ಶಿವಸೇನೆ ಭಾರತವನ್ನು ರಾಮ ರಾಜ್ಯವಾಗಿ ಉಳಿಸುವ ನಿಟ್ಟಿನಲ್ಲಿ ಹೋರಾಡಲಿ : ಅನ್ಸಾರ್ ಅಹಮದ್
ಶ್ರೀಲಂಕಾದಲ್ಲಿ ಬುರ್ಖಾ ನಿಷೇಧ ವಾಗಿರುವುದರಿಂದ ಭಾರತದಲ್ಲಿಯೂ ಬುರ್ಖಾವನ್ನು ನಿಷೇಧಿಸಬೇಕು ಎಂಬ ಶಿವಸೇನೆಯ ಹೇಳಿಕೆಯು ಅತ್ಯಂತ ಬಾಲಿಶ ಹಾಗೂ ಅವಿವೇಕಿಕನದಿಂದ ಕೂಡಿರುವುದಾಗಿದೆ ಎಂದು ಸಾಮಾಜಿಕ ಹೋರಾಟಗಾರರಾದ ಅನ್ಸಾರ್ ಅಹಮದ್ ರವರು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ
ಶ್ರೀಲಂಕಾ ಸರ್ಕಾರ ಬುರ್ಖಾವನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಶಿವಸೇನೆ ಮುಖ್ಯಸ್ಥರು ರಾವಣನ ರಾಜ್ಯದಲ್ಲಿ ಬುರ್ಖಾ ನಿಷೇಧ ವಾಗುವುದಾದರೆ ರಾಮರಾಜ್ಯ ವಾದ ಭಾರತದಲ್ಲಿ ಏಕೆ ಸಾಧ್ಯವಿಲ್ಲ ಎಂಬ ಹೇಳಿಕೆಯನ್ನು ನೀಡುವುದರೊಂದಿಗೆ ಭಾರತ ಸರಕಾರ ಬುರ್ಖಾವನ್ನು ನಿಷೇಧಿಸುವ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂಬ ಆಗ್ರಹವನ್ನು ಮಾಡಿರುತ್ತಾರೆ
ಶ್ರೀಲಂಕದಲ್ಲಿ ಪುರಾತನ ಕಾಲದಿಂದಲೂ ರಾಕ್ಷಸಿ ಪ್ರವೃತ್ತಿ ಕಾರ್ಯಗಳು ನಡೆಯುತ್ತಾ ಬಂದಿರುತ್ತದೆ. ಪುರಾತನ ಕಾಲದಲ್ಲಿ ರಾವಣ ಸೀತೆಯನ್ನು ಅಪಹರಿಸಿದ್ದನು. ಹಾಗಂತ ಭಾರತೀಯರಾದ ನಾವು ಬೇರೆಯವರ ಹೆಣ್ಣು ಮಕ್ಕಳನ್ನು ಅಪಹರಿಸಲು ಆಗುತ್ತದೆಯೇ. ಭಾರತೀಯ ಸಂಸ್ಕೃತಿ ನಮಗೆ ಇದರ ಅನುಮತಿಯನ್ನು ನೀಡುತ್ತದೆಯೇ.
ಶಿವಸೇನೆ ಭಾರತವನ್ನು ರಾಮರಾಜ್ಯ ಎಂದು ಒಪ್ಪಿಕೊಳ್ಳುವುದಾದರೆ ಭಾರತ ರಾಮರಾಜ್ಯ ವಾಗಿಯೇ ಉಳಿದುಕೊಳ್ಳುವ ನಿಟ್ಟಿನಲ್ಲಿ ಶ್ರಮಿಸಲಿ ಎಂದು ಸಾಮಾಜಿಕ ಹೋರಾಟಗಾರರಾದ ಅನ್ಸಾರ್ ಅಹಮದ್ ರವರು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ.