Home Mangalorean News Kannada News ಸಂಘಪರಿವಾರ, ಪೊಲೀಸರ ನಡುವಿನ ಸಂಬಂಧ ಬಹಿರಂಗ: ಜಿ.ರಾಜಶೇಖರ್ 

ಸಂಘಪರಿವಾರ, ಪೊಲೀಸರ ನಡುವಿನ ಸಂಬಂಧ ಬಹಿರಂಗ: ಜಿ.ರಾಜಶೇಖರ್ 

Spread the love

ಸಂಘಪರಿವಾರ, ಪೊಲೀಸರ ನಡುವಿನ ಸಂಬಂಧ ಬಹಿರಂಗ: ಜಿಲ್ಲಾಧ್ಯಕ್ಷ ಜಿ.ರಾಜಶೇಖರ್ 

ಉಡುಪಿ: ಪೆರ್ಡೂರಿನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ದನದ ವ್ಯಾಪಾರಿ ಹುಸೇನಬ್ಬ ಅವರ ಸಾವಿನ ಪ್ರಕರಣದಲ್ಲಿ ಸಂಘಪರಿವಾರದ ದಾಳಿಕೋರ ಗುಂಪುಗಳು ಹಾಗೂ ಕೆಲವು ಪೊಲೀಸರು ಹೊಂದಿರುವ ಅಕ್ರಮವಾದ ಸಂಬಂಧ ಅಧಿಕೃತವಾಗಿ ಬಯಲಾದಂತಾಗಿದೆ ಎಂದು  ಕೋಮುಸೌಹಾರ್ದ ವೇದಿಕೆ ಜಿಲ್ಲಾಧ್ಯಕ್ಷ ಜಿ.ರಾಜಶೇಖರ್ ಹೇಳಿದರು.

ದನಸಾಗಾಟ ಮಾಡುವವರ ಮೇಲೆ ಹಲ್ಲೆ ಹಾಗೂ ಹತ್ಯೆ ಪ್ರಕರಣಗಳು ಕರಾವಳಿಯಲ್ಲಿ ಹೊಸತಲ್ಲ. ಆದರೆ, ಹುಸೇನಬ್ಬ ಪ್ರಕರಣದಲ್ಲಿ ಸಂತ್ರಸ್ತರ ಕುಟುಂಬದ ದೂರನ್ನು ಎಸ್‌ಪಿ ಲಕ್ಷ್ಮಣ ನಿಂಬರಗಿ ಅವರು ಗಂಭೀರವಾಗಿ ಪರಿಗಣಿಸಿ, ನೈಜ ತನಿಖೆ ನಡೆಸಿ, ಸತ್ಯವನ್ನು ಬಯಲಿಗೆಳೆದಿರುವುದು ಶ್ಲಾಘನೀಯ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹುಸೇನಬ್ಬ ಸಾವಿನ ಪ್ರಕರಣದ ಬಳಿಕ ಬಿಜೆಪಿ ನಾಯಕರು ನಡೆದುಕೊಳ್ಳುತ್ತಿರುವ ರೀತಿ ಖಂಡನೀಯ. ಅಕ್ರಮವಾಗಿ ಹಲ್ಲೆ ಹಾಗೂ ಕೊಲೆಗಳಲ್ಲಿ ತೊಡಗಿರುವ ಸಂಘಟನೆಗಳನ್ನು ರಕ್ಷಿಸಲು ಪೊಲೀಸರ ಮೇಲೆಯೇ ಆರೋಪಗಳನ್ನು ಮಾಡು ತ್ತಿರುವುದು ಖಂಡನೀಯ ಎಂದರು.

ಹಿಂದೆ, ಆದಿ ಉಡುಪಿಯಲ್ಲಿ ನಡೆದ ಬೆತ್ತಲೆ ಪ್ರಕರಣ, ಬಾರ್ಕೂರ ಸಮೀಪ ಕೃಷ್ಣಯ್ಯ ಪಾಠಾಳಿ ಸಾವು, ಬ್ರಹ್ಮಾವರದಲ್ಲಿ ಪ್ರವೀಣ್ ಪೂಜಾರಿ ಸಾವು ಹೀಗೆ, ಹಲವು ಪ್ರಕರಣಗಳಲ್ಲಿ ಸಾಕ್ಷ್ಯಗಳ ನಾಶ ನಡೆದಿದೆ. ಹುಸೇನಬ್ಬ ಪ್ರಕರಣದಲ್ಲೂ ತನಿಖಾತಂಡವನ್ನು ದುರ್ಬಲಗೊಳಿಸುವ ಹುನ್ನಾರ ನಡೆಯುತ್ತಿದೆ. ಸರ್ಕಾರ ಸದ್ಯದ ತನಿಖಾ ತಂಡವನ್ನು ಬದಲಾಯಿ ಸಬಾರದು. ವಾದ ಮಂಡನೆಗೆ ದಕ್ಷ ಸರ್ಕಾರಿ ಅಭಿಯೋಜಕರನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.

