Home Mangalorean News Kannada News ಶಿವಮೊಗ್ಗ: ಮನೆಯಲ್ಲಿ ಸಾಕಿದ್ದ ಬೆಕ್ಕು ಕಚ್ಚಿ ಗಾಯಗೊಂಡಿದ್ದ ಮಹಿಳೆ ಮೃತ್ಯು!

ಶಿವಮೊಗ್ಗ: ಮನೆಯಲ್ಲಿ ಸಾಕಿದ್ದ ಬೆಕ್ಕು ಕಚ್ಚಿ ಗಾಯಗೊಂಡಿದ್ದ ಮಹಿಳೆ ಮೃತ್ಯು!

Spread the love

ಶಿವಮೊಗ್ಗ: ಮನೆಯಲ್ಲಿ ಸಾಕಿದ್ದ ಬೆಕ್ಕು ಕಚ್ಚಿ ಗಾಯಗೊಂಡಿದ್ದ ಮಹಿಳೆ ಮೃತ್ಯು!

ಶಿವಮೊಗ್ಗ: ಸಾಕು ಬೆಕ್ಕು ಕಚ್ಚಿ ಗಾಯಗೊಂಡಿದ್ದ ಮಹಿಳೆ ಮೃತ ಪಟ್ಟ ಘಟನೆ ಶಿಕಾರಿಪುರ ತಾಲೂಕಿನ ತರಳಘಟ್ಟದಲ್ಲಿ ನಡೆದಿದೆ.

50 ವರ್ಷದ ಗಂಗೀಬಾಯಿ (50) ಎಂಬ ಮಹಿಳೆಗೆ ಎರಡು ತಿಂಗಳ ಹಿಂದೆ ಸಾಕಿದ್ದ ಬೆಕ್ಕು ಕಚ್ಚಿದ್ದು, ಈಗ ಅದೇ ಸಾವಿಗೆ ಕಾರಣವಾಗಿದೆ. ಮೊದಲು ತರಳಘಟ್ಟದ ಕ್ಯಾಂಪ್ ನಲ್ಲಿ ಯುವನೋರ್ವನ ಮೇಲೆ ದಾಳಿ ಮಾಡಿದ ಬೆಕ್ಕು ಮಹಿಳೆಗೂ ಕಚ್ಚಿತ್ತು.

ಮಹಿಳೆ ಕಾಲಿಗೆ ರೇಬಿಸ್ ಕಾಯಿಲೆ ಇದ್ದ ಬೆಕ್ಕು ಕಚ್ಚಿದ ಕಾರಣ ಐದು ಇಂಜೆಂಕ್ಷನ್ ತೆಗೆದುಕೊಳ್ಳಬೇಕಿತ್ತು, ಆದರೆ ಒಂದು ಇಂಜೆಕ್ಷನ್ ಪಡೆದ ನಂತರ ಹುಷಾರಾದ ಕಾರಣ ಚೇತರಿಸಿಕೊಂಡ ಗದ್ದೆಯ ನಾಟಿ ಕೆಲಸಕ್ಕೆ ತೆರಳಿದ್ದರು, ಆ ಬಳಿಕ ಗಾಯ ಹೆಚ್ಚಾಗಿತ್ತು. ಬೆಕ್ಕು ನಾಯಿಯೊಂದರ ಮೇಲೂ ದಾಳಿ ನಡೆಸಿ ಕಚ್ಚಿದ್ದು ಆ ನಾಯಿ ಈಗಾಗಲೇ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.

ಕೇವಲ ನಾಯಿ ಮಾತ್ರವಲ್ಲದೆ ಬೆಕ್ಕು ಕಚ್ಚಿದರೂ ರೇಬಿಸ್ ಬರುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದು, ಇನ್ಯಾರಿಗಾದರೂ ಕಚ್ಚಿದ್ದಲ್ಲಿ ನಿಗಾ ವಹಿಸಲು ಸೂಚಿಸಿದ್ದಾರೆ.


Spread the love

Exit mobile version