ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಹಬ್ಬಕ್ಕೆ ನವೇನ ಪ್ರಾರ್ಥನೆ ಆರಂಭ

Spread the love

ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಹಬ್ಬಕ್ಕೆ ನವೇನ ಪ್ರಾರ್ಥನೆ ಆರಂಭ

ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಹಬ್ಬಕ್ಕೆ ತಯಾರಿಯಾಗಿ ಒಂಬತ್ತು ದಿನಗಳ ನವೇನ ಪ್ರಾರ್ಥನೆ ವಾಹನಗಳ ಮೆರವಣಿಗೆ ಮತ್ತು ಧ್ವಜಾರೋಹಣೆಯೊಂದಿಗೆ ಪ್ರಾರಂಭಗೊಂಡಿತು. ಜೆಪ್ಪು ಸಂತ ಆಂತೋನಿ ಆಶ್ರಮದಿಂದ ಕಂಕನಾಡಿ, ಫಳ್ನೀರ್ ದಾರಿಯಾಗಿ ಮಿಲಾಗ್ರಿಸ್ ಚರ್ಚ ತನಕ ಶೃಂಅಗರಿಸಲಾದ ಸಂತ ಆಂತೋನಿಯವರ ಪ್ರತಿಮೆಯನ್ನು ಮೆರವಣಿಗೆಯಲ್ಲಿ ತರಲಾಯ್ತು. ತದನಂತರ ವಂ. ಫಾ. ಫ್ರಾಂಕ್ಲಿನ್ ಡಿ’ಸೋಜ ಸಂತ ಆಂತೋನಿಯವರ ಧ್ವಜಾರೋಹಣ ಮಾಡಿದರು.

ಶಿಮೊಗ್ಗ ಧರ್ಮಪ್ರಾಂತ್ಯದ ವಂ. ಫಾ. ಫ್ರಾಂಕ್ಲಿನ್ ಡಿ’ಸೋಜರವರು ಮೊದ¯ ದಿನದ ಬಲಿಪೂಜೆಯನ್ನು ಧಾರ್ಮಿಕರಿಗಾಗಿ ಅರ್ಪಿಸಿದರು. ಧಾರ್ಮಿಕರು ಯೇಸುಸ್ವಾಮಿಯ ಕರೆಗೆ ಓಗೊಟ್ಟು ಪ್ರಪಂಚದ ವಿವಿಧ ಕಡೆಗಳಲ್ಲಿ ತಮ್ಮನ್ನೇ ತೊಡಗಿಸಿಕೊಂಡು ದುಡಿಯುತ್ತಾರೆ. ಅವರಿಗಾಗಿ ದೇವರ ಆಶೀರ್ವಾದಗಳನ್ನು ಬಲಿಪೂಜೆಯ ಸಮಯದಲ್ಲಿ ಬೇಡಿಕೊಂಡರು. ಫಾ. ಒನಿಲ್ ಡಿ’ಸೋಜ ಪುಣ್ಯ ಕ್ಷೇತ್ರದ ನಿರ್ದೇಹಕರು ಮೊದಲ ದಿನದ ನವೇನ ಪ್ರಾರ್ಥನೆ ನಡೆಸಿಕೊಟ್ಟರು. ವಂ. ಫಾ. ಫ್ರಾನ್ಸಿಸ್ ಡಿ’ಸೋಜ, ಫಾ. ಪೀಟರ್ ಗೊನ್ಸಾಲ್ವಿಸ್, ಶ್ರೀ ವಿನ್ಸೆಂಟ್ ಮಸ್ಕರೇನ್ಹಸ್ ಹಾಗೂ ಸಾವಿರ ಮೇಲ್ಪಟ್ಟು ಭಕ್ತಾದಿಗಳು ಈ ದಿನದ ಭಕ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.


Spread the love