ಕರಾವಳಿಯಲ್ಲಿ ನಡೆಯುತ್ತಿರುವ ದನಸಾಗಾಟಗಾರರ ಮೇಲಿನ ಹಲ್ಲೆ, ಕೊಲೆಗಳು ನಿಲ್ಲಬೇಕಾದರೆ, ಹುಸೇನಬ್ಬ ಪ್ರಕರಣದಲ್ಲಿ ನ್ಯಾಯಯುತ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

ಬಿಜೆಪಿ ನಾಯಕರು ಕಟ್ಟುಕಥೆಗಳನ್ನು ಹೇಳುತ್ತಿದ್ದಾರೆ. ನಂಬಬಹುದಾದ ಯಾವ ಸಾಕ್ಷ್ಯಗಳನ್ನು ನೀಡುತ್ತಿಲ್ಲ. ತನಿಖಾಧಿಕಾರಿಗಳ ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಿರುವುದು ಸರಿಯಲ್ಲ ಎಂದು  ಖಂಡಿಸಿದರು.

ರಫೀಕ್ ಎಂಬ ಪೊಲೀಸ್ ಅಧಿಕಾರಿ ಮುಸ್ಲಿಂ ಎಂಬ ಕಾರಣಕ್ಕೆ ಗುರಿಯಾಗಿಸಿ ವಾಗ್ದಾಳಿ ನಡೆಸಲಾಗುತ್ತಿದೆ. ಹುಸೇನಬ್ಬ ಅವರನ್ನು ಜಾನುವಾರು ಕಳ್ಳಸಾಗಣೆದಾರ ಎಂದು ಬಿಂಬಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮತಾಂತರ, ಗೋಸಂರಕ್ಷಣೆ ಹೆಸರಿನ ದಾಳಿ, ನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ ಮುಖ್ಯವಾಗಿ ಶ್ರಮ ವಿಭಜನೆಯನ್ನು ಕಾಣಬಹುದು. ತತ್ವ, ಸಿದ್ಧಾಂತಗಳನ್ನು ಪ್ರಸಾರ ಮಾಡುವ ಮಠಾಧೀಶರು, ದೇವಸ್ಥಾನಗಳ ಮುಕ್ತೇಸರರು ಒಂದು ವರ್ಗವಾದರೆ, ಸಿದ್ಧಾಂತಗಳನ್ನು ಪ್ರತಿಪಾದಿಸುವ ಸಂಘಟನೆಗಳು ಮತ್ತೊಂದು ವರ್ಗಕ್ಕೆ ಸೇರುತ್ತವೆ. ಆದರೆ, ಕೋಮುವಾದಿ ವಿಚಾರಗಳನ್ನು ತಲೆಗೇರಿಸಿಕೊಂಡು ಬೀದಿಗಿಳಿದು ಹೊಡೆದಾಡುವವರು ಮಾತ್ರ ಕಸುಬುದಾರ ಜಾತಿಗಳವರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜೈಲಿಗೆ ಹೋಗುವುದು, ಕಾನೂನು ಸಂಘರ್ಷ ಎದುರಿಸುವುದು ಕೆಳವರ್ಗಗಳಿಗೆ ಸೇರಿದವರೇ ಹೊರತು, ಸಿದ್ಧಾಂತವನ್ನು ಪ್ರತಿಪಾದಿಸುವ ಮಠಾಧೀಶರಾಗಲಿ, ಸಂಘಟನೆಗಳಾಗಲಿ ಉತ್ತರದಾಯಿತ್ವ ಆಗುತ್ತಿಲ್ಲ ಎಂದು ಜಿ.ರಾಜಶೇಖರ್ ಹೇಳಿದರು.


Spread the love

Exit mobile version