ಶಿರೂರು ಮೂಲ ಮಠದಲ್ಲಿ ಸ್ವಾಮೀಜಿಯ ವೃಂದಾವನ ನಿರ್ಮಾಣ!
ಉಡುಪಿ: ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ಸಾವಿನ ಒಂದು ವರುಷದ ಬಳಿಕ ಅವರ ಅಂತ್ಯಕ್ರಿಯೆ ನಡೆದ ಶೀರೂರು ಮೂಲಮಠದಲ್ಲಿ ಶನಿವಾರ ವೃಂದಾವನ ನಿರ್ಮಿಸಲಾಗಿದೆ.
ಉಡುಪಿಯ ಅಷ್ಟ ಮಠಗಳ ಪೈಕಿ ಒಂದಾದ ಶಿರೂರು ಮಠದ ಪೀಠಾಧೀಶರಾಗಿದ್ದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ದೈವಾಧೀನರಾಗಿ ಜುಲೈ 19ಕ್ಕೆ ಒಂದು ವರ್ಷವಾಗಿತ್ತು. ಶಿರೂರು ಶ್ರೀಗಳು ದೈವಾಧೀನರಾಗಿ ಒಂದು ವರ್ಷ ಪೂರ್ಣವಾಗುತ್ತಿದ್ದರೂ ಮಠಕ್ಕೆ ಒಬ್ಬರು ಉತ್ತರಾಧಿಕಾರಿಯ ನೇಮಕವಾಗಿಲ್ಲ, ಅವರಿಗೊಂದು ಬೃಂದಾವನ ನಿರ್ಮಾಣವಾಗಿಲ್ಲ ಎಂಬ ಸಂಗತಿಗಳು ಚರ್ಚೆಗೆ ಗ್ರಾಸವಾಗಿದ್ದವು.
ಸ್ವಾಮೀಜಿಯ ವೃಂದಾವನ ನಿರ್ಮಿಸದೇ ಇರದ ಕಾರಣ ಅಭಿಮಾನಿಗಳೇ ಸೇರಿಕೊಂಡು ಉಪ್ಪೂರಿನ ಸ್ಪಂದನ ವಿಶೇಷ ಮಕ್ಕಳ ಶಾಲೆಯಲ್ಲಿ ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿಯ ನೇತೃತ್ವದಲ್ಲಿ ಶಿರೂರು ಸ್ವಾಮೀಜಿಯ ಸಂಸ್ಮರಣೆ ಕಾರ್ಯಕ್ರಮ ನಡೆಸಿದ್ದರು .