ಶಾರ್ಜಾ, ದುಬಾಯಿ ತುಳು – ಕನ್ನಡ ಕಲಾವಿದರಿಂದ “ವಾ ಗಳಿಗೆಡ್ ಪುಟುದನಾ” ತುಳು ಹಾಸ್ಯಮಯ ನಾಟಕ ಯಶಸ್ವೀ ಪ್ರದರ್ಶನ

Spread the love

ಶಾರ್ಜಾ, ದುಬಾಯಿ ತುಳು – ಕನ್ನಡ ಕಲಾವಿದರಿಂದ “ವಾ ಗಳಿಗೆಡ್ ಪುಟುದನಾ” ತುಳು ಹಾಸ್ಯಮಯ ನಾಟಕ ಯಶಸ್ವೀ ಪ್ರದರ್ಶನ

ಮುಂಬಯಿ: ಕೀರ್ತಿ, ಹೆಸರು ಇತ್ಯಾದಿಗಳ ಅಭಿಲಾಷೆಗೆ ಯಿಲ್ಲದೆ ಸಮಾಜ ಸೇವೆಯತ್ತ ಸಂಘಟನೆಗಳು ಹೆಚ್ಚಿನ ಗಮನ ಹರಿಸುವಂತಾಗಲಿ. ಕೀರ್ತಿ, ಹೆಸರು ಇತ್ಯಾದಿಗಳ ಅಭಿಲಾಷೆಗೆ ಬಯಸಿದಲ್ಲಿ ಸಂಘಟನೆಗಳು ಕುಂಟಿತವಾಗಲು ಸಾಧ್ಯ. ಆದುದರಿಂದ ಇಂತಹ ಸಂಘಟನೆಗಳಿಗೆ ಸಮಾಜ ಸೇವೆ ಮುಖ್ಯ ಉದ್ದೇಶವಾಗಲಿ ಎಂದು ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನ ಮುಂಬಯಿಯ ಸಂಸ್ಥಾಪಕರು ಮತ್ತು ಅಧ್ಯಕ್ಷರು ಆದ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್ ನುಡಿದರು.

