ಸಂಚಾರ ನಿಯಮ ಉಲ್ಲಂಘನೆ – ವಾಹನಾ ಚಾಲನಾ ಪರವಾನಿಗೆ ಅಮಾನತು – ದಕ ಜಿಲ್ಲಾ ಎಸ್ಪಿ ಎಚ್ಚರಿಕೆ

Spread the love

ಸಂಚಾರ ನಿಯಮ ಉಲ್ಲಂಘನೆ – ವಾಹನಾ ಚಾಲನಾ ಪರವಾನಿಗೆ ಅಮಾನತು – ದಕ ಜಿಲ್ಲಾ ಎಸ್ಪಿ ಎಚ್ಚರಿಕೆ

ಮಂಗಳೂರು: ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವ ವಾಹನ ಚಾಲಕರ ಚಾಲನಾ ಪರವಾನಗಿಗಳನ್ನು ಅಮಾನತಿನಲ್ಲಿರಿಸುವ ಎಚ್ಚರಿಕೆಯನ್ನು ದಕ ಜಿಲ್ಲಾ ಪೊಲೀಸ್ ಅಧೀಕ್ಷಕರು ನೀಡಿದ್ದಾರೆ.

ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವ ವಾಹನ ಚಾಲಕರ ಚಾಲನಾ ಪರವಾನಗಿಗಳನ್ನು ಅಮಾನತಿನಲ್ಲಿರಿಸುವ ಕುರಿತಂತೆ ಮಾನ್ಯ ಸರ್ವೋಚ್ಛ ನ್ಯಾಯಾಲಯದ ರಸ್ತೆ ಸುರಕ್ಷತಾ ಸಮಿತಿಯ ಸೂಚನೆಗಳನ್ನು ಪಾಲಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ತಿರ್ಮಾನಿಸಲಾಗಿದೆ, ದೇಶದಲ್ಲಿ ಹೆಚ್ಚುತ್ತಿರುವ ಸಂಚಾರ ನಿಯಮಗಳ ಉಲ್ಲಂಘನೆಗಳನ್ನು ಗಮನಿಸಿ ಅವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮಕ್ಕೆ ತೀರ್ಮಾನಿಸಿ, ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವವರ ಚಾಲನಾ ಪರವಾನಗಿಗಳನ್ನು 3 ತಿಂಗಳಿಗೆ ಕಡಿಮೆ ಇಲ್ಲದಂತೆ ರದ್ದು ಮಾಡಲು ಸೂಚಿಸಿರುತ್ತದೆ.

  • ಆದುದರಿಂದ ಈ ಕೆಳಕಂಡ ವಿಷಯಗಳಿಗೆ ಸಂಬಂಧಿಸಿದಂತೆ ಮೋಟಾರು ವಾಹನ ಕಾಯ್ದೆ 1988 ಉಲ್ಲಂಘನೆ ಮಾಡುವ ವಾಹನ ಚಾಲಕರ ವಿರುದ್ಧ ಸೆಕ್ಷನ್ 19 ಮತ್ತು ಕೇಂದ್ರ ಮೋಟಾರ್ ವಾಹನ ನಿಯಮ 1989 ರ ರೂಲ್ 21 ರ ಅಡಿಯಲ್ಲಿ ಕ್ರಮ ಕೈಗೊಂಡು ಕಡ್ಡಾಯವಾಗಿ ಅಂತಹ ವಾಹನ ಚಾಲಕರ ಚಾಲನಾ ಪರವಾನಗಿಗಳನ್ನು ಅಮಾನತಿನಲ್ಲಿರಿಸಲು ಸಂಬಂಧಪಟ್ಟ ಸಾರಿಗೆ ಅಧಿಕಾರಿಯವರಿಗೆ ವರದಿ ಸಲ್ಲಿಸಲು ತಿರ್ಮಾನಿಸಲಾಗಿರುತ್ತದೆ. ಆದುದರಿಂದ ಸಾರ್ವಜನಿಕರು
  • ಅತಿ ವೇಗದ ಚಾಲನೆ
  • ಗೂಡ್ಸ್ ವಾಹನಗಳಲ್ಲಿ ಮಿತಿಗಿಂತ ಹೆಚ್ಚಿನ ಭಾರ ಮತ್ತು ಜನರನ್ನು ಹೊತ್ತು ಸಾಗಿಸುವುದು.
  • ಮದ್ಯಪಾನ ಮಾಡಿ ಮತ್ತು ಮಾದಕ ದ್ರವ್ಯ ಸೇವನೆ ಮಾಡಿ ವಾಹನವನ್ನು ಚಲಾಯಿಸುವುದು.
  • ವಾಹನ ಚಲಾಯಿಸುವಾಗ ಮೊಬೈಲ್ ಫೋನಿನಲ್ಲಿ ಮಾತನಾಡುವುದು.
  • ಕೆಂಪು ದೀಪವನ್ನು ದಾಟಿ ವಾಹನವನ್ನು ಚಲಾಯಿಸುವುದು.
    ಹಾಗೂ ಮುಂತಾದ ಕಾನೂನು ಉಲ್ಲಂಘನೆ ಮಾಡುವವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧೀಕ್ಷಕರು ದಕ್ಷಿಣಕನ್ನಡ ಜಿಲ್ಲೆ ರವರು ತಿಳಿಸಿರುತ್ತಾರೆ.

Spread the love
1 Comment
Inline Feedbacks
View all comments
5 years ago

Wrong side driving and heavy vehicles, two wheelers driving in the fast lane should also be included in this.