ಸಂಚಾರಿ ನಿಯಮಗಳ ಮಾಹಿತಿ ಪಡೆಯಲು ಮಕ್ಕಳಿಗೆ ‘ತೆರೆದ ಮನೆ’ ಪಾಠ
ಉಡುಪಿ: ಟ್ರಾಫಿಕ್ ಠಾಣೆಯಲ್ಲಿ ಪೊಲೀಸ್ ಇಲಾಖೆಯ ತೆರೆದ ಮನೆ ಕಾರ್ಯಕ್ರಮದ ಅಂಗವಾಗಿ ಕ್ರಿಶ್ಚಿಯನ್ ಹೈಸ್ಕೂಲ್ ಇದರ ಮಕ್ಕಳು ಠಾಣೆಗೆ ಭೇಟಿ ತಮ್ಮ ಸಂಶಯಗಳನ್ನು ಶನಿವಾರ ನಿವಾರಿಸಿಕೊಂಡರು.
ಟ್ರಾಫಿಕ್ ಪೊಲೀಸರು ಕರ್ತವ್ಯ ನಿರ್ವಹಿಸುವ ವ್ಯವಸ್ಥೆ ಹೇಗಿರುತ್ತದೆ: ಅಪಘಾತಗಳಾದಾಗ ಏನು ಮಾಡಬೇಕು? ಟ್ರಾಫಿಕ್ ನಿಯಮಗಳನ್ನು ಯಾವ ರೀತಿಯಲ್ಲಿ ಪಾಲಿಸಬೇಕು. ಅಪ್ರಾಪ್ತ ಮಕ್ಕಳು ವಾಹನ ಚಲಾವಣೆ ಮಾಡಬಾರದು ಯಾಕೆ ಎಂಬ ಕುರಿತು ಪೊಲೀಸ್ ಮಾಹಿತಿ ಪಡೆಯಲು ಮಕ್ಕಳ ಸ್ನೇಹಿ ವಾತಾವರಣ ಸೃಷ್ಟಿಸಲು ತೆರೆದ ಮನೆ ಕಾರ್ಯಕ್ರಮ ಆಯೋಜಿಸಲಾಗಿದ್ದು ಉಡುಪಿ ಡಿವೈಎಸ್ಪಿ ಪ್ರಭು ಡಿ ಟಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಠಾಣಾ ವ್ಯಾಪ್ತಿಯಲ್ಲಿ ಬರುವ ಶಾಲಾ ಮಕ್ಕಳನ್ನು ಠಾಣೆಗೆ ಕರೆತಂದು ಪೊಲೀಸ್ ಇಲಾಖೆ ಬಗ್ಗೆ, ಟ್ರಾಪಿಕ್ ನಿಯಮಗಳ ಬಗ್ಗೆ ವಿವರಾವಾದ ಮಾಹಿತಿ ನೀಡಲಾಯಿತು. ಈ ವೇಳೆ ಟ್ರಾಫಿಕ್ ಠಾಣಾಧಿಕಾರಿ ಜೊತೆ ಮಕ್ಕಳು ಸಂವಾದ ನಡೆಸಿದರು.
ಈ ವೇಳೆ ಉಡುಪಿ ಟ್ರಾಫಿಕ್ ಉಪನಿರೀಕ್ಷಕರಾದ ಸುದರ್ಶನ್ ದೊಡ್ಡಮನಿ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು