Home Mangalorean News Kannada News ಸಂತ ಅಲೋಶಿಯಸ್ ಪ್ರೌಢಶಾಲಾ ಚುನಾವಣೆ; ಅಧ್ಯಕ್ಷರಾಗಿ ಜೆಸಿಮ್ ಅಹ್ಮದ್ ಸಿರಾಜ್ ಆಯ್ಕೆ

ಸಂತ ಅಲೋಶಿಯಸ್ ಪ್ರೌಢಶಾಲಾ ಚುನಾವಣೆ; ಅಧ್ಯಕ್ಷರಾಗಿ ಜೆಸಿಮ್ ಅಹ್ಮದ್ ಸಿರಾಜ್ ಆಯ್ಕೆ

Spread the love

ಸಂತ ಅಲೋಶಿಯಸ್ ಪ್ರೌಢಶಾಲಾ ಚುನಾವಣೆ; ಅಧ್ಯಕ್ಷರಾಗಿ ಜೆಸಿಮ್ ಅಹ್ಮದ್ ಸಿರಾಜ್ ಆಯ್ಕೆ

ಮಂಗಳೂರು: ಸಂತ ಅಲೋಶಿಯಸ್ ಪ್ರೌಢಶಾಲೆ, ಕೊಡಿಯಾಲ್‍ಬೈಲ್, ಮಂಗಳೂರು, ಇಲ್ಲಿ ಶೈಕ್ಷಣಿಕ ವರ್ಷ 2018-19ರ ಶಾಲಾ ಚುನಾವಣೆ ಶನಿವಾರ ನಡೆಯಿತು.

ಶಾಲಾ ಅಧ್ಯಕ್ಷ ಸ್ಥಾನಕ್ಕೆ – ಮಾಸ್ಟರ್ ಜೆಸಿಮ್ ಅಹ್ಮದ್ ಸಿರಾಜ್, ಉಪಾಧ್ಯಕ್ಷ ಸ್ಥಾನಕ್ಕೆ ಮಾಸ್ಟರ್ ಪರಶುರಾಮ್ ಬಿ.ಎಂ. ಹಾಗೂ ಕಾರ್ಯದರ್ಶಿ ಸ್ಥಾನಕ್ಕೆ ಮಾಸ್ಟರ್ ಶೇನ್ ಡಿಯೋನ್ ನೊರೋನ್ಹಾ ಆಯ್ಕೆಯಾದರು.

ಹತ್ತನೇ ತರಗತಿಗಳ ಹಿತಾಂಶ್ ಹೆಚ್. ಶೆಣೈ, ಜೆಸಿಮ್ ಅಹ್ಮದ್ ಸಿರಾಜ್ , ಮಾನಸ ಶೆರೀನ್ ಡಿ’ಕೋಸ್ತಾ , ಪರಶುರಾಮ್ ಬಿ.ಎಂ., ಸಮಂತಾ ದಿಯಾ ಸೋನ್ಸ್, ಶೇನ್ ಡಿಯೋನ್ ನೊರೋನ್ಹಾ, ಶರ್ಲಿನ್ ಜೆ. ಮಾಬೆನ್ , ವೆನಿಸಾ ರಿಯಾ ಡಿ’ಸೋಜಾ ಎಂಟು ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು.

ಗುರು ವೃಂದ ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಈ ಅಭ್ಯರ್ಥಿಗಳು ಮಾತನಾಡಿ ಬಳಿಕ, ಚುನಾವಣಾ ಪ್ರಕ್ರಿಯೆ ಆರಂಭಗೊಂಡಿತು.

ಶಾಂತ ರೀತಿಯಲ್ಲಿ ನಡೆದ ಗೌಪ್ಯ ಮತದಾನ ಪ್ರಕ್ರಿಯೆಯಲ್ಲಿ, ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿ ಭಾಗವಹಿಸಿದರು. ಮುಖ್ಯ ಚುನಾವಣಾಧಿಕಾರಿಯಾಗಿ ಶಾಲಾ ಮುಖ್ಯೋಪಾದ್ಯಾಯರು ರೆ| ಫಾ| ಜೆರಾಲ್ಡ್ ಪುರ್ಟಾಡೊ ಎಸ್.ಜೆ., ಚುನಾವಣಾಧಿಕಾರಿಯಾಗಿ ಶಿಕ್ಷಕ ಶ್ರೀ ಪ್ರವೀಣ್ ಕುಟಿನ್ಹಾ ಕಾರ್ಯನಿರ್ವಹಿಸಿದರು. ಉಪಮುಖ್ಯೋಪಾಧ್ಯಾಯರು ಗೋಪಾಲ ಕೃಷ್ಣ ಎಸ್. ಸಹಕರಿಸಿದರು.

ವಿನೂತನ ರೀತಿಯಲ್ಲಿ ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನು ನೇರಪ್ರಸಾರದ ರೀತಿಯಲ್ಲಿ ಎಲೊಯ್ ಟಿ.ವಿ. ಮೂಲಕ ನಡೆಸಿಕೊಡಲಾಯಿತು. ಇದರಲ್ಲಿ, ಚುನಾವಣಾಧಿಕಾರಿಗಳು, ಶಿಕ್ಷಕರು, ಅಭ್ಯರ್ಥಿಗಳು ಹಾಗೂ ವಿದ್ಯಾರ್ಥಿಗಳ ನೇರ ಸಂದರ್ಶನ ನಡೆಸಲಾಯಿತು. ಸಂಪೂರ್ಣ ಪ್ರಕ್ರಿಯೆಯನ್ನು ಶಾಲಾ ಶಿಕ್ಷಕ ಶ್ರೀ ಲ್ಯಾನ್ಸಿ ಡಿ’ಸೋಜ ಸಮರ್ಪಕವಾಗಿ ನಿರ್ವಹಿಸಿದರು. ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.


Spread the love

Exit mobile version