ಶಾಲಾ ಶಿಕ್ಷಕರಿಗಾಗಿ ಚಿಗುರು ಕಾರ್ಯಗಾರ
ಅರಳುವ ಮೊಗ್ಗಿನಲ್ಲಿ ನಡವಳಿಕೆಯನ್ನು ಶೋಧಿಸುವುದು ಎಂಬ ಧ್ಯೇಯವಾಕ್ಯದೊಂದಿಗೆ ಒಂದು ದಿನದ ಕಾರ್ಯಗಾರ “ಚಿಗುರು” ವನ್ನು ಶಾಲಾ ಶಿಕ್ಷಕರಿಗಾಗಿ ಫಾದರ್ ಮುಲ್ಲರ್ ಕಾಲೇಜ್ ಆಫ್ ನರ್ಸಿಂಗ್ ನ ಮಕ್ಕಳ ಶುಶ್ರೂಷಾ ವಿಭಾಗ ಮತ್ತು ಮಾನಸಿಕ ಆರೋಗ್ಯ ಶುಶ್ರೂಷಾ ವಿಭಾಗ, ಹಾಗೂ ಕ್ಷೇತ್ರ ಶಿಕ್ಷಣ ಇಲಾಖೆ, ಮಂಗಳೂರು, ದಕ್ಷಿಣ ವಿಭಾಗ ಇವರ ಜಂಟಿ ಸಹಯೋಗದಲ್ಲಿ ಜುಲೈ 3, 2024 ರಂದು ಆಯೋಜಿಸಲಾಯಿತು.
ಕಾರ್ಯಾಗಾರದಲ್ಲಿ ಮಕ್ಕಳ ವರ್ತನೆಯ ಸಮಸ್ಯೆಗಳಾದ ಆಟಿಸಂ, ADHD, ಮಾದಕ ವ್ಯಸನದ ಮತ್ತು ಕಲಿಕಾ ಅಸಾಮರ್ಥ್ಯ ಮುಂತಾದ ವಿಷಯಗಳ ಬಗ್ಗೆ ವಿಸ್ತ್ರತ ತರಬೇತಿ ನೀಡಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಫಾದರ್ ಮುಲ್ಲರ್ ಆಸ್ಪತ್ರೆಯ ಮಾನಸಿಕ ಆರೋಗ್ಯ ವಿಭಾಗದ ಮುಖ್ಯಸ್ಥೆ ಡಾI ಸುಪ್ರಿಯಾ ಹೆಗ್ಡೆ ಆರೂರ್, ಮಂಗಳೂರು ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ಯೆಚ್ ಆರ್ ಈಶ್ವರ ಗೌರವ ಅಥಿತಿ, ಫಾದರ್ ಮುಲ್ಲರ್ ಸಮೂಹ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ಫಾದರ್ ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಅಧ್ಯಕ್ಷರಾಗಿದ್ದರು.
ಕ್ಷೇತ್ರ ಸಮನ್ವಯಾಧಿಕಾರಿ ಡಾI ಪ್ರಶಾಂತ್ ಕೆ ಯಸ್, ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರದ ವಂದನೀಯ ಸಿಸ್ಟರ್ ಧನ್ಯ ದೇವಸ್ಯ ಉಪಸ್ಥಿತರಿದ್ದರು.
ಡಾI ಸುಪ್ರಿಯಾ ಹೆಗ್ಡೆ, ಡಾI ರಾಹುಲ್ ಯೆಮ್ ರಾವ್, ಡಾI ಅವಿನಾಶ್ ಜಿ ನಾಯಕ್, ಡಾI ರಾಮೀಲ ಶೇಖರ, ಡಾI ಬಿ ಎಸ್ ಮಹೇಶ್ ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಕರಿಗೆ ಮಾಹಿತಿ/ ತರಬೇತಿ ನೀಡಿದರು. ಶ್ರೀಮತಿ ಸೋನಿಯಾ ಲೋಬೊ ಸ್ವಾಗತಿಸಿದರು ಮತ್ತು ಶ್ರೀಮತಿ ಶರ್ಮಿಳ ಕಾರ್ಯಕ್ರಮವನ್ನು ನಿರೂಪಿಸಿದರು. ಸುಮಾರು 50 ಶಿಕ್ಷಕರು ಈ ಕಾರ್ಯಾಗಾರದ ಸದುಪಯೋಗವನ್ನು ಪಡೆದುಕೊಂಡರು.