ಶಿಲುಬೆ ಹಾನಿ ಪ್ರದೇಶಕ್ಕೆ ಕಥೊಲಿಕ್ ಸಭಾ ಉಡುಪಿ, ಮಂಗಳೂರು ಪ್ರದೇಶ ಪದಾಧಿಕಾರಿಗಳ ಭೇಟಿ
ಉಡುಪಿ: ಕಟ್ಟಿಂಗೇರಿ ಸಮೀಪದ ಕುದ್ರು ಮಲೆ ಎಂಬಲ್ಲಿನ ಖಾಸಗಿ ಸ್ಥಳದಲ್ಲಿ ನಿರ್ಮಾಣಗೊಂಡ ಶಿಲುಬೆಯನ್ನು ದುಷ್ಕರ್ಮಿಗಳು ಹಾನಿಗೊಳಿಸಿದ ಪ್ರದೇಶಕ್ಕೆ ಸೋಮವಾರ ಕಥೊಲಿಕ್ ಸಭಾ ಉಡುಪಿ ಹಾಗೂ ಮಂಗಳೂರು ಪ್ರದೇಶದ ಪದಾಧಿಕಾರಿಗಳ ಜಂಟಿ ನಿಯೋಗವು ಭೇಟಿ ನೀಡಿ ಪರಿಶೀಲನೆ ನಡೆಸಿತು.
ಈ ವೇಳೆ ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ.) ಇದರ ವತಿಯಿಂದ ಕೇಂದ್ರೀಯ ಅಧ್ಯಕ್ಷ ಸಂತೋಷ್ ಕರ್ನೆಲಿಯೋ, ಮಾಜಿ, ಅಧ್ಯಕ್ಷ ರೋಬರ್ಟ್ ಮಿನೇಜಸ್, ಕೇಂದ್ರೀಯ ಆಂತರಿಕ ಲೆಕ್ಕ ಪರಿಶೋಧಕ ಶಾಂತಿ ಪಿರೇರಾ, ಉಡುಪಿ ವಲಯ ಅಧ್ಯಕ್ಷ ಲೆಸಲ್ಲಿ ಕರ್ನೆಲಿಯೊ, ಮೂಡುಬೆಳ್ಳೆ ಘಟಕ ಅಧ್ಯಕ್ಷೆ ಆನ್ಸಿಲ್ಲಾ ಡಿಸೋಜ, ಉಡುಪಿ ಘಟಕ ಕಾರ್ಯದರ್ಶಿ ಲೊಯ್ಸಿಟ ಕರ್ನೆಲಿಯೋ, ಸದಸ್ಯೆ ರೀಟಾ ಡಿಸೋಜ, ಸ್ಥಳೀಯ ವಾಳೆ ಗುರಿಕಾರ ಫ್ರಾನ್ಸಿಸ್ ಲೋಬೊ, ವಾರ್ಡಿನ ಸದಸ್ಯ ರೋಬರ್ಟ್ ಡಿಸೋಜ ಹಾಗೂ ಕಥೋಲಿಕ್ ಸಭಾ ಮಂಗ್ಯುರ್ ಪ್ರದೇಶ್ (ರಿ.) ಇದರ ವತಿಯಿಂದ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್, ನಿಕಟ ಪೂರ್ವ ಅಧ್ಯಕ್ಷ ಸ್ಕ್ಯಾನಿ ಲೋಬೊ ಬಂಟ್ವಾಳ, ಮಾಜಿ ಅಧ್ಯಕ್ಷ ಪಾವ್ ರೋಲ್ಸಿ ಡಿಕೋಸ್ತ ಮತ್ತು ವಲಯ ಅಧ್ಯಕ್ಷರಾದ ಸಂತೋಷ್ ಡಿಸೋ ಹಾಗೂ ಲೋರೆನ್ಸ್ ಡಿಸೋಜ ಸುರತ್ಕಲ್ ಉಪಸ್ಥಿತರಿದ್ದರು.