ಸಂತ ಅಲೋಶಿಯಸ್ ಕಾಲೇಜು ಕೊಂಕಣಿ ಸಂಘ ವಿದ್ಯಾರ್ಥಿಗಳ ಭೇಟಿ

Spread the love

ಸಂತ ಅಲೋಶಿಯಸ್ ಕಾಲೇಜು ಕೊಂಕಣಿ ಸಂಘ ವಿದ್ಯಾರ್ಥಿಗಳ ಭೇಟಿ

ವಿಶ್ವ ಕೊಂಕಣಿ ಕೇಂದ್ರಕ್ಕೆ ಸಂತ ಅಲೋಶಿಯಸ್ ಕಾಲೇಜು ಕೊಂಕಣಿ ಸಂಘದ 102 ಸದಸ್ಯ ವಿದ್ಯಾರ್ಥಿಗಳು ದಿನಾಂಕ 26-07-2019 ರಂದು ವಿಶ್ವ ಕೊಂಕಣಿ ಕೇಂದ್ರ ಕ್ಕೆ ಭೇಟಿ ನೀಡಿದರು.

ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕ ಅಧ್ಯಕ್ಷ ಬಸ್ತಿ ವಾಮನ ಶೆಣೈ, ವಿಶ್ವ ಕೊಂಕಣಿ ಕೇಂದ್ರವು ಹಮ್ಮಿಕೊಂಡಿರುವ ಅಭಿವೃದ್ಧಿ ಬಗ್ಗೆ ಮತ್ತು ಕೈಗೊಂಡ ಕಾರ್ಯಗಳ ಬಗ್ಗೆ ಹಾಗೂ “ವಿಶ್ವ ಕೊಂಕಣಿ ಕೇಂದ್ರವು ರೂಪಿಸಿರುವ “ವಿಜನ್ ಕೊಂಕಣಿ ಸಮಾಜ -2030” ವಿವರಣೆ ನೀಡಿದರು.

ಸಂತ ಅಲೊಶಿಯಸ್ ಕೊಂಕಣಿ ಸಂಘದ ಅಧ್ಯಕ್ಷೆ ಶ್ರೀಮತಿ ರೆನಿಟಾ ಅರಾನ್ಹಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳೆಲ್ಲರೂ ವಿಶ್ವ ಕೊಂಕಣಿ ವಾಚನಾಲಯ, ವಿಶ್ವ ಕೊಂಕಣಿ ಮ್ಯೂಸಿಯಮ್, ವಿಶ್ವ ಕೊಂಕಣಿ ಕೀರ್ತಿ ಮಂದಿರ, ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು,

ಕೊಂಕಣಿ ಸಂಘದ ಸಿಸ್ಟರ್ ಟ್ರೆನಿಟಾ ಫೆರಾವೊ ಮತ್ತು ಡಿಯೋನ್ ಫೆರ್ನಾಂಡಿಸ್ ತಮ್ಮ ಅಭಿಪ್ರಾಯಗಳನ್ನು ಹೇಳಿದರು. ಸಂತ ಅಲೋಶಿಯಸ್ ಕಾಲೇಜು ಕೊಂಕಣಿ ಸಂಘದ ಅಧ್ಯಕ್ಷೆ ಶ್ರೀಮತಿ ಫ್ಲೋರಾ ಕ್ಯಾಸ್ಟಲಿನೊ ಸ್ವಾಗತಿಸಿದರು. ಕೊಂಕಣಿ ಸಂಘದ ಸದಸ್ಯೆ ಸಲೊಮಿ ಅಲ್ವಾರಿಸ್ ಧನ್ಯವಾದ ಸಮರ್ಪಿಸಿದರು.


Spread the love