ಸಂತ ಅಂತೋನಿ ಆಶ್ರಮದಲ್ಲಿ ಕೃತಜ್ಞತಾ ದಿನ ಆಚರಣೆ

Spread the love

ಸಂತ ಅಂತೋನಿ ಆಶ್ರಮದಲ್ಲಿ ಕೃತಜ್ಞತಾ ದಿನ ಆಚರಣೆ

ವರದಿ ಮತ್ತು ಚಿತ್ರಗಳು: ಫಾ| ಅನಿಲ್ ಫೆರ್ನಾಂಡಿಸ್

ಮಂಗಳೂರು: ಮಂಗಳೂರು ಜೆಪ್ಪುವಿನ ಸಂತ ಅಂತೋನಿ ಚಾರಿಟೇಬಲ್ ಸಂಸ್ಥೆಗಳಿಗೆ ಸಹಾಯಾಧರ ನೀಡುವ ದಾನಿಗಳನ್ನು ಸ್ಮರಿಸಿ ಕೃತಜ್ಞತಾ ದಿನವನ್ನು 2024ರ ಏಪ್ರಿಲ್ 21ರ ಭಾನುವಾರದಂದು ಜೆಪ್ಪುವಿನ ಸಂತ ಅಂತೋನಿ ಚಾಪೇಲ್‌ನಲ್ಲಿ ದಿವ್ಯ ಬಲಿಪೂಜೆಯೊಂದಿಗೆ ಆಚರಿಸಲಾಯಿತು.

ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಧರ್ಮಾಧ್ಯಕ್ಷಾರಾದ ರೈ| ರೆ| ಅಲೋಶಿಯಸ್ ಪಾವ್ಲ್ ಡಿಸೋಜಾರವರು ಸಂಸ್ಥೆಯ ಮೇಲೆ ತೋರಿದ ಕೃಪಾವರಗಳಿಗೆ ದೇವರಿಗೆ ಸ್ತೋತ್ರ ಸಲ್ಲಿಸಿ ದಿವ್ಯ ಬಲಿಪೂಜೆಯನ್ನು ಆರ್ಪಿಸಿದರು. ಸಂಸ್ಥೆಯ ನಿರ್ದೇಶಕ ಫಾದರ್ ಜೆ.ಬಿ.ಕ್ರಾಸ್ತಾ, ಆತ್ಮೀಕ ನಿರ್ದೆಶಕರಾದ ಫಾದರ್ ಗಿಲ್ರ‍್ಟ್ ಡಿಸೋಜಾ, ಸಹಾಯಕ ನಿರ್ದೇಶಕ ಫಾದರ್ ಆವಿನಾಶ್ ಪಾಯ್ಸ್, ಫಾದರ್ ನೆಲ್ಸನ್ ಪೆರೀಸ್ ಹಾಗೂ ಕೆನರಾ ಕಮ್ಯೂನಿಕೇಶನ್ ಸಂಸ್ಥೆಯ ನಿರ್ದೆಷಕರಾದ ಫಾದರ್ ಆನಿಲ್ ಫೆರ್ನಾಂಡಿಸ್ ಬಲಿಪೂಜೆಯಲ್ಲಿ ಉಪಸ್ಥಿತರಿದ್ದರು.

‘ಸಂಭ್ರಮ’ ಸಭಾಂಗಣದಲ್ಲಿ ನಡೆದ ಕಿರು ಸನ್ಮಾನ ಕಾರ್ಯಕ್ರಮದಲ್ಲಿ ಸಂಸ್ಥೆಗೆ ಸೇವೆ ಸಲ್ಲಿಸಿದ ದಾನಿಗಳು, ಹಿತಚಿಂತಕರು, ಹಾಗೂ ಹಿತೈಷಿಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಂಗಳೂರಿನ ಕೆನರಾ ಕಮ್ಯೂನೀಕೇಶನ್ ಸೆಂಟರ್ ಮಾರ್ಗದರ್ಶನದಲ್ಲಿ ತಯಾರಿಸಲ್ಪಟ್ಟ, ಸಚಿತ ಅಂತೋನಿ ಚಾರಿಟೇಬಲ್ ಸಂಸ್ಥೆಗಳು ಮೂಡಿ ಬಂದ ಚರಿತ್ರೆೆಯನ್ನು ಒಳಗೊಂಡ ಕಿರುಚಿತ್ರವನ್ನು ಬಿಷಪ್ ಅಲೋಶಿಯಸ್ ಪಾವ್ಲ್ ಬಿಡುಗಡೆಗೋಳಿಸಿದರು.

ಕಾರ್ಯಕ್ರಮದ ಆಧ್ಯಕ್ಷರಾಗಿ ಧರ್ಮಾಧ್ಯಕ್ಷಾರಾದ ರೈ| ರೆ| ಅಲೋಶಿಯಸ್ ಪಾವ್ಲ್ ಡಿಸೋಜಾ ಮತ್ತು ಮುಖ್ಯ ಅತಿಥಿಯಾಗಿ ಶ್ರೀ ಮಾರ್ಸೆಲ್ ಮೊಂತೇರೊ ಅವರು ಸಂಸ್ಥೆಯ ನಿರ್ದೇಶಕರುಗಳೊಂದಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಿಷಪ್ ಅಲೋಶಿಯಸ್ ಪಾವ್ಲ್ ಆವರು ಮಾತಾನಾಡಿ, “ಇಂದು, ಈ ದಿನವನ್ನು ಆಚರಿಸಲು ಬಂದಿರುವುದು ಗುರುತಿಸಲ್ಪಡುವ ಉದ್ದೇಶದಿಂದಲ್ಲ, ಬದಲಾಗಿ ಹೃದಯ ಮತ್ತು ಮನಸ್ಸಿನ ಉದಾರತೆಗೆ ಭಗವಂತನಿಗೆ ಧನ್ಯವಾದ ಹೇಳಲು ಮತ್ತು ಈ ಸಂಸ್ಥೆಯ ಬಗ್ಗೆ ನಮ್ಮಲ್ಲಿರುವ ಪ್ರೀತಿಯನ್ನು ತೋರಿಸಲು. ಯೇಸುವಿನ ಅತೀ ಸಣ್ಣ ಸಹೋದರ-ಸಹೋದರಿಗೆ ಸ್ವಇಚ್ಛೆಯಿಂದ ಮತ್ತು ಉದಾರವಾಗಿ ಕೊಡುಗೆ ನೀಡುವವರು ಸರಿಯಾದ ಸಮಯದಲ್ಲಿ ತಮ್ಮ ಪ್ರತಿಫಲವನ್ನು ಕಂಡುಕೊಳ್ಳುತ್ತಾರೆ ಮತ್ತು ದೇವರು ಅವರನ್ನು ಹೇರಳವಾಗಿ ಆಶೀರ್ವದಿಸುತ್ತಾನೆ.” ಎಂದು ಹೇಳಿದರು.

ಫಾದರ್ ಜೆ ಬಿ ಕ್ರಾಸ್ತಾ ಸ್ವಾಗತಿಸಿ, ಫಾದರ್ ಅವಿನಾಶ್ ಪಾಯ್ಸ್ ವಂದಿಸಿದರು. ಫಾದರ್ ಗಿಲ್ರ‍್ಟ್ ಡಿಸೋಜಾ ಊಟಕ್ಕೂ ಮುನ್ನ ಪ್ರಾರ್ಥನೆ ಮಾಡಿದರು.


Spread the love