Home Mangalorean News Kannada News ಶ್ರೀಲಂಕಾ ಹಿಂದೂಗಳಿಗೆ ನ್ಯಾಯ ಒದಗಿಲು ಹಿಂದುತ್ವ ಸಂಘಟನೆಗಳು , ರಾಜಕೀಯ ಪಕ್ಷಗಳು ಮುಂದಾಳತ್ವ ಆವಶ್ಯ...

ಶ್ರೀಲಂಕಾ ಹಿಂದೂಗಳಿಗೆ ನ್ಯಾಯ ಒದಗಿಲು ಹಿಂದುತ್ವ ಸಂಘಟನೆಗಳು , ರಾಜಕೀಯ ಪಕ್ಷಗಳು ಮುಂದಾಳತ್ವ ಆವಶ್ಯ !

Spread the love

ಶ್ರೀಲಂಕಾ ಹಿಂದೂಗಳಿಗೆ ನ್ಯಾಯ ಒದಗಿಲು ಹಿಂದುತ್ವ ಸಂಘಟನೆಗಳು , ರಾಜಕೀಯ  ಪಕ್ಷಗಳು ಮುಂದಾಳತ್ವ ಆವಶ್ಯ !

ಗೋವಾ – “ಕಳೆದ 30 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಯುದ್ಧದಿಂದಾಗಿ ಶ್ರೀಲಂಕಾದಲ್ಲಿರುವ ಹಿಂದೂಗಳ ಸಂಖ್ಯೆಯು ಭಾರಿ ಪ್ರಮಾಣದಲ್ಲಿ ಕುಸಿಯುತ್ತಿದೆ. ಶೇ. ೩೦ ರಷ್ಟಿದ್ದ ಹಿಂದೂಗಳ ಸಂಖ್ಯೆ ಈಗ ಶೇ. ೧೫ ಕ್ಕೆ ಅಂದರೆ ಕೇವಲ ೨೦ ಲಕ್ಷಕ್ಕೆ ಬಂದಿದೆ. ಮತಾಂತರವಾಗಲು ಹಿಂದೂಗಳ ಮೇಲೆ ಸತತವಾಗಿ ಒತ್ತಡ ಹೇರಲಾಗುತ್ತದೆ. ಇದರಿಂದಾಗಿ ಶ್ರೀಲಂಕಾದಲ್ಲಿರುವ ಹಿಂದೂಗಳಿಗೆ ನ್ಯಾಯ ನೀಡಲು ಭಾರತದಲ್ಲಿರುವ ಹಿಂದುತ್ವನಿಷ್ಠ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಮುಂದಾಳತ್ವ ವಹಿಸುವುದು ಅವಶ್ಯವಾಗಿದೆ”, ಎಂದು ಭಾವನಾತ್ಮಕ ಕರೆಯನ್ನು ಶ್ರೀಲಂಕಾದ ೭೬ ವರ್ಷದ ಮರವನಪುಲಾವೂ ಸಚ್ಚಿದಾನಂದನ್ ಇವರು ನೀಡಿದರು. ಅವರು ಗೋವಾದ ರಾಮನಾಥಿ ದೇವಸ್ಥಾನದಲ್ಲಿ ನಡೆಯುತ್ತಿರುವ ಆರನೇ ‘ಅಖಿಲ ಭಾರತೀಯ ಹಿಂದೂ ಅಧಿವೇಶನ’ದ ಎರಡನೇ ದಿನದಂದು ‘ವಿದೇಶಿ ಹಿಂದೂಗಳ ಸುರಕ್ಷೆ’ ಈ ವಿಷಯದ ಚರ್ಚೆಯ ಸಮಯದಲ್ಲಿ ಮಾತನಾಡುತ್ತಿದ್ದರು.

ಈ ವೇಳೆ ‘ಬಾಂಗ್ಲಾದೇಶ ಮೈನಾರಿಟಿ ವಾಚ್’ ಸಂಘಟನೆಯ ಅಧ್ಯಕ್ಷ ರವೀಂದ್ರ ಘೋಷರವರು ಮಾತನಾಡುತ್ತಾ, “ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ದಯನೀಯವಾಗಿದ್ದು ಚಿಕ್ಕಪುಟ್ಟ ಕಾರಣಗಳಿಗಾಗಿ ಹಿಂದೂಗಳನ್ನು ಸೆರೆಮನೆಗೆ ತಳ್ಳುತ್ತಾರೆ. ಎಷ್ಟೇ ಅಡಚಣೆಯಾದರೂ ಕೊನೆಯ ಉಸಿರು ಇರುವ ತನಕ ಬಾಂಗ್ಲಾದೇಶದ ಹಿಂದೂಗಳಿಗಾಗಿ ಹೋರಾಡುವೆವು” ಎಂದರು.

