ಶಿಕ್ಷಕರಿಗೆ ಶಿಕ್ಷೆ: ಇದು ಬಿಜೆಪಿ ಸರ್ಕಾರದ ಕೊಡುಗೆ – ಯು ಟಿ ಖಾದರ್
ಮಂಗಳೂರು: ಅಧಿಕಾರದಲ್ಲಿರುವ ಬಿಜೆಪಿ ತನ್ನೊಳಗಿನ ಆಂತರಿಕ ಯುದ್ಧದಲ್ಲಿ ಮುಳುಗಿರುವಾಗ, ರಾಜ್ಯದ ಇಡೀ ಶೈಕ್ಷಣಿಕ ವ್ಯವಸ್ಥೆ ಪಾತಾಳಕ್ಕೆ ಕುಸಿದು ಬಿದ್ದಿದೆ. ಸಾಂಕ್ರಾಮಿಕ ರೋಗದ ಮಧ್ಯೆದಲ್ಲಿ ಪರೀಕ್ಷೆ ಎದುರಿಸುವಂತೆ ಮಕ್ಕಳ ಮೇಲೆ ಒತ್ತಡ ಹೇರುವುದರಿಂದ ಹಿಡಿದು, ಮತ್ತೆ ಶಾಲೆ ಆರಂಭಿಸಲು ಯಾವುದೇ ಯೋಜನೆಯಿಲ್ಲದೆ, ಅಸಂಖ್ಯಾತ ಮಕ್ಕಳ ಭವಿಷ್ಯದಲ್ಲಿ ಇಂದು ಅಂಧಕಾರ ಮೂಡಿದೆ. ಅದರಲ್ಲೂ ಸರ್ಕಾರಿ ಶಾಲಾ ಮಕ್ಕಳ ಪರಿಸ್ಥಿತಿ ಹೀನಾವಾಗಿದ್ದು, ಬಡವರ ಮಕ್ಕಳಿಗೆ ಶಿಕ್ಷಣ ಒದಗಿಸಲು ಸರ್ಕಾರದ ಬಳಿ ಯಾವುದೇ ಯೋಜನೆ ಇಲ್ಲವಾಗಿದೆ ಎಂದು ಮಾಜಿ ಸಚಿವ ಯು ಟಿ ಖಾದರ್ ಆರೋಪಿಸಿದ್ದಾರೆ.
ಕೊರೋನಾ ಸಾಂಕ್ರಾಮಿಕದಿಂದಾಗಿ, ಇಡೀ ಶಿಕ್ಷಣ ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗಿದೆ. ಖಾಸಗಿ ಶಾಲೆಗಳು ಸೇರಿದಂತೆ ಉಳ್ಳವರ ಮಕ್ಕಳು ಆನ್ ಲೈನ್ ಶಿಕ್ಷಣ, ತಾಂತ್ರಿಕ ಜ್ಞಾನದ ಮೂಲಕ ಶಿಕ್ಷಣ ಪಡೆಯುವತ್ತ ಹೆಜ್ಜೆ ಹಾಕಿದ್ದಾರೆ. ಗ್ರಾಮೀಣ ಭಾಗದ, ಸಾಮಾಜಿಕವಾಗಿ/ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶಿಕ್ಷಣ ಒದಗಿಸಲು ಯಾವುದೇ ಯೋಜನೆಯನ್ನು ಈ ಸರ್ಕಾರ ಈವರೆಗೂ ರೂಪಿಸಿಲ್ಲಾ.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಬೇಜವಾಬ್ದಾರಿತನದಿಂದಾಗಿ, ಇಲ್ಲಿ ಕೇವಲ ಮಕ್ಕಳಷ್ಟೇ ಅಲ್ಲದೆ, ಶಾಲಾ ಶಿಕ್ಷಕರ, ಶಾಲಾಡಳಿತದ ವರ್ಗದ ಕಾರ್ಮಿಕರ ಹಾಗೂ ಪೋಷಕರ ಮೇಲೂ ಸಾಕಷ್ಟು ಒತ್ತಡಕ್ಕೆ ಒಳಗಾಗಿದ್ದಾರೆ. ಅಸಂಖ್ಯಾತ ಶಿಕ್ಷಕರು ಇಂದು ಕೆಸವಿಲ್ಲದೇ ಮೂರಾಬಟ್ಟೆಯಾಗಿದ್ದಾರೆ.
