ಶೃಂಗೇರಿ, ಶಾಖಾ ಮಠ, ಕೋಟೆಕಾರು ದಸರಾ ಹಬ್ಬದ ಕಾರ್ಯಕ್ರಮಗಳ ಸಮಾರೋಪ
ಮಂಗಳೂರು: ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನಂ, ಶೃಂಗೇರಿ, ಶಾಖಾ ಮಠ, ಕೋಟೆಕಾರು, ಇಲ್ಲಿ ಶರನ್ನವರಾತ್ರಿ ಆಚರಣೆಯ ಕೊನೆಯ ದಿನವಾದ ವಿಜಯದಶಮಿಯ ಮಂಗಳವಾರದಂದು ದಸರಾ ನಾಡಹಬ್ಬದ ಕಾರ್ಯಕ್ರಮಗಳ ಸಮಾರೋಪ ಸಮಾರಂಭವು ಡಾ. ಆಶಾ ಜ್ಯೋತಿ ರೈ , ಅಧ್ಯಕ್ಷರು, ಆಸರೆ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಶ್ರೀಮತಿ ಸೌಮ್ಯಾ ರವೀಂದ್ರ ಶೆಟ್ಟಿ ಮತ್ತು ಶ್ರೀ ರವೀಂದ್ರ ಶೆಟ್ಟಿ ಉಳಿದೊಟ್ಟು ಅಧ್ಯಕ್ಷರು, ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆ ದೇರಳಕಟ್ಟೆ, ಇವರು ದೀಪ ಪ್ರಜ್ವಲನೆ ನೆರವೇರಿಸಿದರು. ಶ್ರೀ ಎಂ.ಆರ್. ವಾಸುದೇವ, ನಿವೃತ ನಿರ್ದೇಶಕರು, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇವರು ನಾಡಹಬ್ಬದ ಸಮಾರೋಪ ಭಾಷಣವನ್ನು ಮಾಡಿದರು. ಆಭ್ಯಾಗತರಾಗಿ ಆಗಮಿಸಿದ ಶ್ರೀ ಅನಾರು ಕೃಷ್ಣ ಶರ್ಮ, ಅಧ್ಯಕ್ಷರು, ಶ್ರೀ ಸುಬ್ರಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಬಂಟ್ವಾಳ, ಶ್ರೀ ಕುಮಾರ ಸ್ವಾಮಿ, ಅಧ್ಯಕ್ಷರು, ಗೊಲ್ಲ(ಯಾದವ) ಸಮಾಜ ಸೇವಾ ಸಂಘ, ಮಂಗಳೂರು, ಶ್ರೀ ಆನಂದ ಮೆಂಡನ್ , ಅಧ್ಯಕ್ಷರು ಶ್ರೀ ಉಳಿಯತ್ತಾಯ, ಸೇವಾ ಸಮಿತಿ ಉಳಿಯ, ಕೋಟೆಕಾರು ಪಟ್ಟಣ ಪಂಚಾಯತಿನ ಅಧ್ಯಕ್ಷರಾದ ಶ್ರೀಮತಿ ಭಾರತಿ ಗಟ್ಟಿ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕು. ಅಪೇಕ್ಷ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ , ಶ್ರೀ ಶಂಕರ ಮಠ, ಕೋಟೆಕಾರು ಶಾಖೆ ಇದರ ಧರ್ಮಾಧಿಕಾರಿಗಳಾದ ಶ್ರೀ ಬೊಳ್ಳಾವ ಸತ್ಯಶಂಕರ, ಉತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಮಧುಸೂದನ್ ಅಯರ್, ಕೋಶಾಧಿಕಾರಿ ಡಾ. ಮಾಧವಿ ವಿಜಯ ಕುಮಾರ್, ಪ್ರಧಾನ ಕಾರ್ಯದರ್ಶಿ ಸೀತಾರಾಮ ಕೊಪ್ಪಲು,ಉಪಾಧ್ಯಕ್ಷ ಶ್ರೀ ಅನಂತಕೃಷ್ಣ ಇವರುಗಳು ಉಪಸ್ಥಿತರಿದ್ದರು. ಶ್ರೀ ಮಧುಸೂದನ ಅಯರ್ ರವರು ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು.
