ಸಂಜೀವ್ ಪಾಟೀಲ್ , ವಿಷ್ಣುವರ್ಧನ್ ಸೇರಿದಂತೆ 23 ಮಂದಿಗೆ ಐಪಿಎಸ್ ಭಡ್ತಿ

Spread the love

ಸಂಜೀವ್ ಪಾಟೀಲ್ , ವಿಷ್ಣುವರ್ಧನ್ ಸೇರಿದಂತೆ 23 ಮಂದಿಗೆ ಐಪಿಎಸ್ ಭಡ್ತಿ

ಮಂಗಳೂರು: ಮಂಗಳೂರಿನ ಹಿಂದಿನ ಡಿಸಿಪಿ ಸಂಜೀವ್ ಪಾಟೀಲ್, ಹಾಗೂ ಪ್ರಸ್ತುತ ಸಹಾಯಕ ಪೋಲಿಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ಸೇರಿದಂತೆ ರಾಜ್ಯದ 23 ಮಂದಿ ಕರ್ನಾಟಕ ರಾಜ್ಯ ಪೋಲಿಸ್ ಸೇವೆ (ಕೆಎಸ್ಪಿಎಸ್) ಅಧಿಕಾರಿಗಳಿಗೆ ಐಪಿಎಸ್ ಶ್ರೇಣಿಗೆ ಭಡ್ತಿ ನೀಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.

ಭಡ್ತಿ ಪಡೆದವರ ಪಟ್ಟಿ ಇಂತಿದೆ; ಸಿ.ಕೆ. ಬಾಬಾ, ಎಸ್. ಗಿರೀಶ್, ಜಿನೇಂದ್ರ ಕಣಗಾವಿ, ಜೋಶಿ ಶ್ರೀನಾಥ್ ಮಹದೇವ್, ಅಬ್ದುಲ್ ಅಹದ್, ಸಿ.ಬಿ.ವೇದಮೂರ್ತಿ, ಕೆ.ಎಂ.ಶಾಂತರಾಜು, ಹನುಮಂತರಾಯ, ಡಿ.ದೇವರಾಜು, ಡಿ.ಆರ್.ಸಿರಿಗೌರಿ, ಡಾ. ಕೆ.ಧರಣಿದೇವಿ, ಎಸ್.ಸವಿತಾ, ಎಂ. ಪುಟ್ಟಮಾದಯ್ಯ, ಟಿ.ಶ್ರೀಧರ, ಎಂ.ಅಶ್ವಿನಿ, ಎ.ಎನ್.ಪ್ರಕಾಶ್ ಗೌಡ, ಜೆ.ಕೆ.ರಶ್ಮಿ, ಟಿ.ಪಿ.ಶಿವಕುಮಾರ್, ಎನ್. ವಿಷ್ಣುವರ್ಧನ್, ಸಂಜೀವ್ ಎಂ.ಪಾಟೀಲ್, ಕೆ. ಪರಶುರಾಮ್, ಎಚ್. ಡಿ. ಆನಂದ್ ಕುಮಾರ್, ಕಲಾಕೃಷ್ಣಮೂರ್ತಿ ಅವರಿಗೆ ಐಪಿಎಸ್ ಭಡ್ತಿ ನೀಡಲಾಗಿದೆ ಎಂದು ಕೇಂದ್ರ ಸರಕಾರದ ಪ್ರಕಟಣೆ ತಿಳಿಸಿದೆ.


Spread the love