ಡಿಜಿಟಲ್ ಅಂತರ:
-ಸಾರ್ವಜನಿಕ ಸೂಚನಾ ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದ 80 ಲಕ್ಷ ವಿದ್ಯಾರ್ಥಿಗಳ ಪೈಕಿ ಶೇ. 62.5% ಮಕ್ಕಳಿಗೆ ಮಾತ್ರ ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್ ನ ಲಭ್ಯತೆ ಇದೆ. ಶೇ. 53.75% ರಷ್ಟು ಮಕ್ಕಳಿಗೆ ಮಾತ್ರ ಇಂಟರ್ ನೆಟ್ ಸಂಪರ್ಕ ಲಭ್ಯವಿದೆ. ಈ ಎಲ್ಲಾ ತಂತ್ರಜ್ಞಾನದ ಲಭ್ಯತೆ ಇಲ್ಲದ ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿಯುತ್ತಿದ್ದು, ಈಗಾಗಲೇ ಚಾಲ್ತಿಯಲ್ಲಿರುವ ಆನ್ ಲೈನ್ ಶಿಕ್ಷಣವನ್ನೂ ಪಡೆಯಲಾರದೇ ಅನಾನುಕೂಲಕ್ಕೆ ಒಳಗಾಗಿದ್ದಾರೆ.
-ಈ ಡಿಜಿಟಲ್ ಅಂತರ ದಿನೇದಿನೇ ಹೆಚ್ಚಾಗುತ್ತಲೇ ಇದ್ದು, ಸರ್ಕಾರ ಈವರೆಗೂ ಇದನ್ನು ತಗ್ಗಿಸಲು ಯಾವುದೇ ಪ್ರಯತ್ನಕ್ಕೆ ಮುಂದಾಗಿಲ್ಲ.
ಸರ್ಕಾರಿ ಶಾಲೆಗಳ ವೈಫಲ್ಯಕ್ಕೆ ಬಿಜೆಪಿ ಹೊಣೆ:
-ರಾಜ್ಯದಲ್ಲಿ 49,883 ಸರ್ಕಾರಿ ಶಾಲೆಗಳು, 7,377 ಅನುದಾನಿತ ಶಾಲೆಗಳು, 18,760 ಖಾಸಗಿ ಶಾಲೆಗಳು ಇವೆ.
– ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ವರದಿಯ ಅನ್ವಯ ರಾಜ್ಯದ ಪ್ರತಿ ನಾಲ್ಕು ಸರ್ಕಾರೀ ಶಾಲೆಗಳ ಪೈಕಿ ಮೂರು ಶಾಲೆಗಳಲ್ಲಿ ಕಂಪ್ಯೂಟರ್ ಸೌಕರ್ಯದ ಕೊರತೆಯಿದೆ.
– ಶೇ. 72.74% ಶಾಲೆಗಳಲ್ಲಿ ಕಂಪ್ಯೂಟರ್ ಗಳು ಕಾರ್ಯನಿರ್ವಹಿಸುವ ಸ್ಥಿಯಲ್ಲಿ ಇಲ್ಲ.
-ಶಾಲೆಗಳ ಚಿಕ್ಕ ಚಿಕ್ಕ ಕೊಠಡಿಗಳಲ್ಲಿ ಆರೋಗ್ಯ ಪರಿವೀಕ್ಷಣೆ ನಡೆಸುವುದು, ಮಕ್ಕಳ ನಡುವೆ ದೈಹಿಕ ಅಂತರ ಕಾಪಾಡಿಸುವುದು ಸವಾಲಿನ ವಿಚಾರ. ಜೊತೆಗೆ ಈಗಾಗಲೇ ನಷ್ಟದಲ್ಲಿರುವ ಅನೇಕ ಶಾಲೆಗಳನ್ನು ಪ್ರತಿನಿತ್ಯ ಸ್ಯಾನಿಟೈಸ್ ಮಾಡುವುದು ಅಸಾಧ್ಯದ ವಿಚಾರವೇ ಹೌದು.
