Home Mangalorean News Kannada News ಶಾಂತಿ ಮತ್ತು ಮಾನವೀಯತೆ – ಭಾಷಣ ಸ್ಪರ್ಧೆಯ ಫಲಿತಾಂಶ ಪ್ರಕಟ

ಶಾಂತಿ ಮತ್ತು ಮಾನವೀಯತೆ – ಭಾಷಣ ಸ್ಪರ್ಧೆಯ ಫಲಿತಾಂಶ ಪ್ರಕಟ

Spread the love

ಶಾಂತಿ ಮತ್ತು ಮಾನವೀಯತೆ – ಭಾಷಣ ಸ್ಪರ್ಧೆಯ ಫಲಿತಾಂಶ ಪ್ರಕಟ

ಶಾಂತಿ ಮತ್ತು ಮಾನವೀಯತೆ ರಾಷ್ಟ್ರೀಯ ಅಭಿಯಾನದ ಅಂಗವಾಗಿ ದ.ಕ. ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಸೆ. 14ರಂದು ‘ಶಾಂತಿ ಮತ್ತು ಮಾನವೀಯತೆ – ನನ್ನ ದೇಶ, ನನ್ನ ಪಾತ್ರ’ ಎಂಬ ವಿಷಯದಲ್ಲಿ ನಡೆದ ಪ್ರೌಢ ಶಾಲಾ ವಿದ್ಯಾರ್ಥಿಗಳ ತಾಲೂಕು ಮಟ್ಟದ ಭಾಷಣ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ. ಮಂಗಳೂರು ತಾಲೂಕಿನ ಗ್ರಾಮಾಂತರ ವಿಭಾಗದಲ್ಲಿ ಮೂಡಬಿದರೆಯ ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಶ್ರೇಯ ಪೈ ಮೊದಲನೇ ಮತ್ತು ಅದೇ ಶಾಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿನಿ ರಚನ ಚಂದ್ರ ಎರಡನೇ ಸ್ಥಾನ ಹಾಗೂ ಹಿರಾ ಪ್ರೌಢ ಶಾಲೆಯ ನಿಮ್ರಾ ಎಫ್. ಮೂರನೇ ಸ್ಥಾನ ಪಡೆದಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ ವಿಭಾಗದಲ್ಲಿ ಸಂತ ಜೆರೊಸಾ ಪ್ರೌಢ ಶಾಲೆಯ ಕೃಪಾ ಮರಿಯಾ ರಸ್ಕಿನ್ಹಾ ಮೊದಲನೇ ಮತ್ತು ಅದೇ ಶಾಲೆಯ ಎನ್. ಆರ್. ಅನನ್ಯ ರೈ ಎರಡನೇ ಹಾಗೂ ಸುರತ್ಕಲ್‍ನ ಶ್ರೀ ಮಹಾಲಿಂಗೇಶ್ವರ ಶಾಲೆಯ ನವ್ಯಶ್ರೀ ಮತ್ತು ಶಾರದಾ ವಿದ್ಯಾಲಯದ ಸ್ಮøತಿ ಸಂತೋಷ್ ಮೂರನೇ ಸ್ಥಾನ ಪಡೆದಿದ್ದಾರೆ.

ಬಂಟ್ವಾಳ ತಾಲೂಕಿನಲ್ಲಿ ವಿದ್ಯಾಗಿರಿಯ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆಯ ಕುಶಿ ಎ. ಚೌಟ ಮೊದಲನೇ, ಅಳಿಕೆ ಶ್ರೀ ಸತ್ಯ ಸಾಯಿ ಪ್ರೌಢ ಶಾಲೆಯ ಸಿಂದೂರ ಎಂ. ಆರ್. ಎರಡನೇ ಹಾಗೂ ಸುಜೀರು ಸರಕಾರಿ ಪ್ರೌಢ ಶಾಲೆಯ ಶ್ರಾವ್ಯ ನಾಯಕ್ ಮೂರನೇ ಸ್ಥಾನ ಪಡೆದಿದ್ದಾರೆ. ಪುತ್ತೂರು ತಾಲೂಕಿನಲ್ಲಿ ಬೆಟ್ಟಂಪಾಡಿಯ ನವೋದಯ ಪ್ರೌಢ ಶಾಲೆಯ ಪವಿತ್ರಾ ಪಿ. ಮೊದಲನೇ, ಸುಳ್ಯಪದವು ಸರ್ವೊದಯ ಪ್ರೌಢ ಶಾಲೆಯ ಫಾತಿಮತ್ ರಾಹಿಲ ಎರಡನೇ ಹಾಗೂ ಉಪ್ಪಿನಂಗಡಿಯ ಸರಕಾರಿ ಪ್ರೌಢ ಶಾಲೆಯ ಭಾಗ್ಯಲಕ್ಷ್ಮಿ ಮೂರನೇ ಸ್ಥಾನ ಗಳಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನಲ್ಲಿ ಉಜಿರೆಯ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯ ಭಾರ್ಗವಿ ಶಾಬರಾಯ ಮೊದಲನೇ, ಕಕ್ಕಿಂಜೆಯ ಬೇಂದ್ರಾಲ ಸಂತ ಸಾವಿಯೊ ಪ್ರೌಢ ಶಾಲೆಯ ಸೋನಾ ಸಂತೋಷ್ ಎರಡನೇ ಹಾಗೂ ವೇಣೂರು ಸರಕಾರಿ ಪ್ರೌಢ ಶಾಲೆಯ ಪ್ರಜ್ಞಾ ಮೂರನೇ ಸ್ಥಾನ ಪಡೆದಿದ್ದಾರೆ. ಸುಳ್ಯ ತಾಲೂಕಿನಲ್ಲಿ ಗಾಂಧಿನಗರ ಸರಕಾರಿ ಪ್ರೌಢ ಶಾಲೆಯ ಜ್ಯೋತಿ ಕೆ. ಮೊದಲನೇ, ಬಾಳಿಲ ವಿಧ್ಯಾಬೋಧಿನಿ ಪ್ರೌಢ ಶಾಲೆಯ ಚುಂಚನಾ ಪಿ. ಎರಡನೇ ಹಾಗೂ ಅಜ್ಜಾವರ ಸರಕಾರಿ ಪ್ರೌಢ ಶಾಲೆಯ ಮೇಘಾ ಬಿ.ಜಿ. ಮೂರನೇ ಸ್ಥಾನ ಗಳಿಸಿದ್ದಾರೆ.

ರೂ. 3000, ರೂ. 2000 ಮತ್ತು ರೂ. 1000 ನಗದು ಕ್ರಮವಾಗಿ ಮೊದಲ, ಎರಡನೇ ಮತ್ತು ಮೂರನೇ ಬಹುಮಾನವಾಗಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ನೀಡಲಾಗುವುದು. ಅ. 7ರಂದು ಮಂಗಳೂರಿನ ಪುರಭವನದಲ್ಲಿ ಸಂಜೆ ಗಂ. 3.30ಕ್ಕೆ ಅಭಿಯಾನದ ಅಂಗವಾಗಿ ನಡೆಯಲಿರುವ ವಿದ್ಯಾರ್ಥಿ ಸಮಾವೇಶದಲ್ಲಿ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ನಡೆಯಲಿರುವುದು ಎಂದು ಅಭಿಯಾನ ಸ್ಪರ್ಧಾ ವಿಭಾಗದ ಸಂಚಾಲಕ ಉಮರ್ ಯು. ಹೆಚ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version