ಶಾಸಕ ಜೆ.ಆರ್.ಲೋಬೊ ಅವರಿಗೆ ಮಾತೃ ವಿಯೋಗ

Spread the love

ಶಾಸಕ ಜೆ.ಆರ್.ಲೋಬೊ ಅವರಿಗೆ ಮಾತೃ ವಿಯೋಗ

ಮಂಗಳೂರು: ಶಾಸಕ ಜೆ.ಆರ್.ಲೋಬೊ ಅವರ ತಾಯಿ ಸಿಸಿಲಿಯಾ ಲೋಬೊ ಅವರು ಇಂದು ಮುಂಜಾನೆ ಕಂಕನಾಡಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 96  ವರ್ಷ ವಯಸ್ಸಾಗಿತ್ತು.

ಮಳವೂರಿನ ಕರಂಬಾರಿನಲ್ಲಿ 3.5.1921 ರಲ್ಲಿ ಪಿಯೂಸ್ ಮೊಂತೇರೊ ಮತ್ತು ಪ್ಲ್ಹೋರಿನ್ ಮೊಂತೇರೊ ಅವರ 12 ಜನರಲ್ಲಿ 2 ನೇ ಮಗಳಾಗಿ ಜನಿಸಿದ್ದರು.

ದಿವಂಗತ ಅಲ್ಬರ್ಟ್ ಲೋಬೊ ಅವರನ್ನು ವಿವಾಹವಾಗಿ ಸುಮಾರು 40 ವರ್ಷ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು. ಅವರು ಪುತ್ತೂರು ,ಕೈಕಂಬ,ವಿಟ್ಲ, ಪಜೀರ್, ಫೆರಾರ್ ಮುಂತಾದ ಕಡೆಗಳಲ್ಲಿ ದುಡಿದಿದ್ದರು.

ಹಲವಾರು ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. 4 ಜನ ಮಕ್ಕಳನ್ನು ಹೊಂದಿದ್ದ ಸಿಸಿಲಿಯಾ ಅವರು ಈ ಪೈಕಿ ಶಾಸಕ ಜೆ.ಆರ್.ಲೋಬೊ ಅವರು ಕಿರಿಯ ಮಗ.


Spread the love