-ಸರ್ಕಾರಿ ಶಾಲಾ ಮಕ್ಕಳು ಮಧ್ಯಾಹ್ನದ ಬಿಸಿಯೂಟ ವಂಚಿತರಾಗುತ್ತಿದ್ದು, ಅವರಲ್ಲಿ ಅಪೌಷ್ಟಿಕತೆ ಹೆಚ್ಚುತ್ತಿದೆ. ಹೀಗಿದ್ದರೂ ಸರ್ಕಾರ ಕೈ ಕಟ್ಟಿ ಕುಳಿತಿರುವುದೇಕೆ?
ಖಾಸಗಿ ಶಾಲೆಗಳಿಗೂ ಸಹಾಯ ಹಸ್ತ ಚಾಚಿಲ್ಲ:
– ಸರ್ಕಾರಿ ಶಾಲೆಗಳ ಮಾಲೀಕರು ಬಾಡಿಗೆ ಕಟ್ಟಲು, ಶಿಕ್ಷಕರಿಗೆ ಸಂಬಳ ನೀಡಲು ಹಣವಿಲ್ಲ ಎಂದು ಶಾಲೆಗಳನ್ನೇ ಮಾರಾಟಕ್ಕಿಟ್ಟಿದ್ದಾರೆ. ಪ್ರಿ-ನರ್ಸರಿ ಹಾಗೂ ಪ್ರೈಮರಿ ಶಾಲಾ ಮಕ್ಕಳಿಗೆ ಆನ್ ಲೈನ್ ಶಿಕ್ಷಣಕ್ಕೆ ನಿಷೇಧ ಹೇರಿರುವುದರಿಂದ ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸುತ್ತಿಲ್ಲ. ಇದು ಈ ಶಾಲೆಗಳನ್ನು ನಷ್ಟದ ಅಂಚಿಗೆ ದೂಡಿವೆ.
– ಬೆಂಗಳೂರಿನ 11 ಸಾವಿರ ಶಾಲಾ ಬಸ್ ಗಳು ಸೇರಿದಂತೆ ರಾಜ್ಯಾದ್ಯಂತ ಸುಮಾರು 15 ಶಾಲಾ ಬಸ್ ಗಳು ನಿಂತಲ್ಲೇ ನಿಂತಿದ್ದು, ಶಾಲಾ ಬಸ್ ಡ್ರೈವರ್ ಗಳ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿಯಾಗಿದೆ.
– ಅವೈಜ್ಞಾನಿಕ ಲಾಕ್ ಡೌನ್ ನಿಂದಾಗಿ ಶಾಲೆಗಳ ಮೇಲೆ ಪರೀಕ್ಷವಾಗಿ ಅವಲಂಬಿತ ಕೆಲಸಗಾರದ ಆಯಗಳು, ಪಿಯೋನ್ ಗಳು, ಡ್ರೈವರ್ ಗಳು, ಹೆಲ್ಪರ್ ಗಳು, ಕ್ಲೀನರ್ ಗಳಿಗೆ ಯಾವುದೇ ಉದ್ಯೋಗವಿಲ್ಲದೇ ಅತಂತ್ರ ಬದುಕು ನಡೆಸುತ್ತಿದ್ದಾರೆ.
ಇವರೆಲ್ಲರಿಗೆ ಸಹಾಯ ಮಾಡಲು ಬಿಜೆಪಿ ಸರ್ಕಾರದ ಬಳಿ ಯಾವ ಯೋಜನೆ ಇವೆ?
ಶಾಲೆ ಬಿಡುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಳ:
– ಸರ್ವ ಶಿಕ್ಷಣ ಅಭಿಯಾನದ ಮಾಹಿತಿ ಅನ್ವಯ ರಾಯದ ವಿಜಯಪುರ, ಬೀದರ್, ಕಲ್ಬುರ್ಗಿ, ಕೊಪ್ಪಳ, ಬಳ್ಳಾರಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಸುಮಾರು 13, 500 ಕ್ಕೂ ಹೆಚ್ಚು ಮಕ್ಕಳು ಶಾಲೆಗಳನ್ನು ತ್ಯಜಿಸಿದ್ದಾರೆ.
– ಈ ಪೈಕಿ ಹೆಣ್ಣು ಮಕ್ಕಳೇ ಹೆಚ್ಚಾಗಿದ್ದಾರೆ.
