Home Mangalorean News Kannada News ಶ್ರೀನಿವಾಸ್ ಕಾಲೇಜಿನಲ್ಲಿ ಶಿರವಸ್ತ್ರಕ್ಕೆ ನಿರ್ಬಂಧ : ಸಿಎಫ್ ಐ ಪ್ರತಿಭಟನೆ

ಶ್ರೀನಿವಾಸ್ ಕಾಲೇಜಿನಲ್ಲಿ ಶಿರವಸ್ತ್ರಕ್ಕೆ ನಿರ್ಬಂಧ : ಸಿಎಫ್ ಐ ಪ್ರತಿಭಟನೆ

Spread the love

ಶ್ರೀನಿವಾಸ್ ಕಾಲೇಜಿನಲ್ಲಿ ಶಿರವಸ್ತ್ರಕ್ಕೆ ನಿರ್ಬಂಧ : ಸಿಎಫ್ ಐ ಪ್ರತಿಭಟನೆ

ಮಂಗಳೂರು: ವಳಚ್ಚಿಲ್ ಶ್ರೀನಿವಾಸ್ ಕಾಲೇಜು ಆಡಳಿತ ಮಂಡಳಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಶಿರವಸ್ತ್ರ ಧರಿಸಲು ಅನುಮತಿ ನೀಡದಿರುವುದು, ವಿದ್ಯಾರ್ಥಿಗಳಿಗೆ ಶುಕ್ರವಾರದ ನಮಾಝಿಗೆ ಅಡ್ಡಿಯಾಗುವಂತೆ ತರಗತಿ ವೇಳಾಪಟ್ಟಿ ರಚಿಸಿರುವುದನ್ನು ಹಾಗೂ ಸಣ್ಣಪುಟ್ಟ ವಿಚಾರಗಳಿಗೆ ಸಾವಿರಾರು ದಂಡ ವಿಧಿಸುವ ಕ್ರಮವನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ನೇತೃತ್ವದಲ್ಲಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಕಾಲೇಜಿನ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

image006srinivas-college-protest-20160827-006

ಕಾಲೇಜಿನ ಆಡಳಿತ ಮಂಡಳಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಿಗೆ ಶುಕ್ರವಾರ ನಮಾಜ್ ಮಾಡಲು ಅವಕಾಶ ನೀಡುತ್ತಿಲ್ಲ ಅಲ್ಲದೆ ವಿದ್ಯಾರ್ಥಿನಿಯರಿಗೆ ಶಿರವಸ್ತ್ರವನ್ನು ಧರಿಸದಂತೆ ಆದೇಶ ಮಾಡಿದ್ದು ಇದರಿಂದ ಒಂದು ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಪೋಷಕರು ಕೂಡ ಭಾಗವಹಿಸಿದ್ದು, ವಿದ್ಯಾರ್ಥಿಗಳ ಧಾರ್ಮಿಕ ಸ್ವಾತಂತ್ರ್ಯವನ್ನು ಕಾಲೇಜು ಆಡಳಿತ ಮಂಡಳಿ ಕಿತ್ತುಕೊಂಡಿದೆ ಎಂದು ಆರೋಪಿಸಿದರು.

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದು, ಗ್ರಾಮಾಂತರ ಪೋಲಿಸರು ಪರಿಸ್ಥಿತಿ ನಿಯಂತ್ರಣಕ್ಕೆ ಸೂಕ್ತ ಪೋಲಿಸ್ ಬಂದೋಬಸ್ತನ್ನು ಮಾಡಿದ್ದರು.


Spread the love
2 Comments
Inline Feedbacks
View all comments
Original R.Pai
8 years ago

So…these ‘students’ want college to change teaching schedule to accommodate Friday prayers and allow students to wear ‘shira vastra’?? If those pics are any indication, then they are referring to burqa. In fact this report forgets to mention how these students and their parents had signed a document listing all these policies in clear terms at the time of admission.

Praveen
8 years ago

Demands from these morons are getting more and more ridiculous. The next thing they will demand is that all wineshops/bars be closed on Friday and further ban the sale of Pork.

What next? All shops should pull down shutters 5 times a DAY? Lol!

wpDiscuz
Exit mobile version