ಸಂಘ ಸಂಸ್ಥೆಗಳು ಧ್ಯೇಯ ದೋರಣೆಗಳೊಂದಿಗೆ ಸಮಾಜದ ಮುಖ್ಯ ವಾಹಿನಿಗಳಾಗಲಿ: ಬಿಷಪ್
ಸಂತ ಕ್ರಿಸ್ಟೋಪರ್ ಎಸೋಷಿಯೇಷನ್ ಮಂಗಳೂರು ಇದರ ಪದಾಧಿಕಾರಿಗಳು ತಮ್ಮ ಸಂಸ್ಥೆಯ ಪೋಷಕರಾದ ಬಿಷಪ್ ರೆ|ಡಾ|ಪೀಟರ್ ಪಾವ್ಲ್ ಸಲ್ದಾನಾರವರನ್ನು ಭೇಟಿ ಮಾಡಿ ಅಬಿನಂದನೆಯನ್ನು ಸಲ್ಲಿಸಿದರು. ಸಂಸ್ಥಯು ಕಳೆದ 50 ವರುಷಗಳಿಂದ ನಡೆದು ಬಂದ ದಾರಿ ಹಾಗೂ ಕಾರ್ಯ ಚಟುವಟಿಕೆಗಳ ಬಗ್ಗೆ ಗೌರವ ಅಧ್ಯಕ್ಷರಾದ ಶ್ರಿ ಸುಶೀಲ್ ನೊರೊನ್ಹಾರವರು ಮಾಹಿತಿಯನ್ನು ನೀಡಿದರು. ಸಂಸ್ಥೆಯ ಮುಖಾಂತರ ಸ್ಥಾಪನೆಗೊಂಡ ಮ್ಯಾಕೊ ಸೊಸೈಟಿ ಹಾಗೂ ಪೆಟ್ರೋಲ್ ಬಂಕ್ ಹಾಗೂ ಸಂಸ್ಥಯು ನಡೆಸುವ ಹಾಸ್ಟೆಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಮ್ಮ ಧರ್ಮ ಪ್ರಾಂತ್ಯದಲ್ಲಿ ಹಲವು ಸಂಘ ಸಂಸ್ಥಗಳು ತಮ್ಮ ದ್ಯೇಯ ಧೋರಣೆಗಳೊಂದಿಗೆ ಕೆಲಸವನ್ನು ಮಾಡುತ್ತಿದ್ದು ಅದು ಒಗ್ಗಟ್ಟಿನಿಂದ ಸಮುದಾಯದ ಹಾಗೂ ಸಮಾಜದ ಮುಖ್ಯ ವಾಹಿನಿಯಾಗಿ ಕೆಲಸ ಮಾಡಬೇಕಾಗಿರುವುದು ಅಗತ್ಯ. ಪ್ರತ್ಯೇಕವಾಗಿ ಗ್ರಾಮೀಣ ಪ್ರದೇಶದಲ್ಲಿ ವಿಧ್ಯಾಭ್ಯಾಸ ಯುವಜನತೆಗೆ ಉದ್ಯೋಗದ ಲಭ್ಯತೆ, ಸ್ವ ಉದ್ಯೋಗ ಹಾಗೂ ಮೂಲ ಸೌಕರ್ಯಗಳಿಂದ ವಂಚಿತರಾಗಿರುವ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅತ್ಯಗತ್ಯ ಎಂದು ಹೇಳಿದರು.
ಆಧ್ಯಾತ್ಮಿಕ ನಿರ್ದೇಶಕರಾದ ಅತೀ ವಂ| ಜೆ.ಬಿ. ಕ್ರಾಸ್ತ ಗೌರವ ಅಧ್ಯಕ್ಷರಾದ ಶ್ರೀ ಸುಶೀಲ್ ನೊರೊನ್ಹ, ಅಧ್ಯಕ್ಷರಾದ ಶ್ರೀ ಫ್ರಾನ್ಸಿಸ್ ಡಿಸೋಜ ಕಾರ್ಯದರ್ಶಿ ನೈಜಿಲ್ ಪಿರೇರಾ, ಉಪಾಧ್ಯಕ್ಷರಾದ ಸಭಾಷ್ಟಿಯನ್ ನೊರೊನ್ಹ, ಸಹಕಾರ್ಯದರ್ಶಿ ಶ್ರೀಮತಿ ಲೀನಾ ಡಿಸೋಜ ಹಾಗೂ ಶ್ರೀ ಡೆನಿಸ್ ಲೋಬೊ, ಗ್ರೆಗೊರಿ ವೇಗಸ್, ಲಾವೇಟ್ ಡಿಸೋಜ ಉಪಸ್ಥಿತರಿದ್ದರು.