ಹಿಂದೂ ರಾಷ್ಟ್ರ ಬರುವ ತನಕ ಸಂವಿಧಾನಮಾರ್ಗದಿಂದ ಹೋರಾಟ ಮುಂದುವರಿಯುವುದು ! – ನ್ಯಾಯವಾದಿ ಅಮೃತೇಶ ಎನ್.ಪಿ., ಬೆಂಗಳೂರು

ಬೆಂಗಳೂರು ಉಚ್ಚ ನ್ಯಾಯಾಲಯದ  ನ್ಯಾಯವಾದಿ ಮತ್ತು ಹಿಂದೂ ವಿಧಿಜ್ಞ ಪರಿಷತ್ತಿನ ಉಪಾಧ್ಯಕ್ಷರಾದ ಅಮೃತೇಶ ಎನ್.ಪಿ. ಇವರು ‘ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಜಿಹಾದಿ ಚಟುಟವಟಿಕೆಗಳು ಹಾಗೂ ಹಿಂದೂಗಳೆದುರಿನ ಸಮಸ್ಯೆಗಳು’ ಈ ವಿಷಯದಲ್ಲಿ ಮಾತನಾಡುತ್ತಾ, ‘ಕರ್ನಾಟಕದಲ್ಲಿ ಪ್ರತಿದಿನ ಹಿಂದೂ ಕಾರ್ಯಕರ್ತರ ಹತ್ಯೆಯಾಗುತ್ತಿದೆ. ‘ಸಿಮಿ’ ಈ ಭಯೋತ್ಪಾದನಾ ಸಂಘಟನೆಯು ಕೇರಳ ರಾಜ್ಯದಲ್ಲಿ ಒಂದು ಬೇರೆ ಹೆಸರಿನಲ್ಲಿ ಹೊಸ ಸಂಘಟನೆಯನ್ನು ಆರಂಭಿಸಿದೆ. ಕರ್ನಾಟಕದಲ್ಲಿ ಮುಂದಿನ ೨ ವರ್ಷಗಳಲ್ಲಿ ಚುನಾವಣೆ ಆಗಲಿದ್ದು ಆ ಸಮಯದಲ್ಲಿ ನಾವು ‘ಹಿಂದೂಹಿತ ಕಾಪಾಡುವವರನ್ನೇ ಆರಿಸುವೆವು’, ಎಂದು ಪ್ರಚಾರ ಮಾಡಲಿದ್ದೇವೆ. ಹಿಂದೂ ರಾಷ್ಟ್ರ ಬರುವ ತನಕ ನಾವು ಸಂವಿಧಾನಬದ್ಧ ಹೋರಾಟವನ್ನು ಮುಂದುವರಿಸುತ್ತಿರುವೆವು.’

ಓಡಿಶಾದ ಭಾರತ ರಕ್ಷಾ ಮಂಚ್‌ನ ರಾಷ್ಟ್ರೀಯ ಸಹಸಂಯೋಜಕ ಶ್ರೀ.ಮುರಲಿ ಮನೋಹರ ಶರ್ಮಾ ಇವರು ಮಾತನಾಡುತ್ತಾ, “ನಿಸರ್ಗದಿಂದ ಹಿಡಿದು ಪ್ರತಿಯೊಂದು ಕಡೆ ದೇವರು ಇದ್ದಾನೆ ಎಂಬ ಶಿಕ್ಷಣವನ್ನು ಕೇವಲ ಹಿಂದೂ ಧರ್ಮ ಮಾತ್ರ ನೀಡುತ್ತದೆ’ ಎಂದರು. ಆದುದರಿಂದ ಜಗತ್ತನ್ನು ನಿನಾಶದಿಂದ ಉಳಿಸಲು ಹಿಂದೂ ಧರ್ಮವೇ ಬೇಕಾಗಿದೆ”, ಎಂದರು. ಈ ಭಾಗದಲ್ಲಿ ‘ಸ್ಪಿರಿಚ್ಯುವಲ್ ಸೈನ್ಸ್ ರಿಸರ್ಚ ಫೌಂಡೇಶನ್’ನ ಅಂತಾರಾಷ್ಟ್ರೀಯ ಮಾರ್ಗದರ್ಶಕರಾದ ಪೂ.ಸಿರಿಯಾಕ್ ವಾಲೆ ಇವರು, ‘ಸ್ಪಿರಿಚ್ಯುವಲ್ ಸೈನ್ಸ್ ರಿಸರ್ಚ ಫೌಂಡೇಶನ್’ನ ಕಾರ್ಯವನ್ನು ವಿಷದೀಕರಿಸಿದರು.

 ‘ಪ್ರಜಾಪ್ರಭುತ್ವದ ನಿರರ್ಥಕತೆ’ ಈ ವಿಷಯದಲ್ಲಿನ ಚರ್ಚಾಕೂಟದಲ್ಲಿ ಮಾತನಾಡಿದ ‘ನ್ಯಾಶನಲ್ ಸೆಂಟರ್ ಫಾರ್ ಹಿಸ್ಟಾರಿಕಲ್ ರಿಸರ್ಚ ಅಂಡ್ ಕಂಪೇರಿಟಿವ್ ಸ್ಟಡಿ’ಯ ಅಧ್ಯಕ್ಷ ಶ್ರೀ.ನೀರಜ ಅತ್ರಿ ಇವರು, “ಎನ್.ಸಿ.ಆರ್.ಟಿ.ಸಿ.ಯ ಮಾಧ್ಯಮದಿಂದ ವೇದಗಳನ್ನು ಅಪಮಾನಿಸುವ ಷಡ್ಯಂತ್ರವನ್ನು ರಚಿಸಲಾಗುತ್ತಿದೆ. ಗುಲಾಮಗಿರಿಯಂತಹ ಸಂಪ್ರದಾಯವು ವೇದಗಳಲ್ಲಿದೆ ಎಂಬ ಸುಳ್ಳು ಮಾಹಿತಿಯನ್ನು ಕೇಂದ್ರ ಸ್ತರದ ಪಠ್ಯಕ್ರಮದ ಮಾಧ್ಯಮದಿಂದ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿದೆ”, ಎಂದರು


Spread the love

Exit mobile version