Home Mangalorean News Kannada News ಶಿರ್ವ ಮಹಿಳಾ ಮಂಡಲ ವತಿಯಿಂದ ಆಟಿ ವೈವಿಧ್ಯ ಕಾರ್ಯಕ್ರಮ

ಶಿರ್ವ ಮಹಿಳಾ ಮಂಡಲ ವತಿಯಿಂದ ಆಟಿ ವೈವಿಧ್ಯ ಕಾರ್ಯಕ್ರಮ

Spread the love

ಶಿರ್ವ ಮಹಿಳಾ ಮಂಡಲ ವತಿಯಿಂದ ಆಟಿ ವೈವಿಧ್ಯ ಕಾರ್ಯಕ್ರಮ

ಶಿರ್ವ ಮಹಿಳಾ ಮಂಡಲ(ರಿ) ಶಿರ್ವ ಇದರ ವತಿಯಿಂದ ಆಟಿ ವೈವಿಧ್ಯ ಕಾರ್ಯಕ್ರಮವು ಇಂದು ಮಹಿಳಾ ಸೌಧದಲ್ಲಿ ನಡೆಯಿತು.

ಹಲವು ಕಾರ್ಯಕ್ರಮಗಳನ್ನು ಒಳಗೊಂಡ ಈ ಕಾರ್ಯಕ್ರಮವನ್ನು ಊರಿನ ವಿವಿಧ ಧರ್ಮಗಳ ಆರು ಜನ ಹಿರಿಯ ಮಹಿಳೆಯರು ಒಗ್ಗೂಡಿ ಜ್ಯೋತಿ ಬೆಳಗುವುದರ ಮೂಲಕ ಅರ್ಥಪೂರ್ಣವಾಗಿ ಉದ್ಘಾಟಿಸಿದರು.

ಇದಕ್ಕೂ ಮುನ್ನ ಮುಖ್ಯ ಅತಿಥಿಗಳನ್ನು ಆಟಿ ತಿಂಗಳ ವಿಶೇಷ ಆಚರಣೆಗಳಾದ ಆಟಿ ಕಳೆಂಜ,ಪಾಡ್ದನಗಳ ಮೂಲಕ ಸಭಾಂಗಣದಿಂದ ವೇದಿಕೆಗೆ ಕರೆತರಲಾಯಿತು. ಮಹಿಳಾ ಮಂಡಲದ ಗೌರವಾಧ್ಯಕ್ಷೆ ಬಬಿತಾ ಜಗದೀಶ್ ಅರಸ ಅವರು ಸರ್ವರನ್ನೂ ಸ್ವಾಗತಿಸಿದರು. ಅಧ್ಯಕ್ಷೆ ಡಾ.ಸ್ಪೂರ್ತಿ.ಪಿ.ಶೆಟ್ಟಿ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಮೂಡಬಿದರೆಯ ಆಳ್ವಾಸ್ ಮೆಡಿಕಲ್ ಕಾಲೇಜ್ ನ ಪ್ರಾಧ್ಯಾಪಕಿ ಡಾ.ಗೀತಾ ಮಾರ್ಕಾಂಡೇಯ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಆಟಿ ತಿಂಗಳಲ್ಲಿ ನಮ್ಮ ಹಿರಿಯರು ಸೇವಿಸುತ್ತಿದ್ದ ಪ್ರತೀಯೊಂದು ತಿನಿಸುಗಳಲ್ಲೂ ಆಯುರ್ವೇದದ ಗುಣಗಳಿದ್ದು ಉತ್ತಮ ಆರೋಗ್ಯಕ್ಕೆ ಪೂರಕವಾದ ಅಂಶಗಳನ್ನು ಒಳಗೊಂಡಿದ್ದವು .ಅಲ್ಲದೇ ಅವರು ಕೆಲವು ಆಚರಣೆಗಳಿಗೆ ಕೆಲವು ವೈಜ್ಞಾನಿಕ ಹಿನ್ನೆಲೆಗಳಿದ್ದವು ಎಂದು ಹೇಳಿದರು.

ಗುರು ಪೂರ್ಣಿಮಾ ಹಿನ್ನೆಲೆಯಲ್ಲಿ ಶಿರ್ವದ ಹಿರಿಯ ಶಿಕ್ಷಕಿ ಲಿಲ್ಲಿ ನಜರತ್ ಅವರನ್ನು ಇದೇ ವೇದಿಕೆಯಲ್ಲಿ ಗೌರವಿಸಲಾಯಿತು.

ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿರುವ ಮಹಿಳಾ ಮಂಡಲದ ಸದಸ್ಯರ ಮಕ್ಕಳನ್ನು ಗುರುತಿಸಿ ಅಭಿನಂದಿಸಲಾಯಿತು.ಮಹಿಳಾ ಮಂಡಲದ ವತಿಯಿಂದ ನಡೆದ ಚಿಣ್ಣರು—2024 ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ್ದ ಎಲ್ಲಾ ಮಕ್ಕಳಿಗೂ ಈ ಸಂದರ್ಭದಲ್ಲಿ ಅತಿಥಿಗಳು ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಮಹಿಳಾ ಮಂಡಲದ ಕಾರ್ಯದರ್ಶಿ ಐರಿನ್ ಪಿಂಟೋ ಅವರು ವರದಿಯನ್ನು ಮಂಡಿಸಿದರು. ಜಯಶ್ರೀ ಶೆಟ್ಟಿ ಮಟ್ಟಾರು ಮತ್ತು ಪುಷ್ಪಾ ಆಚಾರ್ಯ ಅವರು ಪ್ರಾರ್ಥಿಸಿ, ವಸಂತಿ ಗೋಪಾಲ್ ಅವರು ವಂದಿಸಿದರು. ಜಯಶ್ರೀ ಜಯಪಾಲ್ ಶೆಟ್ಟಿ ಹಾಗೂ ದೀಪಾ ಶೆಟ್ಟಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

ವೇದಿಕೆಯಲ್ಲಿ ಶಿರ್ವ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ವಿಟ್ಠಲ್ ಆಂಚನ್,ಮಹಿಳಾ ಮಂಡಲದ ಗೌರವ ಸಲಹೆಗಾರರಾದ ಗೀತಾ ವಾಗ್ಳೆ, ಉಪಾಧ್ಯಕ್ಷರಾದ ಗೀತಾ ಮೂಲ್ಯ, ಜೊತೆ ಕಾರ್ಯದರ್ಶಿ ಗೌರಿ ಶೆಣೈ , ಉಪಸಮಿತಿಯ ಸದಸ್ಯರಾದ ವಿನಯಾ ಕುಂದರ್, ಜ್ಯೋತಿ ಸುಧೀರ್ ಶೆಟ್ಟಿ, ಸುನೀತಾ ಪೂಜಾರಿ, ಶ್ವೇತಾ ಗಿರೀಶ್ ಮುಂತಾದವರು ಉಪಸ್ಥಿತರಿದ್ದರು.

ಮಹಿಳಾ ಮಂಡಲದ ಸದಸ್ಯರು ಆಟಿ ಕಳೆಂಜ ನೃತ್ಯವನ್ನು ಈ ಸಂದರ್ಭದಲ್ಲಿ ಬಹು ಸುಂದರವಾಗಿ ಪ್ರಸ್ತುತ ಪಡಿಸಿದರು ಕಾರ್ಯಕ್ರಮದ ಬಳಿಕ ಆಟಿಯ ವಿಶೇಷ ಖಾದ್ಯಗಳನ್ನು ಸರ್ವರಿಗೂ ಉಣಬಡಿಸಲಾಯಿತು.


Spread the love

Exit mobile version