ಧರ್ಮಾಧಿಕಾರಿ ಬೊಳ್ಳಾವ ಶ್ರೀ ಸತ್ಯಶಂಕರ ರವರು ಪ್ರಾಸ್ತಾವಿಕ ನುಡಿಗಳನ್ನಾಡಿ ಅತಿಥಿ ಅಭ್ಯಾಗತರಿಗೆ ಅವರು ಮತ್ತು ಡಾ. ಮಾಧವಿ ವಿಜಯ ಕುಮಾರ್ ರವರ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ದೀಪ ಪ್ರಜ್ವಲನೆ ನಡೆಸಿಕೊಟ್ಟ ಶ್ರೀ ರವೀಂದ್ರ ಶೆಟ್ಟಿ ಉಳಿದೊಟ್ಟು, ಮತ್ತು ಅಭ್ಯಾಗತರು ಸಂದರ್ಭೋಚಿತರಾಗಿ ಮಾತನಾಡಿದರು. ಶ್ರೀ ಎಂ.ಆರ್. ವಾಸುದೇವ ಇವರು ಸಮಾರೋಪ ಭಾಷಣದಲ್ಲಿ ಜಗದ್ಗುರು ಶ್ರೀ ಶಂಕರ ಭಗವತ್ಪಾದರ ತತ್ವ ಸಿದ್ದಾಂತಗಳು, ತಮ್ಮ ಜೀವಿತದ ಅತ್ಯಲ್ಪ ಅವಧಿಯಲ್ಲಿ ಧರ್ಮ ರಕ್ಷಣೆಗೆ ಅವರು ಕೈಗೊಂಡ ಕ್ರಮಗಳು, ದೇವಿ ಶಾರದಾಂಬೆಯ ಆರಾಧನೆಯ ಕುರಿತಂತೆ ಉಪನ್ಯಾಸವನ್ನು ನೀಡಿದರು. ಡಾ. ಆಶಾ ಜ್ಯೋತಿ ರೈಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ನಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಚಾರಗಳ ಆಚರಣೆಯಲ್ಲಿ ಬದಲಾಗುತ್ತಿರುವ ಪರಿಸ್ಥಿತಿ, ತತ್ವ ಜ್ಜಾನಗಳ ಕೊರತೆ ಕಾರಣ ನಮ್ಮ ಹಿಂದೂ ಸಮಾಜಗಳ ಮೇಲೆ ಆಗುವಂತಹ ದುಷ್ಪರಿಣಾಮ ಇತ್ತಾದಿಗಳ ಬಗ್ಗೆ ಗಮನ ಸೆಳೆದು ಹಿಂದೂ ಸಮಾಜವನ್ನು ಸುದೃಡಗೊಳಿಸುವ ಕುರಿತಂತೆ ಮಾತನಾಡಿದರು.ಶ್ರೀ ಸೀತಾರಾಮ ಕೊಪ್ಪಲು, ಇವರು ಧನ್ಯವಾದ ಸಮರ್ಪಿಸಿದರು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀಮತಿ ಬೊಳ್ಳಾವ ನಾರಾಯಣಿ ಸತ್ಯ ಶಂಕರ ಇವರ ಶಿಷ್ಯೆ ಕುಮಾರಿ ಆಪೇಕ್ಷ ಇವರಿಂದ ಕರ್ನಾಟಕ ಸಂಗೀತ ಕಾರ್ಯಕ್ರಮವು ನಡೆಯಿತು. ಮೃದಂಗದಲ್ಲಿ ಮಾಸ್ಟರ್ ಧನ್ವಿ ಪ್ರಸಾದ್ ವಾಯ್ಲಿನ್ ನಲ್ಲಿ ಮಾಸ್ಟರ್ ಗೌತಮ್ ರವರು ಸಹಕರಿಸಿದರು. . ಡಾ. ಪವಿತ್ರ ರವಿ ನಾರಾಯಣ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಮಹಾ ಮಂಗಳಾರತಿ, ಪ್ರಸಾಧ ವಿತರಣೆಯೊಂದಿಗೆ ಶರನ್ನವರಾತ್ರಿ ಉತ್ಸವವು ಸಂಪನ್ನಗೊಂಡಿತು.