ಅ. 27ರಂದು ಬಂಟರ ಭವನ, ಕುರ್ಲಾ ಪೂರ್ವ, ಮುಂಬಯಿ ಇಲ್ಲಿ, ಕನ್ನಡ ಸಂಘ ಸಯನ್ ನ ಅಧ್ಯಕ್ಷರಾದ ಡಾ. ಎಂ. ಜೆ. ಪ್ರವೀಣ್ ಭಟ್ ಇವರ ಉಪಸ್ಥಿತಿಯಲ್ಲಿ, ನಡೆದ ಕನ್ನಡ ಸಂಘ ಸಯನ್ ಇದರ ಪ್ರಥಮ ವಾರ್ಷಿಕೋತ್ಸವಕ್ಕೆ ಸಮಾರಂಭಕ್ಕೆ ಚಾಲನೆ ನೀಡಿದ ಅವರು ಸಯನ್ ಪರಿಸರದಲ್ಲಿ ಹಲವಾರು ಪ್ರತಿಭಾವಂತ ಕನ್ನಡಿಗರಿದ್ದು ಕನ್ನಡ ಸಂಘದ ಮೂಲಕ ಕನ್ನಡ ಬಾಷೆ, ಸಂಸ್ಕೃತಿ ಹಾಗೂ ಕಲೆಯು ಉನ್ನತ ಮಟ್ಟಕ್ಕೇರಲಿ ಎಂದು ಶುಭ ಹಾರೈಸಿದರು. ಅತಿಥಿಗಳಾಗಿ ಹಿರಿಯ ಹೋಟೇಲು ಉದ್ಯಮಿ ಸುಂದರ ಶೆಟ್ಟಿ ಮತ್ತು ಕಲಾವಿದೆ ಪ್ರಭಾ ಸುವರ್ಣ ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಕೇಮಾರು ಈಶ ವಿಠಲದಾಸ್ ಸ್ವಾಮೀಜಿ ಇಂದಿನದ್ದು ಹೃದಯಸ್ಪರ್ಷಿ ಕಾರ್ಯಕ್ರಮ. ಇವತ್ತಿನ ವೇದಿಕೆಯಲ್ಲಿ ಎಲ್ಲಾ ಜಾತಿ, ಮತದವರಿದ್ದು ನಾವೆಲ್ಲರೂ ತುಳು-ಕನ್ನಡಿಗರು ಎಂದು ತೋರಿಸಿದ್ದೇವೆ. ಹೊರನಾಡಿನಲ್ಲಿ ಕನ್ನಡ ಸಂಘಗಳನ್ನು ಕಟ್ಟಿ ಕನ್ನಡ ಶಾಲೆಗಳನ್ನು ಉಳಿಸುವ ಪ್ರಯತ್ನ ಆಗಬೇಕು. ತುಳು – ಕನ್ನಡಿಗರು ಕನ್ನಡ ಶಾಲೆಗಳನ್ನು ಉಳಿಸಿದರೆ ಮಾತ್ರ ನಮ್ಮ ಕನ್ನಡ ಉಳಿಯಬಹುದು. ಇಂದು ಕನ್ನಡ ಶಾಲೆಗಳಲ್ಲಿ ಕಲಿತ ಹೆಚ್ಚಿನವರು ತಮ್ಮ ಜೀವನದಲ್ಲಿ ಸಾಧನೆಯನ್ನು ಮಾಡಿದವರು. ಉನ್ನತಮಟ್ಟದ ಉದ್ಯೋಗದಲ್ಲಿ ಹಾಗೂ ಉದ್ದಿಮೆಗಳಲ್ಲಿ ಇರುವವರು ಕನ್ನಡ ಶಾಲೆಗಳಲ್ಲಿ ಕಲಿತವರು. ಕನ್ನಡ ಶಾಲೆ ನಮ್ಮವರಿಗೆ ಜೀವನ ಶಿಕ್ಷಣ ಕೊಟ್ಟಿದೆ. ಇದನ್ನು ನಾವು ಮರೆಯಬಾರದು. ಕನ್ನಡ ಸಂಘ ಸಯನ್ ನ ಅಧ್ಯಕ್ಷರಾದ ಡಾ. ಎಂ. ಜೆ. ಪ್ರವೀಣ್ ಭಟ್ ಬಡವರ ಕಣ್ಣೀರು ವರಸುತ್ತಿದ್ದಾರೆ. ಇದು ನಿಜವಾದ ದೇವರ ಸೇವೆ. ಇವರು ದುಬಾಯಿಯ ನಮ್ಮ ಕಲಾವಿದರನ್ನು ಇಲ್ಲಿಗೆ ತರಿಸಿ ನಾಟಕ ಪ್ರದರ್ಶನ ನೀಡುತ್ತಿರುವುದು ಅಭಿನಂದನೀಯ. ನಾವು ಎಲ್ಲಿದ್ದರೂ ನಮ್ಮ ತುಳುನಾಡನ್ನು ಮರೆಯಬಾರದು ಎಂದು ತುಳು-ಕನ್ನಡಿಗರಿಗೆ ಕಿವಿ ಮಾತನ್ನು ನೀಡಿದರು.

ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ್ ಬೋಜ ಶೆಟ್ಟಿ ಯವರು ಕನ್ನಡ ಸಂಘ ಸಯನ್ ಇದರ ಮೂಲಕ ಡಾ. ಎಂ. ಜೆ. ಪ್ರವೀಣ್ ಭಟ್ ಅವರು ಅಲ್ಪಾವಧಿಯಲ್ಲೇ ಉನ್ನತ ಮಟ್ಟದ ಸಾಧನೆ ಮಾಡಿದ್ದು ಅಭಿನಂದನೀಯ. ದೂರದ ಅರಬ್ ಸಂಯುಕ್ತ ಸಂಸ್ಥಾನದಿಂದ ಕಲಾವಿದರನ್ನು ಇಲ್ಲಿದೆ ತರಿಸಿದ್ದು ಮಾತ್ರವಲ್ಲ ಊರಿನಿಂದ ಕಲಾಭಿಮಾನಿಗಳನ್ನು ಇಲ್ಲಿಗೆ ತರಿಸಿ ಕಾರ್ಯಕ್ರಮ ನಡೆಸುತ್ತಿದ್ದು ಸಂಘದ ಮೂಲಕ ಇಂತಹ ಕನ್ನಡಪರ ಕಾರ್ಯಕ್ರಮಗಳು ಮುಂದೆಯೂ ನಡೆಯುತ್ತಿರಲಿ ಎಂದು ಶುಭ ಹಾರೈಸಿದರು.

