Home Mangalorean News Kannada News ಶ್ರೀಲಂಕಾ ಪ್ರಧಾನಿ ಭೇಟಿ ಹಿನ್ನೆಲೆ: ಕೊಲ್ಲೂರಿನಲ್ಲಿ ಬಿಗು ಪೊಲೀಸ್ ಬಂದೋಬಸ್ತ್

ಶ್ರೀಲಂಕಾ ಪ್ರಧಾನಿ ಭೇಟಿ ಹಿನ್ನೆಲೆ: ಕೊಲ್ಲೂರಿನಲ್ಲಿ ಬಿಗು ಪೊಲೀಸ್ ಬಂದೋಬಸ್ತ್

Spread the love

ಶ್ರೀಲಂಕಾ ಪ್ರಧಾನಿ ಭೇಟಿ ಹಿನ್ನೆಲೆ: ಕೊಲ್ಲೂರಿನಲ್ಲಿ ಬಿಗು ಪೊಲೀಸ್ ಬಂದೋಬಸ್ತ್

ಕುಂದಾಪುರ: ಶ್ರೀಲಂಕಾ ಪ್ರಧಾನಿ ರೆನಿಲ್ ವಿಕ್ರಮ್ ಸಿಂಘೆ ಕೊಲ್ಲೂರು ಮೂಕಾಂಬಿಕ ದೇವಸ್ಥಾನ ಭೇಟಿ ಹಿನ್ನೆಲೆಯಲ್ಲಿ ಶುಕ್ರವಾರ ದೇವಸ್ಥಾ‌ನದ ವಠಾರದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಬೆಳಗ್ಗೆ 11 ಗಂಟೆ ಸುಮಾರಿಗೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸುವ ಅವರು, ದೇವರ ದರ್ಶನದ ಬಳಿಕ ನವಚಂಡಿಯಾಗದಲ್ಲಿ ಪಾಲ್ಗೊಂಡು ಬಳಿಕ ಮಂಗಳೂರಿಗೆ ತೆರಳಲಿದ್ದಾರೆ.

ಕಳೆದ ಎರಡು ತಿಂಗಳ‌ ಹಿಂದಷ್ಟೆ ಈಸ್ಟರ್ ದಿನದಂದು ಶ್ರೀಲಂಕಾದ ಕೊಲೊಂಬೊದಲ್ಲಿ ನಡೆದ ಬಾಂಬ್ ದಾಳಿಯ ಹಿನ್ನೆಲೆಯಲ್ಲಿ ಶ್ರೀಲಂಕಾ ಪ್ರಧಾನಿಯವರಿಗೆ ಹೆಚ್ಚುವರಿ ಭದ್ರತೆ ಕಲ್ಪಿಸಲು ಉಡುಪಿ ಜಿಲ್ಲಾಡಳಿತ ಮುಂದಾಗಿದ್ದು, ಈಗಾಗಲೆ ಸಕಲ ಸಿದ್ದತೆಯನ್ನು ಮಾಡಿಕೊಂಡಿದೆ. ಬೆಳಗ್ಗೆ 9 ಗಂಟೆಯಿಂದಲೇ ಭಕ್ತಾಧಿಗಳಿಗೆ ದೇವಸ್ಥಾನ ಪ್ರವೇಶ ನಿಷೇಧಿಸಲಾಗಿದ್ದು, ಪ್ರಧಾನಿ ತೆರಳಿದ ಬಳಿಕ ಮತ್ತೆ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಪ್ರವೇಶ ಕಲ್ಪಿಸಲಿದ್ದಾರೆ. ಹೆಚ್ಚುವರಿ ಭದ್ರತೆಗಾಗಿ ಕೊಲ್ಲೂರು ದೇವಳದ ಆಸುಪಾಸಿನ‌ ಅಂಗಡಿ, ಹೊಟೇಲ್ ಗಳನ್ನು ಬಂದ್ ಮಾಡಲು ಮುಂಚಿತವಾಗಿ ತಿಳಿಸಿದ್ದರಿಂದ ಇಂದು ಬೆಳಗ್ಗಿನಿಂದಲೇ ಅಂಗಡಿ ಮುಂಗಟ್ಟುಗಳನ್ನು‌ ಬಂದ್ ಮಾಡಲಾಗಿದೆ. ರಸ್ತೆಯಲ್ಲಿ ವಾಹನಗಳ ಓಡಾಟವೂ ವಿರಳವಾಗಿದ್ದು, ದೇವಳದ ವಠಾರ ಹಾಗೂ ರಸ್ತೆ ಬಿಕೋ ಎನ್ನುತ್ತಿದೆ.

ಪೊಲೀಸ್ ಸಿಬ್ಬಂದಿಗಳ‌ ಪರದಾಟ: ಪ್ರಧಾನಿ ಭದ್ರತೆಗಾಗಿ ರಸ್ತೆಯೂದ್ದಕ್ಕೂ ಪೊಲೀಸ್ ಸಿಬ್ನಂದಿಗಳನ್ನು ನಿಯೋಜಿಸಲಾಗಿದ್ದು ಕುಂದಾಪುರದಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ಪೊಲೀಸ್‌ ಸಿಬ್ಬಂದಿಗಳು ಪರದಾಟ ನಡೆಸುತ್ತಿರುವ ದೃಶ್ಯ ಕಂಡುಬಂದಿದೆ.

 


Spread the love

Exit mobile version