-2019ರಲ್ಲಿ 73,00ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೊದಲ ವರ್ಷದ ಪಿಯುಸಿ ನಂತ ವಿದ್ಯಾಭ್ಯಾಸ ತ್ಯಜಿಸಿದ್ದಾರೆ.
-ಸರ್ಕಾರದ ಬೇಜವಾಬ್ದಾರಿತನದಿಂದಾಗಿ ಖಖಿಇ ಸಹ ಕಾಗದದಲ್ಲೇ ಉಳಿಯುತ್ತಿದೆ.
-ಮಧ್ಯಾಹ್ನದ ಬಿಸಿಯೂಟ ಸರ್ಕಾರಿ ಶಾಲಾ ಮಕ್ಕಳನ್ನ ಶಾಲೆಯತ್ತ ಕರೆತರಲು ಪ್ರಮುಖ ಕೊಂಡಿಯಾಗಿತ್ತು, ಅದು ಪೋಷಕರ ಮೇಲಿನ ಹೊಣೆಯನ್ನು ಕಡಿಮೆ ಮಾಡುತ್ತಿತ್ತು. ಆದರೆ, ಶಾಲೆಗಳು ಮುಚ್ಚಿರುವ ಕಾರಣದಿಂದ ಅನೇಕ ಮಕ್ಕಳು ಇಂದು ಗ್ರಾಮೀಣ ಭಾಗದಲ್ಲಿ ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆ.
ಬಿಜೆಪಿ ಸರ್ಕಾರ ಈ ಮಕ್ಕಳ ಹೊಣೆ ಹೊರಲು ಸಿದ್ಧವಿದೆಯೇ?
ಶಿಕ್ಷಕರಿಗೆ ಶಿಕ್ಷೆ:
– ಕೊರೋನಾ ಸಾಮಕ್ರಾಮಿಕ ಪರಿಣಾಮದಿಂದಾಗಿ ರಾಜ್ಯಾದ್ಯಂತ 40,000ಕ್ಕೂ ಹೆಚ್ಚು ಖಾಸಗಿ ಶಾಲಾ ಶಿಕ್ಷಕರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
-ವಿದ್ಯಾರ್ಥಿಗಳು ತಮ್ಮ ಪೂರ್ಣ ಶುಲ್ಕವನ್ನು ಪಾವತಿಸಿದರೂ ಶಿಕ್ಷಕರ ವೇತನವನ್ನು 35 ರಿಂದ 50% ರಷ್ಟು ಕಡಿಮೆ ಮಾಡಲು ಖಾಸಗಿ ಶಾಲೆಗಳು ಮುಂದಾಗಿವೆ.
– ಸರ್ಕಾರವು “ವಿದ್ಯಾಗಮ ಯೋಜನೆ” ಅಡಿ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ತರಗತಿ ನಡೆಸುವಂತೆ ಶಿಕ್ಷಕರ ಮೇಲೆ ಒತ್ತಡ ಹೇರುವ ಮೂಲಕ ಅವರ ಜೀವನವನ್ನು ಅಪಾಯಕ್ಕೆ ಒಡ್ಡುತ್ತಿದೆ.
-ಖಾಸಗಿ ವಲಯದ 2,00,000ಕ್ಕೂ ಹೆಚ್ಚು ಶಿಕ್ಷಕರು ಕಳೆದ 4-5 ತಿಂಗಳಿನಿಂದ ಸಂಬಳವನ್ನು ಪಡೆಯಲಾಗದೇ, ಸರ್ಕಾರದಿಂದ ಆರ್ಥಿಕ ಪ್ಯಾಕೇಜ್ ಕೋರಿದ್ದಾರೆ.
ಈ ಶಿಕ್ಷರಿಕಾಗಿ ಈವರೆಗೂ ಬಿಜೆಪಿ ಮಾಡಿದ್ದಾದರೂ ಏನು?
