾ ತೃತೀಯ ಬಹುಮಾನ ಪಡೆದಿದ್ದಾರೆ. ಬಂಟ್ವಾಳ ತಾಲೂಕಿನಲ್ಲಿ ವಾಮದಪದವು ಸರಕಾರಿ ಕಾಲೇಜಿನ ವಿದ್ಯಾರ್ಥಿಗಳಾದ ಯೋಗಿನಿ ಇ. ಪ್ರಥಮ, ಧನ್ಯಶ್ರೀ ದ್ವಿತೀಯ ಮತ್ತು ಕಲ್ಲಡ್ಮ ಅನುಗ್ರಹ ಮಹಿಳಾ ಕಾಲೇಜಿನ ಹಸೀನಾ ಬಾನು ಜಿ. ತೃತೀಯ, ಪುತ್ತೂರು ತಾಲೂಕಿನಲ್ಲಿ ವಿವೇಕಾನಂದ ಕಾಲೇಜಿನ ಮೇಘಾ ಪಿ. ಪ್ರಥಮ, ಪಿಲೋಮಿನಾ ಕಾಲೇಜಿನ ಫಾತಿಮತ್ ನೌಶೀರಾ ದ್ವಿತೀಯ ಮತ್ತು ಉಪ್ಪಿನಂಗಡಿ ಸರಕಾರಿ ಕಾಲೇಜಿನ ಜಝೀಲತ್ ಮಿಶ್ರಿಯಾ ತೃತೀಯ, ಬೆಳ್ತಂಗಡಿ ತಾಲೂಕಿನಲ್ಲಿ ಶ್ರೀ ಗುರುದೇವ ಕಾಲೇಜಿನ ವಿದ್ಯಾರ್ಥಿಗಳಾದ ಸುಶ್ಮಿನಿ ಪ್ರಥಮ, ಸ್ವಾತಿ ದ್ವಿತೀಯ ಮತ್ತು ದೀಕ್ಷಾ ಎಸ್. ತೃತೀಯ, ಸುಳ್ಯ ತಾಲೂಕಿನಲ್ಲಿ ಸರಕಾರಿ ಕಾಲೇಜಿನ ಗೀತಾ ಕೆರೆಮೂಲೆ ಪ್ರಥಮ, ನೆಹರು ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳಾದ ಸುಶ್ಮಿತಾ ಕೆ. ವೈ. ದ್ವಿತೀಯ ಮತ್ತು ಸಿಂಚನಾ ವೈ. ಎಸ್. ತೃತೀಯ ಬಹುಮಾನ ಪಡೆದಿದ್ದಾರೆ.

ಪದವಿ ಪೂರ್ವ ಮತ್ತು ಪದವಿ ವಿಭಾಗಗಳಿಗೆ ತಲಾ ರೂ. 5000, ರೂ. 3000 ಹಾಗೂ ರೂ. 2000 ಗಂ. 3.30ಕ್ಕೆ ಮಂಗಳೂರಿನ ಪುರಭವನದಲ್ಲಿ ಅಭಿಯಾನದ ಅಂಗವಾಗಿ ನಡೆಯಲಿರುವ ‘ವಿದ್ಯಾರ್ಥಿ ಸಮಾವೇಶ’ದಲ್ಲಿ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುವುದು ಎಂದು ಅಭಿಯಾನದ ಸ್ಪರ್ಧಾ ವಿಭಾಗದ ಸಂಚಾಲಕ ಉಮರ್ ಯು. ಹೆಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version