Spread the love
ಶಾಲಾ ಮಕ್ಕಳ ಪ್ರಾಣ ಸಂಕಟಕ್ಕೆ ಮೇಯರ್ ಸ್ಪಂದನೆ ಅಗತ್ಯ : ಪೋಷಕರ ಒಕ್ಕೊರಲ ಮನವಿ
ಮಂಗಳೂರು : ನಗರದ ಬೊಂದೆಲ್ ಚರ್ಚಿನ ಪರಿಸರದಲ್ಲಿ ಮೂರು ಶಾಲೆಗಳಿದ್ದು ಸುಮಾರು ಸಾವಿರಾರು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಶಾಲೆಯ ಎದುರು ಭಾಗದಲ್ಲಿರುವ ರಸ್ತೆಯಲ್ಲಿ ಮಾತ್ರ ಸರಿಯಾದ ಯಾವುದೇ ವಾಹನ ವೇಗ ಮಿತಿಗಾಗಿ ಹಂಪ್ ಬಳಸದೇ ಇರುವುದರಿಂದ ಅನೇಕ ಸಮಯದಿಂದಲೂ ತಮ್ಮ ಬೇಡಿಕೆಯನ್ನು ತಿಳಿಸುತ್ತಿದ್ದ ಪೋಷಕರು ಈ ಭಾರೀ ಮಂಗಳೂರು ಮಹಾ ನಗರ ಪಾಲಿಕೆಯ ರಿಯಲ್ ಸಿಗಂ ಎಂದು ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾದ ಮೇಯರ್ ಕವಿತಾ ಸನಿಲ್ ಅವರು ಈ ಬಗ್ಗೆ ಸ್ಪಂದನೆ ಮಾಡಬೇಕೆಂದು ಮಕ್ಕಳ ಪೋಷಕರು ಒಕ್ಕೂರಲಿನಿಂದ ಮನವಿ ಮಾಡಿಕೊಂಡಿದ್ದಾರೆ.
“ಅನೇಕ ಭಾರೀ ಅಪಘಾತಗಳು”
ಈಗಾಗಲೇ ಈ ರಸ್ತೆಯಲ್ಲಿ ಅನೇಕ ಅಪಘಾತಗಳು ನಡೆದಿರುವುದು ಮಾತ್ರವಲ್ಲದೇ ಪ್ರಾಣವನ್ನು ಬಳಿ ಪಡೆದ ಘಟನೆಯೂ ಇಲ್ಲಿ ನಡೆದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಶಾಲೆಗೆ ಮಕ್ಕಳು ಬಂದು ಸೇರುವ ಸಮಯದಲ್ಲಿ ಮತ್ತು ಶಾಲೆಯಿಂದ ಮಕ್ಕಳು ವಾಪಾಸು ಮನೆಗೆ ಸೇರುವ ಸಮಯದಲ್ಲಿ ಅನೇಕ ವಾಹನಗಳು ಈ ರಸ್ತೆಯಲ್ಲಿ ಓಡಾಟ ಮಾಡುತ್ತಿರುವುದರಿಂದ ಶಾಲಾ ಮಕ್ಕಳಿಗೆ ರಸ್ತೆ ದಾಟಲು ಬಹಳಷ್ಟು ಸಮಸ್ಯೆಯಾಗಿದ್ದು, ಮಕ್ಕಳ ಪೋಷಕರು ಅನೇಕ ಸಮಯದಿಂದಲೂ ಈ ಬಗ್ಗೆ ಜನಪ್ರತಿನಿಧಿಗಳ ಬಳಿ ತಿಳಿಸಿದರೂ ಯಾವುದೇ ಸ್ಪಂದನೆ ನೀಡದ ಕಾರಣ ಈ ಭಾರೀ ಮೇಯರ್ ಕವಿತಾ ಸನಿಲ್ ಅವರು ಸ್ಪಂದನೆ ನೀಡುತ್ತಾರೆ ಎಂಬ ಭಾವನೆಯನ್ನು ಮಕ್ಕಳ ಪೋಷಕರು ವ್ಯಕ್ತ ಪಡಿಸಿದ್ದಾರೆ.
“ಮಕ್ಕಳ ಪ್ರಾಣಕ್ಕಿಂತ (ವಿಐಪಿ)ಗಳು ಮುಖ್ಯನಾ”
ಈ ರಸ್ತೆಯೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಕಾರಣದಿಂದಾಗಿ ಈ ರಸ್ತೆಗೆ ಹಂಪ್ ಹಾಕಲಾಗುವುದಿಲ್ಲ ಎಂದು ಕುಂಟು ನೆಪ ಹೇಳಿಕೊಂಡು ತಿರುಗಾಡುವ ಜನಪ್ರತಿನಿಧಿಗಳು. ಶಾಲೆಯಲ್ಲಿನ ಪುಟ್ಟ ಮಕ್ಕಳ ಪ್ರಾಣಕ್ಕೆ ಮಾತ್ರ ಯಾವುದೇ ಬೆಳೆ ಇಲ್ಲ ಎಂಬಂತೆ ವರ್ತಿಸುತ್ತಿರುವುದು ಮಾತ್ರ ಬಹಳ ಬೇಸರ ವಿಷಯ. ಬೆಂಗಳೂರು ಮತ್ತು ಇನ್ನಿತರ ವಿಮಾನ ನಿಲ್ದಾಣಕ್ಕೆ ಹೋಲಿಸಿದರೇ ಅರ್ಥ ಗಂಟೆಗೆ ಒಂದು ಪಿಐಪಿ ವಾಹನಗಳು ಒಡಾಟ ಮಾಡುತ್ತಿದ್ದರು, ಆ ರಸ್ತೆ ಉದ್ದಕ್ಕೂ ಅನೇಕ ಹಂಪ್ಗಳನ್ನು ರಸ್ತೆಯಲ್ಲಿನ ಸುರಕ್ಷಾತೆಗಾಗಿ ಹಾಕಲಾಗಿದೆ. ಆದರೆ ನಗರದಲ್ಲಿನ ಈ ರಸ್ತೆಗೆ ಮಾತ್ರ ಈ ಶಾಲೆಯ ಸಮೀಪ ಒಂದು ಹಂಪ್ ಹಾಕಿ ಮಕ್ಕಳ ಸುರಕ್ಷತೆಗೆ ಕೈ ಜೋಡಿಸಲು ಮಾತ್ರ ಜನಪ್ರತಿನಿಧಿಗಳು ಹಿಂದೇಟು ಹಾಕುತ್ತಿರುವುದು ಮಾತ್ರ ವಿಪರ್ಯಾಸ.
ಒಟ್ಟಿನಲ್ಲಿ ನಗರದಲ್ಲಿನ ಅನೇಕ ಸಮಸ್ಯೆಗಳ ಬಗ್ಗೆ ಈಗಾಗಲೇ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿರುವ ಮಂಗಳೂರು ಮನಪಾ ಮೇಯರ್ ಕವಿತಾ ಸನಿಲ್ ಅವರು ಇಲ್ಲಿನ ಶಾಲೆಯ ಪುಟ್ಟ ಮಕ್ಕಳ ಪ್ರಾಣ ಸಂಕಟದ ಬಗ್ಗೆ ತಕ್ಷಣವೇ ಸ್ಪಂದಿಸುತ್ತಾರಾ ಎಂದು ಕಾದು ನೋಡಬೇಕಾಗಿದೆ.
Spread the love