ಪೋಷಕರ ಸಮಸ್ಯೆಗಳು:
– ಅನೇಕ ಪೋಷಕರು ಕೊರೋನಾ ಲಾಕ್ ಡೌನ್ ಪರಿಣಾಮವಾಗಿ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಕೆಲವರು ತಮ್ಮ ಉದ್ಯೋಗವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರೂ ಅತೀ ಕಡಿಮೆ ಸಂಬಳವನ್ನು ಪಡೆಯುತ್ತಿದ್ದಾರೆ. ಅವರಿಗೆಲ್ಲರಿಗೂ, ತಮ್ಮ ಮಕ್ಕಳ ವಿದ್ಯಾಭ್ಯಾಸದ ಶುಲ್ಕವನ್ನು ಪಾವತಿಸುವುದು ಕಷ್ಟಸಾದ್ಯವಾಗಿದೆ.
-ಉದ್ಯೋಗಸ್ಥ ಪೋಷಕರು ಆನ್ ಲೈನ್ ಶಿಕ್ಷಣ ವಿಚಾರವಾಗಿ ಮಕ್ಕಳಿಗೆ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ. ಅಲ್ಲದೇ, ದಿನಗೂಲಿ ಕಾರ್ಮಿಕರ ಪೋಷಕರಿಗಿಂತಲೂ ಇದು ಅಸಾಧ್ಯದ ಕೆಲಸ.
-ಗ್ರಾಮೀಣ ಭಾಗದ ಪೋಷಕರು ಹಾಗೂ ವಿದ್ಯೆ ಚಂಚಿತ ಪೋಷಕರಿಗೆ ತಾಂತ್ರಿಕ ಜ್ಞಾನದ ಕೊರೆತೆ ಇದೆ. ಮಕ್ಕಳು ಆನ್ ಲೈನ್ ಆಟಗಳು, ಚಾಟ್ ಮತ್ತು ಅಶ್ಲೀಲ ಚಿತ್ರಗಳಿಗೆ ವ್ಯಸನಿಯಾಗಬಹುದೆಂಬ ನಿರಂತರ ಭಯ ಪೋಷಕರಲ್ಲಿದೆ.
-ಅನೇಕ ವಲಸೆ ಕಾರ್ಮಿಕ ಪೋಷಕರು ತಮ್ಮ ಊರುಗಳಿಗೆ ಮರಳಿದ್ದು, ಅವರ ಮಕ್ಕಳು ಮುಂದಿನ ತರಗತಿಗಳಿಗೆ ಪ್ರವೇಶ ಪಡೆಯುವುದು ಕಷ್ಟಕರವಾಗಿದೆ.
ಈ ಪೋಷಕರು ಬಿಜೆಪಿಯಿಂದ ಏನನ್ನಾದರೂ ನಿರೀಕ್ಷಿಸಬಹುದೇ?
ಕರ್ನಾಟಕ ನೈಜ ಪರಿಸ್ಥಿಯನ್ನ ಅವಲೋಕಿಸಿದರೆ; ಶೇ..97% ಶಾಲೆಗಳಿಗೆ ಡಿಜಿಟಲ್ ಕಲಿಕೆಯ ಪರಿಹಾರಗಳು ಹಾಗೂ ಶಿಕ್ಷಕರಿಗೆ ತರಭೇತಿಯ ಅವಶ್ಯಕತೆಯಿದ್ದು, ಸರಿಸುಮಾರು ಶೇ. 89% ಶಾಲೆಗಳಿಗೆ ಆರ್ಥಿಕ ನೆರವಿನ ಅಗತ್ಯವಿದೆ. ಆದರೆ ಬಿಜೆಪಿ ಸರ್ಕಾರ ತನ್ನ ಬಾಯಿಗೆ ಬೀಗ ಹಾಕಿಕೊಂಡು ಕೂತಿದೆ.
ಹಳಿ ತಪ್ಪಿರುವ ಶಿಕ್ಷಣವನ್ನು ಮತ್ತೆ ಸರಿದಾರಿಗೆ ತರಲು ಸರ್ಕಾರಕ್ಕೆ ಕಾಂಗ್ರೆಸ್ ಪಕ್ಷದ ಹಕ್ಕೋತ್ತಾಯ:
1. ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಹಳ್ಳ ಹಿಡಿಸಿರುವ ಹಾಗೂ ಸಂಕಷ್ಟದಲ್ಲಿರುವ ಶಿಕ್ಷಕರಿಗೆ ಸಹಾಯ ಮಾಡಲು ಯಾವುದೇ ಯೋಜನೆ ರೂಪಿಸಲು ವಿಫಲವಾಗಿರುವ ಬೇಜವಾಬ್ದಾರಿ ರಾಜ್ಯ ಸರ್ಕಾರದ ವೈಫಲ್ಯವನ್ನು ನಾವು ಖಂಡಿಸುತ್ತೇವೆ.
