ಶಿರ್ವ ಕಳತ್ತೂರಿನಲ್ಲಿ ಅಕ್ರಮ ಕಸಾಯಿ ಖಾನೆಗೆ ದಾಳಿ – ಮೂವರ ಬಂಧನ

Spread the love

ಶಿರ್ವ ಕಳತ್ತೂರಿನಲ್ಲಿ ಅಕ್ರಮ ಕಸಾಯಿ ಖಾನೆಗೆ ದಾಳಿ – ಮೂವರ ಬಂಧನ

ಉಡುಪಿ: ಲಾಕ್ ಡೌನ್ ಸಂಕಟದಲ್ಲೂ ಕರಾವಳಿ ಭಾಗದಲ್ಲಿ ಅಕ್ರಮ ಗೋಮಾಂಸ ವಹಿವಾಟು ಅವ್ಯಾಹತವಾಗಿ ನಡೆಯುತ್ತಿದೆ.

ಉಡುಪಿ ಜಿಲ್ಲೆಯ ಶಿರ್ವ ಠಾಣಾ ವ್ಯಾಪ್ತಿಯ ಕಳತ್ತೂರಿನ ಪಾಳುಬಿದ್ದ ಮನೆಯಲ್ಲಿ ದನವನ್ನು ಕಡಿದು ಮಾಂಸವನ್ನು ಪ್ಯಾಕಿಂಗ್ ಮಾಡಿ ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಶಿರ್ವ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ಶುಕ್ರವಾರ ಬಂಧಿಸಿದ್ದಾರೆ. ಉಳಿದ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ.

ಬಂಧಿತರನ್ನು ಬದ್ರುದ್ದೀನ್, ಶೇಕ್ ಅಬ್ದುಲ್ಲ, ಲವ ಶೆಟ್ಟಿ ಎಂದು ಗುರುತಿಸಲಾಗಿದೆ.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆ ಮೇರೆಗೆ ಶಿರ್ವ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ಈ ಕಾರ್ಯಾಚರಣೆ ಮಾಡಿದ್ದಾರೆ ದನ ಕಡಿಯಲು ಉಪಯೋಗಿಸುತ್ತಿದ್ದ ಆಯುಧಗಳು, ತಕ್ಕಡಿ ಮಾಂಸದ ಪ್ಯಾಕೆಟ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಟುಕರ ಕೈಯಿಂದ ಒಂದು ದನವನ್ನು ರಕ್ಷಿಸಲಾಗಿದೆ. ಶಿರ್ವ ಠಾಣಾಧಿಕಾರಿ ದನಕ್ಕೆ ನೀರು ಕುಡಿಸಿ ಅದನ್ನು ಗೋಶಾಲೆಗೆ ಬಿಡುವ ವ್ಯವಸ್ಥೆ ಮಾಡಿದ್ದಾರೆ.

ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love