ಶಿರ್ವ ಚರ್ಚಿನ ಕೆಥೊಲಿಕ್ ಸಭಾ, ಸ್ತ್ರೀ ಸಂಘಟನೆ ವತಿಯಿಂದ ಕೊರೋನಾ ವಾರಿಯರ್ಸ್ ಗಳಿಗೆ ಸನ್ಮಾನ
ಉಡುಪಿ: ಲಾಕ್ ಡೌನ್ ಸಂದರ್ಭದಲ್ಲಿ ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಶ್ರಮಿಸಿದ ಸ್ಥಳೀಯ ಆಶಾ ಕಾರ್ಯಕರ್ತೆಯರು ಸಮುದಾಯ ಆರೋಗ್ಯ ಕೇಂದ್ರದ ದಾದಿಯರು ಹಾಗೂ ಪಂಚಾಯತ್ ಪೌರ ಕಾರ್ಮಿಕರನ್ನು ಗುರುತಿಸಿ ಶಿರ್ವ ಆರೋಗ್ಯ ಮಾತೆಯ ಇಗರ್ಜಿಯ ಕೆಥೊಲಿಕ್ ಸಭಾ ಮತ್ತು ಸ್ತ್ರೀ ಸಂಘಟನೆಯ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಚರ್ಚಿನ ಪ್ರಧಾನ ಧರ್ಮಗುರು ವಂ ಡೆನಿಸ್ ಡೆಸಾ, ಸಹಾಯಕ ಧರ್ಮಗುರುಗಳಾದ ವಂ. ಅಶ್ವಿನ್ ಆರಾನ್ಹಾ, ರೋಹನ್ ಡಾಯಸ್, ವಿಶೇಷ ಆಹ್ವಾನಿತರಾಗಿ ಶಿರ್ವ ಆರಕ್ಷಕ ಠಾಣೆಯ ಉಪನಿರೀಕ್ಷಕರಾದ ಶ್ರೀಶೈಲ ದುಂಡಪ್ಪ, ಶಿರ್ವ ಗ್ರಾಮ ಪಂಚಾಯತ್ ಗ್ರಾಮ ಕರಣಿಕರಾದ ವಿಜಯ್, ಜಿಲ್ಲಾ ಪಂಚಾಯತ್ ಸದಸ್ಯರಾದ ವಿಲ್ಸನ್ ರೊಡ್ರಿಗಸ್, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸಂತೋಷ್ ಕುಮಾರ್ ಬೈಲೂರು, ಚರ್ಚಿನ ಆರ್ಥಿಕ ಸಮಿತಿಯ ಕಾರ್ಯದರ್ಶಿ ಲೀನಾ ಮಚಾದೊ, ಕೆಥೊಲಿಕ್ ಸಭಾ ಶಿರ್ವ ಘಟಕದ ಅಧ್ಯಕ್ಷರಾದ ಜೆರಾಲ್ಡ್ ರೊಡ್ರಿಗಸ್, ಸ್ತ್ರೀ ಸಂಘಟನೆಯ ಅಧ್ಯಕ್ಷರಾದ ಆಗ್ನೆಸ್ ಬಾರ್ಬೋಜಾ ಉಪಸ್ಥಿತರಿದ್ದರು.
ಇದೇ ವೇಳೆ ಸಮುದಾಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಂತೋಷ್ ಕುಮಾರ್, ಬೈಲೂರು, ಶಿರ್ವ ಠಾಣಾಧಿಕಾರಿ ಶ್ರೀ ಶೈಲ ದುಂಡಪ್ಪ, ಹಾಗೂ ಗ್ರಾಮ ಪಂಚಾಯತ್ ಕರಣಿಕರಾದ ವಿಜಯ್ ಅವರನ್ನು ಶಾಲು ಹೊದಿಸಿ ಫಲಪುಷ್ಪಗಳನ್ನು ನೀಡಿ ಅವರ ವಿಶೇಷ ಮುಂದಾಳತ್ವಕ್ಕೆ ಸನ್ಮಾನಿಸಲಾಯಿತು.
ಕೆಥೊಲಿಕ್ ಸಭಾ ಅಧ್ಯಕ್ಷ ಜೆರಾಲ್ಡ್ ರೊಡ್ರಿಗಸ್ ಸ್ವಾಗತಿಸಿ, ಮೆಲ್ವಿನ್ ಆರಾನ್ಹಾ ವಂದಿಸಿದರು. ಗಿಲ್ಬರ್ಟ್ ಪಿಂಟೊ ಕಾರ್ಯಕ್ರಮ ನಿರೂಪಿಸಿದರು