2. ಮಧ್ಯಾಹ್ನದ ಬಿಸಿಯೂಟವನ್ನು ವಿದ್ಯಾರ್ಥಿಗಳ ಮನೆಗಳಿಗೆ ನೇರವಾಗಿ ತಲುಪಿಸುವ ವ್ಯವಸ್ಥೆ ಮಾಡುವುದರ ಮೂಲಕ, ಅವರ ಪೌಷ್ಟಿಕತೆಯನ್ನು ಕಾಪಾಡಬೇಕು.
3. ಶಾಲೆ ಬಿಟ್ಟ ಮಕ್ಕಳ ಬಗ್ಗೆ ಸಮೀಕ್ಷೆ ನಡೆಸಿ, ಪೋಷಕರ ಮನವೊಲಿಸಿ ಅವರನ್ನು ಮರಳಿ ಶಾಲೆಗೆ ಕರೆತರುವ ಯೋಜನೆ ರೂಪಿಸಬೇಕು.
4. ಶಿಕ್ಷಣ ಕ್ಷೇತ್ರದಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ಉದ್ಯೋಗದಲ್ಲಿರುವವರಿಗೆ ಆರ್ಥಿಕ ಪರಿಹಾರ ಪ್ಯಾಕೇಜ್ ಒದಗಿಸಬೇಕು.
5. ಕೊರೋನಾ ವಿರುದ್ಧ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ಶಿಕ್ಷಕರಿಗೆ ಪರಿಹಾರ ನಿಡಬೇಕು.
6. ಬಡ್ಡಿ ರಹಿತ ಸಾಲಗಳನ್ನು ನಿಡುವ ಮೂಲಕ ಶಾಲೆಗಳ ಆರ್ಥಿಕ ಸಾಮಥ್ರ್ಯವನ್ನು ವೃದ್ಧಿಸುವತ್ತ ಗಮನ ಹರಿಸಬೇಕು.
7. ಖಾಸಗಿ ಶಾಲೆಗಳಿಗೆ ತೆರಿಗೆಯಲ್ಲಿ ವಿನಾಯಿತಿ ನೀಡಬೇಕು. ಈ ಮೂಲಕ ಶಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಶಾಲಾ ಶುಲ್ಕ ಕಡಿಮೆ ಮಾಡುವ ಒತ್ತಡವನ್ನು ಸರ್ಕಾರ ಖಾಸಗಿ ಸಂಸ್ಥೆಗಳ ಮೇಲೆ ಹೇರಬೇಕು.
8. ಆದ್ಯತೆಯ ಮೇರೆಗೆ ತಂತ್ರಜ್ಞಾನ ಬಳಸಿಕೊಳ್ಳುವ ಅಂತರವನ್ನು ಕಡಿಮೆಗೊಳಿಸಬೇಕು.
9. ವಿದ್ಯಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆಗಾಗಿ ಮಾರ್ಗಸೂಚಿಗಳನ್ನು ಹೊರಡಿಸಬೇಕು.
10. ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಆದ್ಯತೆಯಾಗಿ ಪರಿಗಣಿಸಬೇಕು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಮಾಜಿ ಸದಸ್ಯ ಐವನ್ ಡಿಸೋಜಾ, ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಸದಾಶಿವ್ ಉಳ್ಳಾಲ್, ಎ.ಸಿ.ವಿನಯ ರಾಜ್, ಪ್ರವೀಣ್ ಚಂದ್ರ ಆಳ್ವ, ಸಂತೋಷ್ ಕುಮಾರ್ ಶಟ್ಟಿ, ನಝೀರ್ ಬಜಾಲ್, ಅನಿಲ್ ಕುಮಾರ್, ಕುಮಾರಿ ಅಪ್ಪಿ ಮತ್ತಿತರರು ಉಪಸ್ಥಿತರಿದ್ದರು.