ಶಿರ್ವ ಮಹಿಳಾ ಮಂಡಲ – ರಾಷ್ಟ್ರೀಯ ಯುವ ದಿನಾಚರಣೆ

Spread the love

ಶಿರ್ವ ಮಹಿಳಾ ಮಂಡಲ – ರಾಷ್ಟ್ರೀಯ ಯುವ ದಿನಾಚರಣೆ

ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ,ನೆಹರೂ ಯುವ ಕೇಂದ್ರ ಉಡುಪಿ ಮತ್ತು ಶಿರ್ವ ಮಹಿಳಾ ಮಂಡಲ (ರಿ) ಶಿರ್ವ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಯುವ ದಿನ ಮತ್ತು ಸ್ವಾಮಿ ವಿವೇಕಾನಂದರ ಜಯಂತಿಯನ್ನು  ಆಚರಿಸಲಾಯಿತು.

ಮಹಿಳಾ ಮಂಡಲದ ಅಧ್ಯಕ್ಷೆ ಡಾ.ಸ್ಪೂರ್ತಿ .ಪಿ.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಶ್ರೀಮತಿ ಸುಪ್ರೀತಾ ಶೆಟ್ಟಿ ಅವರು ವಿವೇಕಾನಂದರ ಬದುಕು ಕೇವಲ ಯುವಕರಿಗೆ ಮಾತ್ರವಲ್ಲ, ನಮಗೆಲ್ಲರಿಗೂ ಮಾದರಿ.ಅವರು ಬದುಕಿದ್ದು ಕೇವಲ 39ವರ್ಷಗಳಷ್ಟೇ ಆಗಿದ್ದರೂ ಅವರ ಸಾಧನೆಗಳು ಅಗಣಿತ.ಕೇವಲ 30ವರ್ಷದವರಾಗಿದ್ದಾಗ ಅಮೇರಿಕಾದ ಚಿಕಾಗೋ ನಗರದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ್ದ ಆ ಮಹತ್ವದ ಭಾಷಣ ಇಂದಿಗೂ ಭಾರತೀಯರಾದ ನಮ್ಮನ್ನು ಹೆಮ್ಮೆಯಿಂದ ಬೀಗುವಂತೆ ಮಾಡಿದೆ.161ವರ್ಷಗಳ ನಂತರವೂ ವಿವೇಕಾನಂದರು ಭಾರತೀಯರ ಹೃದಯಗಳಲ್ಲಿ ಅಜೇಯರಾಗಿ ನಿಂತಿದ್ದಾರೆ ಎಂದರೆ ಅದು ವಿವೇಕಾನಂದರ ಶಕ್ತಿ ಎಂದು ಹೇಳಿದರು.

ಮಹಿಳಾ ಮಂಡಲದ‌ ಗೌರವಾಧ್ಯಕ್ಷೆ ಶ್ರೀಮತಿ ಬಬಿತಾ ಜಗದೀಶ್ ಅರಸ ಅವರು ಅತಿಥಿಗಳನ್ನು ಸಭೆಗೆ ಪರಿಚಯಿಸಿದರು.ಶ್ರೀಮತಿ ವಿನಯಾ ಕುಂದರ್ ಅವರು ಸರ್ವರನ್ನೂ ಸ್ವಾಗತಿಸಿದರು.ಶ್ರೀಮತಿ ವಸಂತಿ ಗೋಪಾಲ್ ಅವರು ಪ್ರಾರ್ಥನೆ ಗೈದರು. ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ಗೀತಾ ವಾಗ್ಳೆ ಅವರು ಕಾರ್ಯಕ್ರಮ ನಿರೂಪಿಸಿದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಶ್ರೀಮತಿ ಗೀತಾ ಮೂಲ್ಯ,ಜೊತೆ ಕಾರ್ಯದರ್ಶಿ ಶ್ರೀಮತಿ ಗೌರಿ ಶೆಣೈ, ಖಜಾಂಚಿ ಶ್ರೀಮತಿ ದೀಪಾ ಶೆಟ್ಟಿ , ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕೊನೆಯಲ್ಲಿ ಶ್ರೀಮತಿ ಸುನೀತಾ ಕಳತ್ತೂರು ಅವರು ಧನ್ಯವಾದವಿತ್ತರು


Spread the love