ಕನ್ನಡ ಸಂಘ ಸಯನ್ ನ ಅಧ್ಯಕ್ಷರಾದ ಡಾ. ಎಂ. ಜೆ. ಪ್ರವೀಣ್ ಭಟ್ ಎಲ್ಲರನ್ನು ಸ್ವಾಗತಿಸುತ್ತಾ ನಾನು ಮತ್ತು ನಮ್ಮ ಸಂಘದ ಗೌರವಾಧ್ಯಕ್ಷರಾದ ಜಯರಾಮ್ ಶೆಟ್ಟಿ ಮತ್ತು ಇತರರು ಸೇರಿ ಸಯನ್ ಪರಿಸರದಲ್ಲಿ ಅನೇಕ ಗಣ್ಯರಿದ್ದು ಕನ್ನಡ ಸಂಘದ ಅಗತ್ಯವನ್ನರಿತು ಈ ಸಂಘಟನೆಯನ್ನು ಸ್ಥಾಪಿಸಿದ್ದು ಪ್ರಥಮ ವರ್ಷದಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಿದೆ ಎನ್ನಲು ಸಂತೋಷವಾಗುತ್ತಿದೆ. ದುಬಾಯಿಗೆ ಹೋದ ಸಂಧರ್ಬದಲ್ಲಿ ಅಲ್ಲಿಯವರು ಮುಂಬಯಿಯಲ್ಲಿ ಅವರಿಗೆ ನಾಟಕ ಪ್ರದರ್ಶನ ನೀಡಲು ಅವಕಾಶ ನೀಡಬೇಕೆಂದಾಗ ಅದಕ್ಕೆ ಸಂತೋಷದಿಂದ ಒಪ್ಪಿದೆ ಎಂದರು.

ಕನ್ನಡ ಸಂಘ ಸಯನ್ ನ ಗೌರವಾಧ್ಯಕ್ಷರಾದ ಜಯರಾಮ್ ಶೆಟ್ಟಿ ಯವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಸಂಘ ಸ್ಥಾಪನೆಯಾದ ಪ್ರಥಮ ವರ್ಷದಲ್ಲೇ ಹಲವರು ಕನ್ನಡಪರ ಹಾಗೂ ಜನಪರ ಕಾರ್ಯಕ್ರಮ್ಗಳನ್ನ ನಡೆಸಿ ತುಳು ಕನ್ನಡಿಗರ ಪ್ರೀತಿ, ಅಭಿಮಾನಕ್ಕೆ ಪಾತ್ರರಾಗಿದ್ದೇವೆ. ನಮ್ಮಲ್ಲಿರುವ ಎಲ್ಲರೂ ಅನುಭವೀ ಸದಸ್ಯರಾಗಿದ್ದು ನಮ್ಮೆಲ್ಲ ಕಾರ್ಯಕ್ರಮಕ್ಕೆ ಇದರಿಂದ ತುಂಬಾ ಪ್ರಯೋಜನಕಾರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಕೆ. ಡಿ. ಶೆಟ್ಟಿ (ಭವಾನಿ ಶಿಪ್ಪಿಂಗ್ ಸರ್ವಿಸನ್), ಹೃದಯ ತಜ್ಞ ಡಾ. ಸದಾನಂದ ಶೆಟ್ಟಿ, ಸಿದ್ಧಿವಿನಾಯಕ ದೇವಸ್ಥಾನದ ಟ್ರಷ್ಟಿ ಭಾಸ್ಕರ್ ಶೆಟ್ಟಿ, ಹೋಟೆಲ್ ಉದ್ಯಮಿ ಆದರ್ಶ ಶೆಟ್ಟಿ ದಂಪತಿ, ಪುರೋಹಿತ ಪ್ರಕಾಶ್ ಭಟ್, ಡೊಂಬಿವಲಿ, ಸತೀಶ್ ಶೆಟ್ಟಿ ಬೊಳಾಡಗುತ್ತು , ಭಾಸ್ಕರ ಶೆಟ್ಟಿ, ಕಾಂತಾರ ಚಲನಚಿತ್ರ ನಟ ರಾಜೀವ್ ಶೆಟ್ಟಿ, ಪ್ರಭಾ ಸುವರ್ಣ ಇವರನ್ನು ಸನ್ಮಾನಿಸಲಾಯಿತು

