Home Mangalorean News Kannada News ಶಾಸಕರೇ ಕ್ಷುಲ್ಲಕ ರಾಜಕಾರಣ ಮಾಡಿಕೊಂಡು ಕಾಲಹರಣ ಮಾಡಬೇಡಿ – ರಮೇಶ್ ಕಾಂಚನ್

ಶಾಸಕರೇ ಕ್ಷುಲ್ಲಕ ರಾಜಕಾರಣ ಮಾಡಿಕೊಂಡು ಕಾಲಹರಣ ಮಾಡಬೇಡಿ – ರಮೇಶ್ ಕಾಂಚನ್

Spread the love

ಶಾಸಕರೇ ಕ್ಷುಲ್ಲಕ ರಾಜಕಾರಣ ಮಾಡಿಕೊಂಡು ಕಾಲಹರಣ ಮಾಡಬೇಡಿ – ರಮೇಶ್ ಕಾಂಚನ್

ಉಡುಪಿ: ಶಾಸಕರು ಅಭಿವೃದ್ಧಿಯನ್ನು ಮರೆತು ಕ್ಷುಲ್ಲಕ ರಾಜಕಾರಣ ಮಾಡದಂತೆ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಕಾಂಚನ್ ಎಚ್ಚರಿಸಿದ್ದಾರೆ.

ಕುಂದಾಪುರದ ಪ್ರಾಂಶುಪಾಲರ ಪ್ರಶಸ್ತಿ ತಡೆ ಕುರಿತಾಗಿ ಅಸಾಂವಿಧಾನಿಕ, ಅನಾಗರಿಕ ರೀತಿಯಲ್ಲಿ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಉಡುಪಿ ಶಾಸಕ ಸೇರಿದಂತೆ ಬಿಜೆಪಿ ಕಾರ್ಯಕರ್ತರ ಮೇಲೆ ಕೇಸು ದಾಖಲಾಗಿರುವುದರ ಬಗ್ಗೆ ಮೊದಲು ಶಾಸಕರು ಆತ್ಮ ವಿಮರ್ಶೆ ಮಾಡಿಕೊಳ್ಳಲಿ.
ಜ್ಞಾನದ ಬೆಳಕನ್ನು ನೀಡಿ ಉತ್ತಮ ಭವಿಷ್ಯ ರೂಪಿಸುವ ಶಿಕ್ಷಕರ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ವಿಶೇಷ ಗೌರವ, ಅತೀವ ಕಾಳಜಿ ಇದೆ.

ಶಿಕ್ಷಕರ ಮೇಲೆ ಗೌರವದ ನೆಪ ಇಟ್ಟುಕೊಂಡು ಕಾನೂನಿಗೆ ವಿರುದ್ಧವಾಗಿ ಅನಾಗರಿಕ ರೀತಿಯಲ್ಲಿ ತಮ್ಮವರು ಪ್ರತಿಭಟನ ನಡೆಯುವಾಗ ಕಾನೂನು ರೂಪಿಸುವ ರಾಜ್ಯ ಶಾಸಕಾಂಗದ ಸದಸ್ಯನಾಗಿ ಅದನ್ನು ತಡೆಯಬೇಕಿತ್ತು.

ಅಂದು ಅನಾಗರಿಕ ವರ್ತನೆಯ ಪ್ರಕರಣದ ಮೂಲಕವೇ ರಾಜಕೀಯ ಪ್ರವರ್ಧಮಾನಕ್ಕೆ ಬಂದವರಿಗೆ ನೂರಾರು ಪೋಲಿಸ್ ಕೇಸ್ ಗಳೇ ಶೋಭಾಯಮಾನ ಎಂದುಕೊಳ್ಳುವುದರಲ್ಲಿ ವಿಶೇಷತೆ ಎನೂ ಇಲ್ಲ.ಆದರೆ ತಾವು ಇದೀಗ ವಿದ್ಯಾವಂತರ ನಾಡು ಎಂಬ ಅಭಿದಾನ ಪಡೆದುಕೊಂಡ ಉಡುಪಿಯ ಜನಪ್ರತಿನಿಧಿ ಎಂಬ ಪರಿಜ್ಞಾನವನ್ನು ಇಟ್ಟುಕೊಂಡು ಸರಕಾರದೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಂಡು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಉತ್ತಮ ಚಿಂತನೆ,ಪರಿಕಲ್ಪನೆಯಿಂದ ಅಭಿವೃದ್ಧಿ ಕೆಲಸಗಳು ಮತ್ತು ಉಡುಪಿಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ದೊರಕಿಸಲು ಶ್ರಮವಹಿಸುವಂತೆ ರಮೇಶ್ ಕಾಂಚನ್ ಸಲಹೆ ನೀಡಿದ್ದಾರೆ


Spread the love

Exit mobile version