ಶ್ರೀಲಂಕಾ ಭಯೋತ್ಪಾದಕ ದಾಳಿ ‘ಆಲ್ ಇಂಡಿಯಾ ಕಥೊಲಿಕ್ ಯೂನಿಯನ್’ಖಂಡನೆ

Spread the love

ಶ್ರೀಲಂಕಾ ಭಯೋತ್ಪಾದಕ ದಾಳಿ ‘ಆಲ್ ಇಂಡಿಯಾ ಕಥೊಲಿಕ್ ಯೂನಿಯನ್’ಖಂಡನೆ

ಮಂಗಳೂರು: ಕಳೆದ ಆದಿತ್ಯವಾರ ಶ್ರೀಲಂಕಾದಲ್ಲಿ ಪೂಜೆಯ ಸಮಯದಲ್ಲಿ ನಡೆದ ಅತ್ಯಂತ ಕ್ರೂರ ಬಾಂಬ್ ದಾಳಿಯನ್ನು ಖಂಡಿಸಿರುತ್ತಾರೆ ಹಾಗೂ ಇದೊಂದು ಅಮಾನುಷ ಕೃತ್ಯವೆಂದು ಕರೆದಿದ್ದಾರೆ. ಯಾವುದೇ ಧರ್ಮದಲ್ಲಾಗಲಿ ಅವರವರಿಗೆ ಅವರ ಧರ್ಮದ ಪ್ರಾರ್ಥನಾ ವಿದಿಗಳು ಮುಖ್ಯ ಹೀಗಿರುವಾಗ ಇತರರ ಪ್ರಾರ್ಥನಾ ವಿದಿ-ವಿಧಾನಗಳನ್ನು ದ್ವಂಸಿಸುವುದು ಅಮಾನುಷ ಕೃತ್ಯ. ಈ ಘಟನೆಯನ್ನು ಎಲ್ಲಾ ಧರ್ಮದವರು ಖಂಡಿಸಬೇಕು ಮತ್ತು ಇದನ್ನು ನಡೆಸಿದವರು ಯಾರೇ ಆಗಿರಲಿ ಅವರನ್ನು ಶಿಕ್ಷಿಸಬೇಕು ಎಂದು ‘ಆಲ್ ಇಂಡಿಯಾ ಕಥೊಲಿಕ್ ಯೂನಿಯನ್’ ಅಧ್ಯಕ್ಷರಾದ ಲ್ಯಾನ್ಸಿ ಡಿ’ಕುನ್ಹಾ ಆಗ್ರಹಿಸಿದ್ದಾರೆ

ಜಾಗತಿಕ ಮಟ್ಟದಲ್ಲಿ ಇಂತಹ ಕೃತ್ಯಗಳು ನಡೆಯುತ್ತಾ ಬಂದಿವೆ. ಕಾನೂನು ರಕ್ಷಿಸುವ ಪ್ರತಿಯೊಬ್ಬ ಅಧಿಕಾರಿಯು ಯಾವುದೇ ರಾಷ್ಟ್ರಗಳಲ್ಲಿ ಇಂತಹ ಕೃತ್ಯಗಳು ಪುನರುಚ್ಚಾರವಾಗದಂತೆ ಕಟ್ಟೆಚ್ಚರ ಕ್ರಮಗಳನ್ನು ಮುಂಚಿತವಾಗಿ ತೆಗೆದು ಕೊಳ್ಳಬೇಕು ಹಾಗೂ ಜಗತ್ತಿನಾದ್ಯಂತ ಶಾಂತಿಜೀವನ ನಡೆಸಲು ಅನುವು ಮಾಡಿಕೊಡಬೇಕಾಗಿ ಮನವಿ ಮಾಡಿದ್ದಾರೆ.

ಶ್ರೀಲಂಕಾವು ನಮ್ಮ ಹತ್ತಿರದ ನೆರೆಯರಾಷ್ಟ್ರ. ಈ ಸಮಯದಲ್ಲಿ ನಮ್ಮ ನಿವೇದನೆಯೆಂದರೆ ವಿವಿದ ಧಾರ್ಮಿಕ ಮುಖಂಡರನ್ನೊಳಗೊಂಡ ಉನ್ನತ ಮಟ್ಟದ ನಿಯೋಗವನ್ನು ಸ್ಥಾಪಿಸಿ ಶ್ರೀಲಂಕಾಗೆ ಭೇಟಿಕೊಟ್ಟು ಗಾಯಾಳುಗಳ ಹಾಗೂ ಜೀವ ಕಳಕೊಂಡ ಕುಟುಂಬಗಳಿಗೆ ಭೇಟಿ ನೀಡಿ ಧೈರ್ಯ ತುಂಬಬೇಕು ಮತ್ತು ಅಗತ್ಯ ಸಹಾಯವನ್ನು ನೀಡಬೇಕು.

ಶ್ರೀಲಂಕ ಸರಕಾರ ಇದರ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಯಾರೇ ಆದರೂ ಅವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಹಾಗೂ ಇಂತಹ ಸಂಘಟನೆಗಳನ್ನು ನಿಷೇದಿಸಬೇಕು.

ರಾಷ್ಟ್ರದಲ್ಲಿ ಬೇಗನೆ ಶಾಂತಿ ನೆಲೆಸಲಿ ಹಾಗೂ ಯಾವುದೇ ಜಾತಿ-ಧರ್ಮಗಳಲ್ಲಿ ಬೇದವಿಲ್ಲದೆ ಮಾನವಜಾತಿ, ಧರ್ಮವೆಂದು ಮನುಶ್ಯತ್ವ ನೆಲೆಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.


Spread the love