ರಾಜೇಶ್ ಶೆಟ್ಟಿ, ಜಗದೀಶ್ ಶೆಟ್ಟಿ, ಲಯನ್ ಕಿಶೋರ್ ಶೆಟ್ಟಿ, ಸತಿಶ್ ಬಂಡೇಲ್ ಹಾಗೂ ದುಬಾಯಿಯ ಗಮ್ಮತ್ ಕಲಾವಿದರ ತಂಡದ ಎಲ್ಲಾ ಕಲಾವಿದರನ್ನು ಗೌರವಿಸಲಾಯಿತು.

ಸಂಘದ ಅಧ್ಯಕ್ಷರಾದ ಡಾ. ಎಂ. ಜೆ. ಪ್ರವೀಣ್ ಭಟ್ ಮತ್ತು ಪರಿವಾರದವರನ್ನು ಗಮ್ಮತ್ ಕಲಾವಿದರ ಪರವಾಗಿ ವಿಶ್ವನಾಥ ಶೆಟ್ಟಿ ದುಬಾಯಿ ಮತ್ತು ನಾಟಕ ತಂಡದ ಎಲ್ಲಾ ಸದಸ್ಯರುಗಳು ಆತ್ಮೀಯವಾಗಿ ಸನ್ಮಾನಿಸಿದರು.

ವೇದಿಕೆಯಲ್ಲಿ ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ಉದ್ಯಮಿ ಅಶ್ವಿನ್ ಪಟೇಲ್, ಉದ್ಯಮಿ ವಿಶ್ವನಾಥ್ ಶೆಟ್ಟಿ ಕಾಪು, ಕರ್ನಾಟಕ ಸಂಘ ಶಾರ್ಜಾ ದ ಸಲಹೆಗಾರ ಸೈಯದ್ ಮೊಹಮ್ಮದ್ ಅಜ್ಮಲ್, ಗಮ್ಮತ್ ಕಲಾವಿದರು ದುಬಾಯಿಯ ಅಧ್ಯಕ್ಷೆ ಲವೀನಾ ಫರ್ನಾಂಡಿಸ್, ಗಮ್ಮತ್ ಕಲಾವಿದರು ದುಬಾಯಿಯ ಮಹಾಪೋಷಕ ಹರೀಶ್ ಬಂಗೇರ , ಜಯರಾಮ್ ಶೆಟ್ಟಿ, ಸಯನ್ ರಾಮದೇವ್ ಹೋಟೆಲ್ ನ ಸುಂದರ್ ಶೆಟ್ಟಿ, ಕರ್ನಾಟಕ ಸಂಘ ದುಬಾಯಿಯ ಪೋಷಕ ಜಯಂತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಈ ಸಮಾರಂಭಕ್ಕೆ ಬಂಟರ ಸಂಘ ಮುಂಬಯಿಯ ಪ್ರಧಾನ ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿ, ಸಮಾಜ ಸೇವಕ ಮಹೇಶ್ ಕರ್ಕೇರ ಮತ್ತಿತರ ಗಣ್ಯರು ಆಗಮಿಸಿದ್ದರು.

ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪಟ್ಲ ಸತೀಷ್ ಶೆಟ್ಟಿ ತಂಡದವರಿಂದ ನೃತ್ಯ ಗಾನ ವೈಭವ ನಡೆಯಿತು. ಈ ಕಾರ್ಯಕ್ರಮಕ್ಕಾಗಿಯೇ ದುಬಾಯಿಯಿಂದ ಗಮ್ಮತ್ ಕಲಾವಿದರು ತಂಡದ 25 ಮಂದಿ ಕಲಾವಿದರು ಆಗಮಿಸಿದ್ದು ವಿಶ್ವನಾಥ್ ಶೆಟ್ಟಿ ದುಬಾಯಿ ನಿರ್ದೇಶನದಲ್ಲಿ “ವಾ ಗಳಿಗೆಡ್ ಪುಟುದನಾ” ತುಳು ಹಾಸ್ಯಮಯ ನಾಟಕವು ತುಂಬಿದ ಸಭಾಗೃಹದಲ್ಲಿ ಪ್ರದರ್ಶನಗೊಂಡಿತು. ಸಂದೀಪ್ ಶೆಟ್ಟಿ ರಾಯಿ ರಚಿಸಿದ, ಈ ನಾಟಕ ಮುಂಬಯಿಯ ಹಿರಿಯ ಕಲಾವಿದ ಜಗದೀಶ ಶೆಟ್ಟಿ ಕೆಂಚನಕೆರೆ ಯವರ ಸಂಪೂರ್ಣ ಸಹಕಾರದೊಂದಿಗೆ ಜರಗಿದ್ದು ಶುಭಕರ್ ಬೆಳಪು ಸಂಗೀತ ನೀಡಿದರು. ಸಭಾ ಕಾರ್ಯಕ್ರಮವನ್ನು ಕರ್ನೂರು ಮೋಹನ್ ರೈ ಮತ್ತು ಮಾಲಾ ಮೆಸ್ತಾ ನಿರ್ವಹಿಸಿದರು.

ಕನ್ನಡ ಸಂಘ ಸಯನ್ ಉಪಾಧ್ಯಕ್ಷರುಗಳಾದ ಸದಾಶಿವ ಬಿ ಎನ್ ಶೆಟ್ಟಿ, ಸತೀಶ್ ಶೆಟ್ಟಿ, ದಿನೇಶ್ ಶೆಟ್ಟಿ, ಸದಾನಂದ ಶೆಟ್ಟಿ , ಸಂಸ್ಥಾಪಕರಾದ ಹ್ಯಾರಿ ಸಿಕ್ವೇರಾ, ಗೌರವ ಪ್ರಧಾನ ಕಾರ್ಯದರ್ಶಿ ಡಾ. ಜಿಪಿ ಕುಸುಮ, ಕೋಶಾಧಿಕಾರಿ ಸುರೇಶ್ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ದಯಾನಂದ ಮೂಲ್ಯ, ಜಯಶೀಲ್ ಮೂಲ್ಯ, ಜೊತೆ ಕೋಶಾಧಿಕಾರಿಗಳಾದ ಚಂದ್ರಿಕಾ ಶೆಟ್ಟಿ, ಉಮೇಶ್ ಶೆಟ್ಟಿ , ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತೇಜಾಕ್ಷಿ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಚಂದ್ರ ದೇವಾಡಿಗ, ಚೈತನ್ಯ ಆಚಾರ್ಯ, ತ್ರಿವೇಣಿ ಶೆಟ್ಟಿ, ಪ್ರಭಾ ಸುವರ್ಣ ಹಾಗೂ ಸಂಘದ ಇತರ ಸದಸ್ಯರು ಸಹಕರಿಸಿದರು.

ಸಂಘದ ಸದಸ್ಯರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಪಟ್ಲ ಸತೀಷ್ ಶೆಟ್ಟಿ ತಂಡದವರಿಂದ ಯಕ್ಷಗಾನ, ನೃತ್ಯ, ಗಾನ ವೈಭವ ನಡೆಯಿತು. ದುಬಾಯಿಯಿಂದ ಗಮ್ಮತ್ ಕಲಾವಿದರು ತಂಡದ 25 ಮಂದಿ ಕಲಾವಿದರು ಆಗಮಿಸಿದ್ದು ಮಧ್ಯಾಹ್ನ ವಿಶ್ವನಾಥ್ ಶೆಟ್ಟಿ ದುಬಾಯಿ ನಿರ್ದೇಶನದಲ್ಲಿ “ವಾ ಗಳಿಗೆಡ್ ಪುಟುದನಾ” ತುಳು ಹಾಸ್ಯಮಯ ನಾಟಕ ತುಂಬಿದ ಸಭಾಗೃಹಲ್ಲಿ ಪ್ರದರ್ಶನಗೊಂಡಿತು. ಸಂದೀಪ್ ಶೆಟ್ಟಿ ರಾಯಿ ರಚಿಸಿದ, ಈ ನಾಟಕ ಮುಂಬಯಿಯ ಹಿರಿಯ ಕಲಾವಿದ ಜಗದೀಶ ಶೆಟ್ಟಿ ಕೆಂಚನಕೆರೆ ಯವರ ಸಂಪೂರ್ಣ ಸಹಕಾರದೊಂದಿಗೆ ಪ್ರದರ್ಶನಗೊಂಡಿತು. ಶುಭಕರ್ ಬೆಳಪು ಸಂಗೀತ ನೀಡಿದ್ದರು. ಕಾರ್ಯಕ್ರಮವನ್ನು ಕರ್ನೂರು ಮೋಹನ್ ರೈ ಮತ್ತು ಮಾಲಾ ಮೆಸ್ತಾ ನಿರ್ವಹಿಸಿದರು.

