Home Mangalorean News Kannada News ಶಾಂತಿ ಮಾನವೀಯತೆಗಾಗಿ ಮಕ್ಕಳಿಂದ ಮಾನವ ಸರಪಳಿ

ಶಾಂತಿ ಮಾನವೀಯತೆಗಾಗಿ ಮಕ್ಕಳಿಂದ ಮಾನವ ಸರಪಳಿ

Spread the love

ಶಾಂತಿ ಮಾನವೀಯತೆಗಾಗಿ ಮಕ್ಕಳಿಂದ ಮಾನವ ಸರಪಳಿ

ಉಡುಪಿ: ಜಮಾಅತೆ ಇಸ್ಲಾಮಿ ಹಿಂದ್‌ ಹಮ್ಮಿಕೊಂಡಿರುವ ರಾಷ್ಟ್ರಮಟ್ಟದ “ಶಾಂತಿ ಮತ್ತು ಮಾನವೀಯತೆ ಅಭಿಯಾನ’ದ ಪ್ರಯುಕ್ತ ಗರ್ಲ್ಸ್‌ ಇಸ್ಲಾಮಿಕ್‌ ಆರ್ಗನೈಝೇ ಶನ್‌ ಉಡುಪಿ ಜಿಲ್ಲಾ ಘಟಕದ ವತಿಯಿಂದ  ಉಡುಪಿ ಸರ್ವಿಸ್‌ ಬಸ್‌ ನಿಲ್ದಾಣದ ಕ್ಲಾಕ್‌ ಟವರ್‌ ಎದುರು ಮಾನವ ಸರಪಳಿ ಯನ್ನು ರಚಿಸಲಾಯಿತು.

peace-and-humanity-udupi

ಪರಸ್ಪರ ಅಪನಂಬಿಕೆ, ದ್ವೇಷ ಹೆಚ್ಚಾಗುತ್ತಿ ರುವ ಪ್ರಸ್ತುತ ಸಂದರ್ಭದಲ್ಲಿ ಸೌಹಾರ್ದ, ಶಾಂತಿ ಹಾಗೂ ಮಾನವೀಯ ಸಂದೇಶವನ್ನು ಸಾರುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, 10ರಿಂದ 15 ವರ್ಷ ವಯಸ್ಸಿನ ಮಕ್ಕಳು   ಕ್ಲಾಕ್‌ ಟವರ್‌ ಸುತ್ತ ಮಾನವ ಸರಪಳಿ ರಚಿಸಿ ಶಾಂತಿ ಸೌಹಾರ್ದದ ಸಂದೇಶ ಸಾರಿದರು.

ಈ ಸಂದರ್ಭ ಜಿಐಒ ಉಡುಪಿ ಘಟಕದ ಅಧ್ಯಕ್ಷೆ ಸಾದಿಕಾ, ರಾಜ್ಯ ಪ್ರಧಾನ ಕಾರ್ಯದರ್ಶಿ ನವಿದಾ ಹುಸೈನ್‌ ಅಸಾದಿ, ಜಮಾಅತೆ ಇಸ್ಲಾಮಿ ಹಿಂದ್‌ನ ಅಬ್ದುಲ್‌ ಅಝೀಝ್, ಮಹಿಳಾ ವಿಭಾಗದ ಅಧ್ಯಕ್ಷೆ ಶಾಹಿದಾ ರಿಯಾಝ್, ಎಸ್‌ಐಒ ಜಿಲ್ಲಾಧ್ಯಕ್ಷ ಯಾಸೀನ್‌ ಕೋಡಿಬೆಂಗ್ರೆ, ಅನ್ವರ್‌ ಅಲಿ ಕಾಪು, ಅಬ್ದುಲ್‌ ಅಝೀಝ್ ಉದ್ಯಾವರ, ಹುಸೈನ್‌ ಕೋಡಿಬೆಂಗ್ರೆ ಮೊದಲಾದವರು ಉಪಸ್ಥಿತರಿದ್ದರು.

 


Spread the love

Exit mobile version