ಶಿರಾಡಿ, ಚಾರ್ಮಾಡಿ ಘಾಟಿ ರಸ್ತೆಗಳಲ್ಲಿ ಗುಡ್ಡ ಕುಸಿತ, ವಾಹನಗಳು ತೆರಳದಂತೆ ಸೂಚನೆ

Spread the love

ಶಿರಾಡಿ, ಚಾರ್ಮಾಡಿ ಘಾಟಿ ರಸ್ತೆಗಳಲ್ಲಿ ಗುಡ್ಡ ಕುಸಿತ, ವಾಹನಗಳು ತೆರಳದಂತೆ ಸೂಚನೆ

ಮಂಗಳೂರು:  ಭಾರೀ ಮಳೆಯ ಕಾರಣದಿಂದ ಶಿರಾಡಿ ಘಾಟಿಯಲ್ಲಿ ಮತ್ತೆ ಗುಡ್ಡ ಕುಸಿತ ಸಂಭವಿಸಿದ್ದು ಈ ಭಾಗದಲ್ಲಿ ವಾಹನ ಸಂಚಾರವನ್ನು ತಡೆಹಿಡಿಯಲಾಗಿದೆ ಇಲ್ಲಿನ ಗುಂಡ್ಯ ಗಡಿ ದೇವಳದ ಮೇಲ್ಭಾಗದಲ್ಲಿ ಗುಡ್ಡ ಕುಸಿತವಾಗುತ್ತಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ಹಾಸನ ಜಿಲ್ಲಾಧಿಕಾರಿಯವರೊಂದಿಗೆ ದೂರವಾಣಿ ಮೂಲಕ ಶಿರಾಡಿ ಘಾಟಿ ರಸ್ತೆಯ ಸ್ಥಿತಿಗತಿಯ ಮಾಹಿತಿಯನ್ನು ಪಡೆದುಕೊಂಡ ದ.ಕ. ಜಿಲ್ಲಾಧಿಕಾರಿ ಸೆಂಥಿಲ್ ಅವರು ಶಿರಾಡಿ ಘಾಟಿ ರಸ್ತೆಯನ್ನು ಬಳಸದಿರುವಂತೆ ಈ ಭಾಗದ ಮೂಲಕ ಸಂಚರಿಸುವವರಿಗೆ ಮನವಿ ಮಾಡಿಕೊಂಡಿದ್ದಾರೆ. ಮುಖ್ಯವಾಗಿ ಮಂಗಳವಾರ ರಾತ್ರಿ ಸಮಯದಲ್ಲಿ ಶಿರಾಡಿ ಘಾಟಿ ಮೂಲಕ ವಾಹನಗಳ ಸಂಚಾರ ನಡೆಸದಂತೆ ಅವರು ಪ್ರಯಾಣಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿರಾಡಿ ಘಾಟ್ ಮತ್ತು ಚಾರ್ಮಡಿ ಘಾಟ್ ರಸ್ತೆಗಳಲ್ಲಿ ಗುಡ್ಡಕುಸಿತದಂತಹ ಅಪಾಯಕಾರಿ ಸನ್ನಿವೇಶಗಳು ಉಂಟಾಗಬಹುದಾದ್ದರಿಂದ ಈ ಮಾರ್ಗಗಳನ್ನು ವಾಹನ ಸಂಚಾರಕ್ಕೆ ಬಳಸುವುದು ಮಳೆ ಕಡಿಮೆಯಾಗುವವರಗೆ ಸುರಕ್ಷತೆಯ ದೃಷ್ಟಿಯಿಂದ ಸೂಕ್ತವಲ್ಲ ಎಂಬ ಸಲಹೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ ಕೂಡ ನೀಡಲಾಗಿದೆ

 


Spread the love