====
ಕನ್ನಡ ಸಂಘ ಸಯನ್ ನಮಗೆ ದುಬಾಯಿ ಹಾಗೂ ಶಾರ್ಜಾ ದಿಂದ ಇಲ್ಲಿಗೆ ಬಂದು ನಾಟಕ ಪ್ರದರ್ಶನ ಕ್ಕೆ ಅವಕಾಶ ನೀಡಿದ್ದು ನಿಮಗೆಲ್ಲರಿಗೂ ನಮ್ಮೆಲ್ಲರ ಪರವಾಗಿ ಚಿರಋಣಿಯಾಗಿದ್ದೇನೆ. ಇನ್ನು ಮುಂದೆಯೂ ಇದೇ ರೀತಿ ನಿಮ್ಮ ಸಹಕಾರ ಪ್ರೋತ್ಸಾಹ ನಮ್ಮೊಂದಿಗಿರಲಿ.
-ಸತೀಶ್ ಪೂಜಾರಿ, ಬಿಲ್ಲವಾಸ್ ದುಬಾಯಿಯ ಮಾಜಿ ಅಧ್ಯಕ್ಷ ಹಾಗೂ ಕರ್ನಾಟಕ ಸಂಘ ಶಾರ್ಜಾ ದ ಅಧ್ಯಕ್ಷ
=====
ನಮ್ಮ ತುಳು ನಾಡಿನ ಬಾಷೆ, ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಇಂತಹ ಕನ್ನಡ ಸಂಘಟನೆಗಳು ಕ್ರೀಯಾಶೀಲವಾಗಲಿ. ಈ ಸಂಸ್ಥೆಗೆ ಬೋಂಬೆ ಬಂಟ್ಸ್ ಅಸೋಷಿಯೇಶನ್ ನ ಪರವಾರಿ ಶುಭ ಹಾರೈಕೆ.
– ಸಿಎ ಸುರೇಂದ್ರ ಕೆ. ಶೆಟ್ಟಿ, ಅಧ್ಯಕ್ಷರು, ಬೋಂಬೆ ಬಂಟ್ಸ್ ಅಸೋಷಿಯೇಶನ್
=====
ಕನ್ನಡಿಗರಿಗಾಗಿ ಕನ್ನಡಿಗರಿಂದ ಹುಟ್ಟಿದ ಈ ಕನ್ನಡ ಸಂಘ ಸಯನ್ ಇದರ ಮುಂದಿನ ಎಲ್ಲಾ ಯೋಜನೆಗಳಿಗೆ ಶುಭ ಹಾರೈಕೆಗಳು.
-ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಸಂಸ್ಥಾಪಕ, ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ,
=====
ಸನ್ಮಾನಿತರ ನುಡಿ :
ವಿಜ್ರಂಭಣೆಯಿಂದ ಪ್ರಥಮ ವಾರ್ಷಿಕೋತ್ಸವ ನಡೆಸುತ್ತಿರುವ ಕನ್ನಡ ಸಂಘದ ಎಲ್ಲಾ ಸದಸ್ಯರಿಗೆ ಅಭಿನಂದನೆಗಳು. ಅಸಹಾಯಕ ಕನ್ನಡಿಗರಿಗೆ ಸಹಕರಿಸಲು ಇಂತಹ ಕನ್ನಡ ಸಂಘಗಳ ಅಗತ್ಯವಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಇರುವವರು ಇಲ್ಲದವರಿಗೆ ಸಹಕರಿಸುವ ಮನಸ್ಸನ್ನು ನೀಡುದರ ಮೂಲಕ ಜನಸೇವೆ ಮಾಡುವಂತಾಗಲಿ.
-ಕೆ. ಡಿ. ಶೆಟ್ಟಿ, ಭವಾನಿ ಶಿಪ್ಪಿಂಗ್ ಸರ್ವಿಸನ್
====
ನನ್ನನ್ನು ಗುರುತಿಸಿ ಸನ್ಮಾನಿಸಿದ್ದಕ್ಕೆ ಕನ್ನಡ ಸಂಘದ ಕ್ಕೆ ಆಭಾರಿಯಾಗಿದ್ದೇನೆ. ಪ್ರವೀಣ್ ಭಟ್ ಅವರು ಉತ್ತಮ ಸಂಘಟಕರೂ ದಾನಿಯೂ ಆಗಿದ್ದು, ತಾನು ಹೇಳಿದ್ದನ್ನು ಸಮಯಕ್ಕೆ ಸರಿಯಾಗಿ ಪೂರೈಸುವ ಉತ್ತಮ ಗುಣ ಅವರಲ್ಲಿದೆ. ಅಭಿನಂದನೆಗಳು.
-ಆದರ್ಶ ಶೆಟ್ಟಿ, ಹೋಟೆಲ್ ಉದ್ಯಮಿ
====
ಸನ್ಮಾನಿಸಿದಕ್ಕೆ ಕನ್ನಡ ಸಂಘದ ಅಧ್ಯಕ್ಷರಿಗೂ ಹಾಗೂ ಎಲ್ಲಾ ಸದಸ್ಯರಿಗೂ ಅಭಿನಂದನೆಗಳು. ಉದ್ಯೋಗ ಸೃಷ್ಠಿಸುವ ಕಾರ್ಯ ಕಂಬಳದಿಂದಾಗಿದೆ. ಸಾವಿರಾಗು ಕುಟುಂಬಗಳಿಗೆ ಇದರಿಂದ ಪ್ರಯೋಜನವಾಗಿದೆ.
-ರಾಜೇಶ್ ಶೆಟ್ಟಿ
======

