Home Mangalorean News Kannada News ಶಿವಾಜಿಯಿಂದ ಹಿಂದೂ ಧರ್ಮ ರಕ್ಷಣೆ : ಲಾಲಾಜಿ ಆರ್. ಮೆಂಡನ್

ಶಿವಾಜಿಯಿಂದ ಹಿಂದೂ ಧರ್ಮ ರಕ್ಷಣೆ : ಲಾಲಾಜಿ ಆರ್. ಮೆಂಡನ್

Spread the love

ಶಿವಾಜಿಯಿಂದ ಹಿಂದೂ ಧರ್ಮ ರಕ್ಷಣೆ : ಲಾಲಾಜಿ ಆರ್. ಮೆಂಡನ್

ಉಡುಪಿ: ಮೊಘಲರ ದಾಳಿಯಿಂದ ಅವನತಿಯ ಹಾದಿಯಲ್ಲಿದ್ದ ಹಿಂದೂ ಧರ್ಮವನ್ನು ರಕ್ಷಿಸುವ ಕಾರ್ಯವನ್ನು ಛತ್ರಪತಿ ಶಿವಾಜಿ ಮಾಡಿದ್ದಾರೆ ಎಂದು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.

ಅವರು ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉಡುಪಿ ಮತ್ತು ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘ(ನಿ) ಉಡುಪಿ, ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್(ರಿ) ಉಡುಪಿ ಜಿಲ್ಲೆ ಇವರ ಸಹಯೋಗದೊಂದಿಗೆ ಹಿರಿಯಡಕ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಛತ್ರಪತಿ ಶಿವಾಜಿ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.

ಮೊಘಲರು ದಾಳಿ ಮಾಡಿದ ಸಂದರ್ಭದಲ್ಲಿ ಹಿಂದೂ ಧರ್ಮ ಅವನತಿಯ ಹಾದಿಯಲ್ಲಿದ್ದು, ಇಂತಹ ಸಂದರ್ಭದಲ್ಲಿ ಹಿಂದೂ ಧರ್ಮವನ್ನು ಉಳಿಸಿ, ಬೆಳೆಸಲು ಶ್ರಮಿಸಿದ ವ್ಯಕ್ತಿ ಛತ್ರಪತಿ ಶಿವಾಜಿ. ಬಾಲ್ಯದಲ್ಲಿ ತನ್ನ ತಾಯಿ ಜೀಜಾಬಾಯಿಯಿಂದ ರಾಮಾಯಣ ಮಹಾಭಾರತದ ಕಥೆಗಳನ್ನು ಕೇಳಿ ಪ್ರೇರಣೆ ಪಡೆದಿದ್ದು, ದೇಶದಲ್ಲಿ ಹಿಂದೂ ದರ್ಮ ಉಳಿಸಿ, ಅದರ ಧ್ವಜವನ್ನು ಹಾರಿಸಿದ ಕೀರ್ತಿ ಶಿವಾಜಿಗೆ ಸಲ್ಲುತ್ತದೆ. ದೇಶಕ್ಕೆ ಛತ್ರಪತಿ ಶಿವಾಜಿಯ ಕೊಡುಗೆ ಬಹಳಷ್ಟಿದೆ ಎಂದು ಲಾಲಾಜಿ ಮೆಂಡನ್ ಹೇಳಿದರು.

ಛತ್ರಪತಿ ಶಿವಾಜಿ ಕುರಿತು ವಿಶೇಷ ಉಪನ್ಯಾಸ ನೀಡಿದ ಕಾರ್ಕಳದ ಉಪನ್ಯಾಸಕ ಆದರ್ಶ ಗೋಖಲೆ ಮಾತನಾಡಿ, ಶಿವಾಜಿ ಸಮಾಜಕ್ಕಾಗಿ ಹೇಗೆ ಬದುಕ ಬೇಕೆಂಬುದನ್ನು ತೋರಿಸಿಕೊಟ್ಟಿದ್ದಾರೆ, ಮತ್ತು ದೇಶಕ್ಕಾಗಿ ಬದುಕುವ ಪ್ರೇರಣೆ ನೀಡಿದವರು. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಶಿವಾಜಿಯ ಆದರ್ಶ, ಚಿಂತನೆಗಳು ಸದಾ ಮೂಡುತ್ತಿರಬೇಕು. ದೇಶದ ಸ್ವಾಭಿಮಾನಕ್ಕೆ ತೊಂದರೆಯಾದಾಗ ಸ್ವಾಭಿಮಾನಿ ನಾಗರೀಕರು ರಕ್ಷಣೆಗೆ ಬರಬೇಕು. ಶಿವಾಜಿ ಮಹಾರಾಜರು ಭಾರತೀಯ ಸಮಾಜದ ಮೌಲ್ಯಗಳನ್ನು ಮನೆ ಮತ್ತು ಮನಗಳಿಗೆ ತಲುಪುವಂತೆ ಮಾಡಿದರು ಎಂದು ಹೇಳಿದರು.

ತಾಲೂಕು ಪಂಚಾಯತ್ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಹಿರಿಯಡಕ ಜಿಲ್ಲಾ ಪಂಚಾಯತ್ ಸದಸ್ಯೆ ಚಂದ್ರಿಕಾ ಕೇಳ್ಕರ್, ತಾಲೂಕು ಪಂಚಾಯತ್ ಸದಸ್ಯ ಲಕ್ಷ್ಮೀ ನಾರಾಯಣ್ ಪ್ರಭು, ಬೊಮ್ಮರಬೆಟ್ಟು ಪಂಚಾಯತ್ ಅಧ್ಯಕ್ಷೆ ಸವಿತಾ ನಾಯಕ್, ಜಿಲ್ಲಾ ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘ(ನಿ)ದ ಅಧ್ಯಕ್ಷ ದಿನೇಶ್ ಸಿ ನಾಯ್ಕ್, ಜಿಲ್ಲಾ ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್(ರಿ) ಅಧ್ಯಕ್ಷ ಬಡಾನಿಡಿಯೂರು ಕೇಶವ ರಾವ್, ಪೆರ್ಡೂರು ತಾಲೂಕು ಪಂಚಾಯತ್ನ ಸುಭಾಷ್ ನಾಯಕ್, ಸಂಧ್ಯಾ ಕಾಮತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಪೂರ್ಣಿಮಾ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್. ಚಂದ್ರಶೇಖರ್ ಸ್ವಾಗತಿಸಿದರು.


Spread the love

Exit mobile version