Home Mangalorean News Kannada News ಶಿಕ್ಷ ಕರು ಹಾಗೂ ಪದವೀಧರರಿಗೆ ಕಾಂಗ್ರೆಸ್ ನೀಡಿದ ಯೋಜನೆ ಪರಿಷತ್ ಚುನಾವಣೆ ಗೆಲುವಿಗೆ ಸಹಕಾರಿ; ಐವಾನ್

ಶಿಕ್ಷ ಕರು ಹಾಗೂ ಪದವೀಧರರಿಗೆ ಕಾಂಗ್ರೆಸ್ ನೀಡಿದ ಯೋಜನೆ ಪರಿಷತ್ ಚುನಾವಣೆ ಗೆಲುವಿಗೆ ಸಹಕಾರಿ; ಐವಾನ್

Spread the love

ಶಿಕ್ಷ ಕರು ಹಾಗೂ ಪದವೀಧರರಿಗೆ ಕಾಂಗ್ರೆಸ್ ನೀಡಿದ ಯೋಜನೆ ಪರಿಷತ್ ಚುನಾವಣೆ ಗೆಲುವಿಗೆ ಸಹಕಾರಿ; ಐವಾನ್

ಉಡುಪಿ: ಶಿಕ್ಷ ಕರು ಹಾಗೂ ಪದವೀಧರರಿಗೆ ಕಾಂಗ್ರೆಸ್ ಕೊಡಮಾಡಿರುವ ಹತ್ತು ಹಲವು ಮಹತ್ತರ ಯೋಜನೆಗಳು ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣವಾಗಲಿದೆ ಎಂದು ವಿಧಾನಪರಿಷತ್ ಸದಸ್ಯ ಐವಾನ್ ಡಿ’ಸೋಜಾ ಹೇಳಿದರು.

ಅವರು ಶನಿವಾರ ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾರರನ್ನು ಹೊಂದಿರುವ ನೈರುತ್ಯ ಕ್ಷೇತ್ರದ ಶಿಕ್ಷ ಕರ ಹಾಗೂ ಪದವೀಧರರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಕೆ.ಕೆ. ಮಂಜುನಾಥ್ ಕುಮಾರ್ ಹಾಗೂ ಎಸ್.ಪಿ.ದಿನೇಶ್ ಭಾರೀ ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪದವೀಧರರ ಬದುಕಿಗೆ ಪೂರಕವಾದ ಮಹತ್ತರ ಯೋಜನೆ ರೂಪಿಸಿದೆ. ರಾಜ್ಯದಲ್ಲಿ 2.5ಲಕ್ಷ ಹುದ್ದೆಗಳನ್ನು ಭರ್ತಿ ಮಾಡಿದೆ. ಕಳೆದ ಅವಧಿಯಲ್ಲಿ 10 ಸಾವಿರಕ್ಕೂ ಹೆಚ್ಚು ಶಿಕ್ಷ ಕರನ್ನು ನೇಮಿಸಿದೆ. ಇದರ ಜತೆಗೆ ಶಿಕ್ಷ ಕರ ವೇತನ ತಾರತಮ್ಯ ಬಗೆಹರಿಸುವಲ್ಲಿ ಮಹತ್ತರ ಹೆಜ್ಜೆ ಇಟ್ಟಿರುವುದು ಸಹ ಪಕ್ಷ ಕ್ಕೆ ಲಾಭವಾಗಲಿದೆ ಎಂದರು.

ಅಧಿಕಾರಕ್ಕೆ ಬಂದ ಕೆಲವೇ ದಿನದಲ್ಲಿ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದಿದ್ದ ಪ್ರಧಾನಿ ಮೋದಿ ಅವರು ನಾಲ್ಕು ವರ್ಷ ಕಳೆದರೂ ಒಂದೂ ಹುದ್ದೆಯನ್ನು ಸೃಷ್ಟಿ ಮಾಡುವುದಕ್ಕೆ ಆಗಿಲ್ಲ. ಕೇಂದ್ರ ಸರಕಾರ ಉದ್ಯೋಗ ಸೃಷ್ಟಿಯಲ್ಲಿ ಸಂಪೂರ್ಣ ವಿಫಲವಾಗಿದೆ. ಹೇಳಿದಂತೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ಈಡೇಸಲಿಲ್ಲ. ಆದರೆ, ರಾಜ್ಯ ಸರಕಾರ ಕೌಶಲ್ಯ ನಿಗಮ ಸ್ಥಾಪಿಸುವ ಮೂಲಕ ಉದ್ಯೋಗಕ್ಕೆ ಪೂರಕ ಕ್ರಮ ಕೈಗೊಂಡಿದೆ ಎಂದರು.


Spread the love

Exit mobile version