ಕಳೆದ 50 ವರ್ಷ ಬಂಟರ ಸಂಘದ ಈ ವೇದಿಕೆಯಲ್ಲಿ ಅನೇಕ ಸನ್ಮಾನಗಳನ್ನು ಸ್ವೀಕರಿಸಿದ್ದೇನೆ. ಸಯನ್ ನಲ್ಲಿ ನನ್ನ ಜೀವನದ ಹೆಚ್ಚಿನ ಸಮಯವನ್ನು ಕಳೆದಿದ್ದು ಅಲ್ಲಿ ಕನ್ನಡ ಸಂಘದ ಅಗತ್ಯವಿದ್ದು ಈ ಸಂಘಕ್ಕೆ ನಾನು ಋಣಿಯಾಗಿದ್ದೇನೆ.
-ಡಾ. ಸದಾನಂದ ಶೆಟ್ಟಿ, ಖ್ಯಾತ ಹೃದಯ ತಜ್ಞ
=====
ಒಂದೇ ವರ್ಷದಲ್ಲಿ ಗಣ್ಯ ವ್ಯಕ್ತಿಗಳನ್ನು ಸೇರಿಸಿ ಪ್ರಥಮ ವಾರ್ಷಿಕೋತ್ಸವ ನಡೆಸುವ ಈ ಸಂಘಕ್ಕೆ ಉತ್ತಮ ಭವಿಷ್ಯವಿದೆ. ದಾರಾವಿಯಲ್ಲಿ ಸಂಘಕ್ಕೆ ಒಂದು ನಿವೇಶನಕ್ಕೆ ಅವಕಾಶವಿದ್ದು ಸಂಘಕ್ಕೆ ಸ್ಥಳವನ್ನು ಗಳಿಸುವ ಪ್ರಯತ್ನವಾನು ಮಾಡಲಿರುವೆನು.
– ಭಾಸ್ಕರ್ ಶೆಟ್ಟಿ, ಸಿದ್ಧಿವಿನಾಯಕ ದೇವಸ್ಥಾನದ ಟ್ರಷ್ಟಿ

ವರದಿ : ಈಶ್ವರ ಎಂ. ಐಲ್, ಚಿತ್ರ : ಭಾಸ್ಕರ ಕಾಂಚನ್

Click Here To View More Photos 


Spread the love
Subscribe
Notify of

0 Comments
Inline Feedbacks
View all comments