ಶಾಸಕ ಕಾಮತ್ ಅವರಿಂದ ಪ್ರಕೃತಿ ವಿಕೋಪ ಪರಿಹಾರನಿಧಿಯ ಚೆಕ್ ವಿತರಣೆ
ಕಳೆದ ಮಳೆಗಾಲದಲ್ಲಿ ಪ್ರಕೃತಿ ವಿಕೋಪದಿಂದ ತೀವ್ರ ನಷ್ಟ ಅನುಭವಿಸಿದ 32 ನೇ ಮರೋಳಿ ವಾರ್ಡಿನ ದೊಡ್ಡಮನೆ ನಿವಾಸಿ ಹರೀಶ್ ಚಂದ್ರ ಅವರಿಗೆ ಶಾಸಕ ವೇದವ್ಯಾಸ ಕಾಮತ್ ಪರಿಹಾರ ನಿಧಿಯ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕಾಮತ್ ಅವರು ಕಳೆದ ಬಾರಿ ಸುರಿದ ಭಾರಿ ಮಳೆಗೆ ಮಂಗಳೂರು ನಗರ ದಕ್ಷಿಣದಲ್ಲಿ ಅನೇಕ ಮನೆಗಳು ಭಾಗಶ: ಕುಸಿದು ಹೋಗಿದ್ದವು. ಅಲ್ಲಿ ತಾವು ಸ್ವತ: ಪರಿಶೀಲಿಸಿ ಸರಕಾರದಿಂದ ಪರಿಹಾರನಿಧಿಗೆ ಹೆಚ್ಚಿನ ಬೇಡಿಕೆ ಕೂಡ ಇಡಲಾಗಿತ್ತು.
ಬಂದಿರುವ ಪರಿಹಾರನಿಧಿಯಲ್ಲಿ ಮರೋಳಿ ನಿವಾಸಿ ಹರೀಶಚಂದ್ರ ದೊಡ್ಡಮನಿ ಅವರಿಗೆ 66,750 ರೂಪಾಯಿ ಮೌಲ್ಯದ ಚೆಕ್ ಅನ್ನು ನೀಡುತ್ತಿದ್ದೇವೆ. ಸರಕಾರದಿಂದ ಇನ್ನೂ ಹೆಚ್ಚಿನ ಪರಿಹಾರನಿಧಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು. ಶಾಸಕರೊಂದಿಗೆ ಸ್ಥಳೀಯ ಕಾರ್ಪೋರೇಟರ್ ಕೇಶವ ಮರೋಳಿ, ಬಿಜೆಪಿ ಮುಖಂಡರಾದ ವಸಂತ ಜೆ ಪೂಜಾರಿ, ರಮೇಶ್ ಕಂಡೆಟ್ಟು, ವಿನೀತ್ ಕೋಟ್ಯಾನ್, ಜಗನಾಥ್ ದೊಡ್ಡಮನಿ, ಕೇಶವ ದೊಡ್ಡಮನಿ, ಕಮಲಾಕ್ಷ ದೊಡ್ಡಮನಿ, ದೇವದಾಸ ದೊಡ್ಡಮನಿ ಉಪಸ್ಥಿತರಿದ್ದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ನವೆಂಬರ್ 25 ರಂದು ಮಂಗಳೂರಿನಲ್ಲಿ ಆಯೋಜಿಸಿರುವ ಬೃಹತ್ ಜನಾಗ್ರಹ ಸಭೆಯ ಕುರಿತು ಬಸ್ ಮಾಲೀಕರ ಸಂಘದ ಪೂರ್ವಭಾವಿ ಸಭೆಯು ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಬಿಜೆಪಿ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಬಸ್ ಮಾಲಕರ ಸಂಘ ಜನಾಗ್ರಹ ಸಭೆಗೆ ಸಂಪೂರ್ಣ ಬೆಂಬಲ ಸೂಚಿಸಿತು.