ಉಡುಪಿ: ತಾಲೂಕಿನ ಮೌಂಟ್ ರೋಜರಿ ಆಂಗ್ಲ ಮಾಧ್ಯಮ ಶಾಲೆ ಸಂತೆಕಟ್ಟೆ ಕಲ್ಯಾಣಪುರ ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೇ 100 ಸಾಧನೆ ಮಾಡಿದೆ. ಈ ಮೂಲಕ ಸತತ ಐದನೇ ಬಾರಿ ಈ ಸಾಧನೆಯನ್ನು ಮಾಡಿದ ಕೀರ್ತಿಗೆ ಶಾಲೆ ಪಾತ್ರವಾಗಿದೆ.
ಪರೀಕ್ಷೆಗೆ ಹಾಜರದ 77 ವಿದ್ಯಾರ್ಥಿಗಳ ಪೈಕಿ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಈ ಸಾಧನೆಯನ್ನು ಮಾಡಿದ್ದು, 10 ವಿದ್ಯಾರ್ಥಿಗಳು 90% ಕ್ಕಿಂತ ಅಧಿಕ ಅಂಕಗಳನ್ನು ಪಡೆದಿರುತ್ತಾರೆ.
ಶ್ರೇಯ ಆರ್ (96.48%), ದಿವ್ಯಾ ಡಿ ಶೆಟ್ಟಿ (95.68%), ನಿಶ್ಮಿತಾ ಸುವರ್ಣ (95.40%), ನಿಕಿತಾ ಶ ರಾವ್ (92.96%), ರಾಹುಲ್ ರಾಜ್ (92.64%), ಸೂರಜ್ (92.48%), ಮರಿಯಾ ಮೆಂಡೊನ್ಸಾ (91.84%), ಸಮೀಕ್ಷಾ ಶೆಟ್ಟಿ (91.68%), ಅಭೀಷೇಕ್ ನಾಯ್ಕ್ (90%), ಮಹೀಮಾ ಶೇರಿಗಾರ್ (90%) ಅತ್ಯಧಿಕ ಅಂಕ ಪಡೆದು ತೇರ್ಗಡೆ ಹೊಂದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಸಂಚಾಲಕರಾದ ವಂ ಫಿಲಿಪ್ ನೆರಿ ಆರಾನ್ಹಾ, ಸಹಾಯಕ ಧರ್ಮಗುರು ವಂ ಮಹೇಶ್ ಡಿ’ಸೋಜಾ, ಪಾಲನ ಸಮಿತಿಯ ಉಪಾಧ್ಯಕ್ಷ ಜೆರಿ ವಿನ್ಸೆಂಟ್ ಡಾಯಸ್, ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಎಡ್ರಿಯನ್ ಸೆರಾವೊ ಹಾಗೂ ಶಾಲಾ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದ್ದಾರೆ.